ಸಾರಾಂಶ
ಅರಕಲಗೂಡು ತಾಲೂಕು ಮಟ್ಟದ ದಲಿತ ಸಂಘರ್ಷ ಸಮಿತಿ ಪುನರ್‌ರಚನೆ ಹಾಗೂ ಸರ್ವ ಸದಸ್ಯರ ಸಭೆಯನ್ನು ಡಿ.22ರಂದು ಬೆಳಗ್ಗೆ 11ಗಂಟೆಗೆ ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಆಯೋಜಿಸಲಾಗಿದೆ ಎಂದು ದಸಂಸ(ಅಂಬೇಡ್ಕರ್‌ವಾದ) ಜಿಲ್ಲಾ ಸಂಚಾಲಕ ಕೃಷ್ಣ ದುಮ್ಮಿ ತಿಳಿಸಿದರು. ಸಂಘಟನೆಯನ್ನು ಸದೃಢಗೊಳಿಸಲು ದಸಂಸದ ತಾಲೂಕು ಮಟ್ಟದ ಸರ್ವಸದಸ್ಯರ ಸಭೆಯನ್ನು ಕರೆದು ಹೊಸ ಸಮಿತಿ ರಚಿಸಲಾಗುತ್ತಿದೆ ಎಂದು ತಿಳಿಸಿದರು.
ಅರಕಲಗೂಡು: ತಾಲೂಕು ಮಟ್ಟದ ದಲಿತ ಸಂಘರ್ಷ ಸಮಿತಿ ಪುನರ್‌ರಚನೆ ಹಾಗೂ ಸರ್ವ ಸದಸ್ಯರ ಸಭೆಯನ್ನು ಡಿ.22ರಂದು ಬೆಳಗ್ಗೆ 11ಗಂಟೆಗೆ ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಆಯೋಜಿಸಲಾಗಿದೆ ಎಂದು ದಸಂಸ(ಅಂಬೇಡ್ಕರ್‌ವಾದ) ಜಿಲ್ಲಾ ಸಂಚಾಲಕ ಕೃಷ್ಣ ದುಮ್ಮಿ ತಿಳಿಸಿದರು.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಲಿತ ಸಂಘರ್ಷ ಸಮಿತಿಯು ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತ ಹಾಗೂ ಶೋಷಿತರ ಪರ ಕಾರ್ಯನಿರ್ವಹಿಸುತ್ತಿದೆ. ತಾಲೂಕಿನಲ್ಲಿ ಸಂಘಟನೆಯನ್ನು ಸದೃಢಗೊಳಿಸಲು ದಸಂಸದ ತಾಲೂಕು ಮಟ್ಟದ ಸರ್ವಸದಸ್ಯರ ಸಭೆಯನ್ನು ಕರೆದು ಹೊಸ ಸಮಿತಿ ರಚಿಸಲಾಗುತ್ತಿದೆ. ಶೋಷಿತ ಸಮಾಜದ ಎಲ್ಲಾ ಪ್ರಮುಖರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ, ಸಹಕಾರ ನೀಡಬೇಕೆಂದು ಮನವಿ ಮಾಡಿದರು. ದಸಂಸ ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೇಹಳ್ಳಿ ಸಭೆಯ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ದಸಂಸ ಪ್ರಮುಖರಾದ ಸುಮ ದುದ್ದ, ಮಲ್ಲೇಶ್ ಅಂಬುಗ, ಧರ್ಮೇಶ್ ಕುಪ್ಪೆ, ಕಮಲಮ್ಮ, ವೆಂಕಟೇಶ್ ಮೂರ್ತಿ, ಬಸವರಾಜು, ಸಣ್ಣಪ್ಪ, ಕಾನೂನು ಸಲಹೆಗಾರರಾದ ಶಂಕರಯ್ಯ, ಪ್ರಕಾಶ್, ಉಪನ್ಯಾಸಕ ಹರೀಶ್ ಮಾಗಲು ಭಾಗವಹಿಸಲಿದ್ದಾರೆ ಎಂದರು.