ಸಾರಾಂಶ
ಟಿಬೇಟಿಯನ್ ಧಾರ್ಮಿಕ ಗುರುಗಳಾದ 14ನೇ ದಲೈಲಾಮ ಅವರು ಬೈಲುಕುಪ್ಪೆಯ ಲಾಮಾ ಕ್ಯಾಂಪಿನಲ್ಲಿರುವ ಸೆರಾ ಲಾಚಿ ಬೌದ್ಧ ಕೇಂದ್ರಕ್ಕೆ ಭೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಟಿಬೆಟಿಯನ್ ಧಾರ್ಮಿಕ ಗುರುಗಳಾದ 14ನೇ ದಲೈಲಾಮ ಅವರು ಬುಧವಾರ ಬೈಲುಕುಪ್ಪೆಯ ಲಾಮಾ ಕ್ಯಾಂಪಿನಲ್ಲಿರುವ ಸೆರಾ ಲಾಚಿ ಬೌದ್ಧ ಕೇಂದ್ರಕ್ಕೆ ಭೇಟಿ ನೀಡಿದರು.ಕಳೆದ ಒಂದು ತಿಂಗಳ ಅವಧಿಯಿಂದ ಬೈಲುಕುಪ್ಪೆ ನಿರಾಶ್ರಿತ ಶಿಬಿರದ ತಶಿ ಲೋಂಫು ಬೌದ್ಧ ಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ದಲೈಲಾಮ ಬೆಳಗ್ಗೆ ಒಂಬತ್ತು ಗಂಟೆಗೆ ಸೆರಾ ಲಾಚಿ ಬೌದ್ಧ ಕೇಂದ್ರಕ್ಕೆ ಆಗಮಿಸಿ ತಮ್ಮ ಅನುಯಾಯಿಗಳಿಗೆ ಧಾರ್ಮಿಕ ಪ್ರವಚನ ನೀಡುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು.
ಭಾರಿ ಭದ್ರತೆಯಲ್ಲಿ ಬೈಲುಕುಪ್ಪೆಯ ತಶಿ ಲೊಂಫು ಕೇಂದ್ರದಿಂದ ಆಗಮಿಸಿದ ದಲಾಯಿಲಾಮ ಅವರನ್ನು ಸೆರಾ ಲಾಚಿ ಬೌದ್ಧ ಕೇಂದ್ರದ ಮುಖ್ಯಸ್ಥರು, ಪ್ರಮುಖರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.ದಲೈಲಾಮ ಅವರು ಈ ತಿಂಗಳ 15ರ ತನಕ ಬೈಲುಕುಪ್ಪೆ ಶಿಬಿರದಲ್ಲಿ ತಂಗಲಿದ್ದು ನಂತರ ಹುಣಸೂರು ಸಮೀಪದ ಟಿಬೆಟಿಯನ್ ನಿರಾಶ್ರಿತ ಕೇಂದ್ರಕ್ಕೆ ತೆರಳುವರು.