ಸಾರಾಂಶ
ಪದ್ಮಶ್ರೀ ಪ್ರಶಸ್ತಿ ವಿಜೇತ, ‘ಕನ್ನಡಪ್ರಭ’ ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರ ಧರ್ಮಪತ್ನಿ ಮೈಮುನಾ (57) ಅವರು ಅಸೌಖ್ಯದಿಂದ ಶನಿವಾರ ಸಂಜೆ ನಿಧನರಾದರು.
ಕೊಣಾಜೆ: ಪದ್ಮಶ್ರೀ ಪ್ರಶಸ್ತಿ ವಿಜೇತ, ‘ಕನ್ನಡಪ್ರಭ’ ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರ ಧರ್ಮಪತ್ನಿ ಮೈಮುನಾ (57) ಅವರು ಅಸೌಖ್ಯದಿಂದ ಶನಿವಾರ ಸಂಜೆ ನಿಧನರಾದರು.
ಇವರು ಕಳೆದ ಹಲವಾರು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ಪತಿ ಹಾಜಬ್ಬ, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.