ನ್ಯಾಯಾಧೀಶರಿಗೆ ಅಪಮಾನ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

| Published : Oct 10 2025, 01:01 AM IST

ಸಾರಾಂಶ

ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಬಿ. ಆರ್. ಗವಾಯಿ ಮೇಲೆ ವಕೀಲರೊಬ್ಬರು ಶೂ ಎಸೆದು ಅಪಮಾನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಸುಳ್ಯ: ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಬಿ. ಆರ್. ಗವಾಯಿ ಮೇಲೆ ವಕೀಲರೊಬ್ಬರು ಶೂ ಎಸೆದು ಅಪಮಾನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಮಿತಿ ಹಾಗೂ ಸುಳ್ಯ ತಾಲೂಕು ದಲಿತ ಸಂಘಟನೆಗಳ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.ಬಳಿಕ ಸುಳ್ಯ ತಹಶೀಲ್ದಾರ್ ಮುಖೇನ ಆರೋಪಿ ವಕೀಲರಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ಮೂಲಕ ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಗಳೂರು ಇದರ ಮೈಸೂರು ವಿಭಾಗೀಯ ಸಂಚಾಲಕ ಆನಂದ ಬೆಳ್ಳಾರೆ ವಹಿಸಿದ್ದರು.

ಮೊಗೇರ ಸೇವಾ ಸಂಘ ರಾಜ್ಯ ಸಮಿತಿ ಅಧ್ಯಕ್ಷ ನಂದರಾಜ್ ಸಂಕೇಶ್, ಮುಖಂಡ ಮಹೇಶ್ ಬಳ್ಳಾರ್ಕರ್,ಆದಿ ದ್ರಾವಿಡ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಮಾತನಾಡಿದರು. ಮುಖಂಡರಾದ ವಿಶ್ವನಾಥ ಅಲೆಕ್ಕಾಡಿ, ನಾರಾಯಣ ಎಸ್, ಕೇಶವ ಬಿ.ಎಸ್, ಸತೀಶ, ಅರಿಯಡ್ಕ, ಅಶ್ವಿನ್, ಸತೀಶ್ ಬಿಳಿಯಾರು, ರಮೇಶ್ ಬೂಡು, ಪ್ರಕಾಶ್ ಪಿ ಎಸ್ ಪಾತೆಟ್ಟಿ, ವಿಜಯ್ ಕುಮಾರ್ ಆಲೆಟ್ಟಿ, ಸದಾನಂದ ಪಿ, ಆನಂದ ಕೆಂಬಾರೆ, ಕುಮಾರ್ ಬಿ, ಆನಂದ್ ಎಸ್ ಮತ್ತಿತರರು ಭಾಗವಹಿಸಿದರು.