ದೊಡ್ಡಬಳ್ಳಾಪುರ: ಇಲ್ಲಿನ ದಲಿತ ಮುಖಂಡ, ಛಲವಾದಿ ಮಹಾಸಭಾ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸಿ.ಗುರುರಾಜಪ್ಪ ಅಕಾಲಿಕವಾಗಿ ಮರಣ ಹೊಂದಿದ್ದು, ಅವರ ಮೃತದೇಹ ಧರ್ಮಸ್ಥಳದ ಶ್ರೀಮುಡಿ ಭವನದ ಆವರಣದಲ್ಲಿ ಪತ್ತೆಯಾಗಿದೆ

ದೊಡ್ಡಬಳ್ಳಾಪುರ: ಇಲ್ಲಿನ ದಲಿತ ಮುಖಂಡ, ಛಲವಾದಿ ಮಹಾಸಭಾ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸಿ.ಗುರುರಾಜಪ್ಪ ಅಕಾಲಿಕವಾಗಿ ಮರಣ ಹೊಂದಿದ್ದು, ಅವರ ಮೃತದೇಹ ಧರ್ಮಸ್ಥಳದ ಶ್ರೀಮುಡಿ ಭವನದ ಆವರಣದಲ್ಲಿ ಪತ್ತೆಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಅನಾರೋಗ್ಯ ಅಥವಾ ಇತರ ಕಾರಣದಿಂದ ಮಲಗಿದ್ದ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ದಲಿತ, ಕನ್ನಡ ಮತ್ತು ಪ್ರಗತಿಪರ ಹೋರಾಟಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅವರು, ದೊಡ್ಡಬಳ್ಳಾಪುರದ ಕಛೇರಿಪಾಳ್ಯದ ನಿವಾಸಿಯಾಗಿದ್ದರು. ಗುರುವಾರ ತಮ್ಮ ಬೈಕ್ ತೆಗೆದುಕೊಂಡು ಹೋದವರು, ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು, ಇಂದು ಬೆಳಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿಲು ಕುಟುಂಬಸ್ಥರು ಹೋದಾಗ, ಧರ್ಮಸ್ಥಳಧಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಮಾಹಿತಿ ಬಂದಿದೆ. ಮೃತ ದೇಹದ ಭಾವಚಿತ್ರ ಹೋಲಿಕೆಯಾದ ಕಾರಣ ಮೃತರು ಗುರುರಾಜಪ್ಪ ಎಂದು ತಿಳಿದು ಬಂದಿರುವುದಾಗಿ ಪೊಲೀಸ್ ಮೂಲದಿಂದ ತಿಳಿದು ಬಂದಿದೆ.

ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ, ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ತಿಳಿದು ಬರಲಿದೆ.

ಗುರುರಾಜಪ್ಪ ಅವರ ಅಕಾಲಿಕ ಸಾವಿಗೆ, ಛಲವಾದಿ ಮಹಾಸಭಾದ ಮುಖಂಡರು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

31ಕೆಡಿಬಿಪಿ3- ಸಿ.ಗುರುರಾಜಪ್ಪ.