ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧದಲ್ಲಿ ಮಹತ್ವದ ಸಾಕ್ಷಿ ಲಭ್ಯ, ಚಿನ್ನಯ್ಯನ ಮೊಬೈಲ್ ವಶಕ್ಕೆ

| N/A | Published : Aug 27 2025, 04:47 AM IST

Mahesh Shetty Timarodi
ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧದಲ್ಲಿ ಮಹತ್ವದ ಸಾಕ್ಷಿ ಲಭ್ಯ, ಚಿನ್ನಯ್ಯನ ಮೊಬೈಲ್ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳ ತಂಡ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ. ಈ ಪೈಕಿ ಚಿನ್ನಯ್ಯ ಅಲಿಯಾಸ್ ಮಾಸ್ಕ್ ಮ್ಯಾನ್ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಬೆಳ್ತಂಗಡಿ :  ಧರ್ಮಸ್ಥಳ ವಿರುದ್ಧ ನಡೆದ ಅತೀ ದೊಡ್ಡ ಷಡ್ಯಂತ್ರದ ಅಸಲಿ ಕತೆಗಳು ಹೊರಬರುತ್ತಿದೆ. ದೂರುದಾರನಾಗಿ ಬಂದ ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯ ಇದೀಗ ಆರೋಪಿಯಾಗಿ ಪೊಲೀಸರ ಕಸ್ಟಡಿಯಲ್ಲಿದ್ದಾನೆ. ಈತನ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳನ್ನು ಎಸ್ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ಈ ಮಾಹಿತಿ ಆಧರಿಸಿ ಇಂದು ಎಸ್ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮೇಲೆ ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ. ಸರ್ಚ್ ವಾರೆಂಟ್ ಪಡೆದು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಪರಿಶೀಲನಕ್ಕೆ ಇಳಿದ ಎಸ್ಐಟಿ ಅಧಿಕಾರಿಗಳಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ. ಈ ಸರ್ಚ್ ವೇಳೆ ಚಿನ್ನಯ್ಯನ ಮೊಬೈಲ್‌ನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ತಿಮರೋಡಿ ಮನೆಯಿಂದ ಮೊಬೈಲ್ ವಶಕ್ಕೆ

ವಿಚಾರಣೆ ವೇಳೆ ಚಿನ್ನಯ್ಯ ತನ್ನ ಮೊಬೈಲ್ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿದೆ. ನನ್ನ ಬಳಿ ಇಲ್ಲ ಎಂದು ಹೇಳಿಕೆ ನೀಡಿದ್ದ. ಇದೀಗ ವಿಚಾರಣೆ ವೇಳೆ ಚಿನ್ನಯ್ಯನ ಮೊಬೈಲ್ ಪತ್ತೆಯಾಗಿದೆ. ಚಿನ್ನಯ್ಯನ ಮೊಬೈಲ್ ವಶಕ್ಕೆ ಪಡೆದಿರುವ ಎಸ್ಐಟಿ ತಂಡ ಕಳೆದ ಒಂದು ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಚಿನ್ನಯ್ಯನಿಗೆ ತಂಗಲು ಕೊಠಡಿ ನೀಡಿದ್ದ ತಿಮರೋಡಿ

ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಪಕ್ಕದಲ್ಲೇ ಇರುವ ಅವರ ಸಹೋದರ ಮೋಹನ್ ಕುಮಾರ್ ಮನೆಯಲ್ಲಿ ಚಿನ್ನಯ್ಯನಿಗೆ ತಂಗಲು ಕೊಠಡಿ ನೀಡಲಾಗಿತ್ತು ಅನ್ನೋ ಮಾಹಿತಿಯನ್ನು ಚಿನ್ನಯ್ಯ ಬಹಿರಂಗಪಡಿಸಿದ್ದ. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಮೋಹನ್ ಕುಮಾರ್ ಶೆಟ್ಟಿ ಮನೆಯಲ್ಲೂ ಶೋಧ ಕಾರ್ಯ ನಡೆಸಲಾಗುತ್ತಿದೆ. ತಿಮರೋಡಿ ಅವರ ನಿವೇಶನ ಸೇರಿದಂತೆ ಎಲ್ಲಾ ಕಡೆ ದಾಳಿ ನಡೆಸಿದ್ದಾರೆ.

ಸಿಸಿಟಿವಿ, ಹಾರ್ಡ್ ಡಿಸ್ಕ್ ವಶಕ್ಕೆ

ಮಹೇಶ್ ಶೆಟ್ಟಿ ತಿಮರೋಡಿ, ಸಹೋದರ ಮೋಹನ್ ಕುಮಾರ್ ಮನೆಯಲ್ಲಿದ್ದ ಸಿಸಿಟಿವಿ ಹಾಗೂ ಹಾರ್ಡ್ ಡಿಸ್ಕ್‌ಗಳನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚಿನ್ನಯ್ಯ ಹೇಳಿದಂತೆ ಮಹೇಶ್ ಶೆಟ್ಟಿ ಮನೆಯಲ್ಲಿ ಉಳಿದುಕೊಂಡಿರುವ ಬಗ್ಗೆ, ಇಲ್ಲಿಗೆ ಭೇಟಿ ನೀಡಿದವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಎಸ್ಐಟಿ ಅಧಿಕಾರಿಗಳು ಹಾರ್ಡ್ ಡಿಸ್ಕ್ ಕೂಡ ವಶಕ್ಕೆ ಪೆಡದಿದ್ದಾರೆ. ಇದರಲ್ಲಿನ ವಿಡಿಯೋ ಡಿಲೀಟ್ ಮಾಡಿದ್ದರೆ, ಮಹೇಶ್ ಶೆಟ್ಟಿಗೆ ಕಂಟಕ ಮತ್ತಷ್ಟು ಹೆಚ್ಚಾಗಲಿದೆ.

25 ವಿಡಿಯೋ ಚಿತ್ರೀಕರಿಸಿದ್ದ ಬುರುಡೆ ಗ್ಯಾಂಗ್

ಚಿನ್ನಯ್ಯನ ಮುಂದೆ ಬಿಟ್ಟು ಹಿಂದಿನಿಂದ ಬುರುಡೆ ಗ್ಯಾಂಗ್ ಭಾರಿ ಷಡ್ಯಂತ್ರ ನಡೆಸಲಾಗಿತ್ತು. ಪ್ರತಿ ದಿನ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಪ್ಲಾನ್ ಮಾಡುತ್ತಿತ್ತು. ಇದರ ನಡುವೆ 25 ವಿಡಿಯೋಗಳನ್ನು ಈ ಗ್ಯಾಂಗ್ ಚಿತ್ರೀಕರಣ ಮಾಡಲಾಗಿದೆ ಅನ್ನೋ ಸ್ಫೋಟಕ ಮಾಹಿತಿಯನ್ನು ಚಿನ್ನಯ್ಯ ಬಾಯ್ಬಿಟ್ಟಿದ್ದಾರೆ. ಈ ಪೈಕಿ ಮೂರು ಸಂದರ್ಶನ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಮಾಡಲಾಗಿದೆ. ಇನ್ನೂ 22 ವಿಡಿಯೋಗಳಿವೆ ಎಂದು ಚಿನ್ನಯ್ಯ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ.

ಹಲವು ದಿನಗಳಿಂದ ಭಾರಿ ಪ್ಲಾನ್ ಈ ಷಡ್ಯಂತ್ರ ರೂಪಿಸಲಾಗಿತ್ತು ಅನ್ನೋ ಮಾಹಿತಿಯನ್ನು ಚಿನ್ನಯ್ಯ ಹೇಳಿದ್ದಾನೆ. ಚಿನ್ನಯ್ಯ ಹೇಳಿರುವ ಮಾಹಿತಿಗಳ ಆಧರಿಸಿ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಭಾರಿ ಶೋಧ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಎಸ್ಐಟಿ ಅಧಿಕಾರಿಗಳು ಸರ್ಚ್ ವಾರೆಂಟ್ ಕೂಡ ಪಡೆದಿದ್ದಾರೆ. ಸರ್ಚ್ ವಾರೆಂಟ್ ಕಾರಣದಿಂದ ಎಸ್ಐಟಿ ಶೋಧ ಕಾರ್ಯ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಲಿದೆ. ಈಗಾಗಲೇ ಹಲವು ಸಾಕ್ಷ್ಯಗಳನ್ನು ಎಸ್ಐಟಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ.

Read more Articles on