ಸಾರಾಂಶ
ಪಟ್ಟಣ ಸೇರಿದಂತೆ ತಾಲೂಕಿನ ದೊಣೆಹಳ್ಳಿ, ಮುಸ್ಟೂರು, ಕೆಚ್ಚೇನಹಳ್ಳಿ, ಕೆಳಗೋಟೆ, ಬಿಳಿಚೋಡು, ದೇವಿಕೆರೆ, ರಸ್ತೆ ಮಾಚಿಕೆರೆ, ಯರಲಕಟ್ಟೆ ಮತ್ತಿತರ ಗ್ರಾಮಗಳಲ್ಲಿ ಮಂಗಳವಾರ ಬೆಳಗ್ಗೆ ಧಾರಾಕಾರ ಮಳೆಯಾಗಿದೆ. ಹಲವು ಕಡೆ ಎಲೆಬಳ್ಳಿ ತೋಟ, ಪಟ್ಟಣದ ಇಂದಿರಾ ಕ್ಯಾಂಟಿನ್ ಪಕ್ಕದ ಶಾಲೆ ಕಾಂಪೌಂಡ್ ಬಿದ್ದುಹೋಗಿದೆ.
ಜಗಳೂರು: ಪಟ್ಟಣ ಸೇರಿದಂತೆ ತಾಲೂಕಿನ ದೊಣೆಹಳ್ಳಿ, ಮುಸ್ಟೂರು, ಕೆಚ್ಚೇನಹಳ್ಳಿ, ಕೆಳಗೋಟೆ, ಬಿಳಿಚೋಡು, ದೇವಿಕೆರೆ, ರಸ್ತೆ ಮಾಚಿಕೆರೆ, ಯರಲಕಟ್ಟೆ ಮತ್ತಿತರ ಗ್ರಾಮಗಳಲ್ಲಿ ಮಂಗಳವಾರ ಬೆಳಗ್ಗೆ ಧಾರಾಕಾರ ಮಳೆಯಾಗಿದೆ. ಹಲವು ಕಡೆ ಎಲೆಬಳ್ಳಿ ತೋಟ, ಪಟ್ಟಣದ ಇಂದಿರಾ ಕ್ಯಾಂಟಿನ್ ಪಕ್ಕದ ಶಾಲೆ ಕಾಂಪೌಂಡ್ ಬಿದ್ದುಹೋಗಿದೆ.
ಭರಣಿ ಮಳೆ ಅರ್ಭಟಕ್ಕೆ ಯರಲಕಟ್ಟೆ ರೈತ ರೇವಣ್ಣನ 10 ಗುಂಟೆ, ಮುನಿಯಪ್ಪನ 12 ಗುಂಟೆ ಮತ್ತು ಈರಪ್ಪನ 10 ಗುಂಟೆ ವೀಳ್ಯದೆಲೆ ಬಳ್ಳಿ ತೋಟ ಭಾಗಶಃ ಹಾಳಾಗಿದೆ. ಗುಡುಗುಸಹಿತ ಸುರಿದ ಮಳೆಯಿಂದ ಎಲೆಬಳ್ಳಿ ಧರೆಗುರುಳಿದೆ. ಮೆದಗಿನಕೆರೆ ಗ್ರಾಮದ ಬಳಿ ಸಣ್ಣ ನೀರಾವರಿ ಇಲಾಖೆಯಿಂದ ಸೋಮವಾರವಷ್ಟೇ ಮುಕ್ತಾಯಗೊಂಡಿದ್ದ ಅಟಲ್ ಭೂ ಜಲ್ ಯೋಜನೆಯ ಚೆಕ್ ಡ್ಯಾಂ ಭರ್ತಿಯಾಗಿದ್ದು, ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ರೈತ ರಂಗಸ್ವಾಮಿ ಸೇರಿದಂತೆ ಇತರರು ಕೃತಜ್ಞತೆ ಸಲ್ಲಿಸಿದ್ದಾರೆ.ಪಟ್ಟಣದಲ್ಲಿ ಭಾರಿ ಮಳೆ:
ಬೆಳಗ್ಗೆ 6ರಿಂದ 7.30 ಗಂಟೆವರೆಗೆ ಸತತವಾಗಿ ಸುರಿದ ಮಳೆಯಿಂದ ಪಟ್ಟಣದ ದೇವೇಗೌಡ ಬಡಾವಣೆ, ಅಶ್ವಿನಿ ಬಡಾವಣೆ, ಮುದ್ದಣ್ಣ ಲೇಔಟ್‌ಗಳಲ್ಲಿ ನೀರು ಹರಿದು ಜನ ಓಡಾಡುವುದು ಕಷ್ಟವಾಯಿತು. ಧಾರಾಕಾರ ಮಳೆಯಿಂದ ಅಶ್ವಿನಿ ಬಡಾವಣೆ ರಾಜಕಾಲುವೆಯಲ್ಲಿ ನೀರುಹರಿದು ಜಗಳೂರು ಪಟ್ಟಣದ ಕೆರೆ ಸೇರಿತು. ಮುಖ್ಯ ರಸ್ತೆ ಅಗಲೀಕರಣ ಮಾಡುತ್ತಿರುವುದರಿಂದ ಚರಂಡಿಗಳು ಕಿತ್ತುಹೋಗಿವೆ. ಪರಿಣಾಮ ನೀರು ರಸ್ತೆ ಮೇಲೆಲ್ಲಾ ಹರಿದು, ಕೊಳಚೆ, ತ್ಯಾಜ್ಯ ರಸ್ತೆಯ ಮೇಲೆ ರಾರಾಜಿಸುತ್ತಿದ್ದವು.ಪೂರ್ವ ಮುಂಗಾರಿಂದಾಗಿ ಅಡಕೆ, ಬಾಳೆ, ಪಪ್ಪಾಯ, ದಾಳಿಂಬೆ ರೈತರಿಗೆ ಸಂತಸ ತಂದಿದೆ. ಕಳೆ ತೆಗೆಯಲು ಉಳಿಮೆ ಮಾಡಿಸಿದ್ದ ರೈತರಿಗೆ ನೀರಿನ ಅಗತ್ಯತೆ ಅನಿವಾರ್ಯವಾಗಿತ್ತು. ಮಳೆಯಿಂದಾಗಿ ನೀರು ಹಾಯಿಸುವ ಕಷ್ಟ ಕೊಂಚ ಕಡಿಮೆಯಾದಂತಾಗಿದೆ. ಇನ್ನೊಂದು ವಾರ ನೀರಿನ ಸಮಸ್ಯೆ ಇಲ್ಲ ಎಂಬ ನೆಮ್ಮದಿ ರೈತರದು.
- - --13ಜೆಎಲ್ಆರ್ಚಿತ್ರ1ಎ:
13ಜೆಎಲ್ಆರ್ಚಿತ್ರ1ಬಿ:13ಜೆಎಲ್ಆರ್ಚಿತ್ರ1:
13ಜೆಎಲ್ಆರ್ಚಿತ್ರ1ಎ:13ಜೆಎಲ್ಆರ್ಚಿತ್ರ1ಬಿ:
13ಜೆಎಲ್ಆರ್ಚಿತ್ರ1: