ಉಪ್ಪಿನಂಗಡಿ: ಸಿಡಿಲು ಬಡಿದು ಹಾನಿ
KannadaprabhaNewsNetwork | Published : Oct 14 2023, 01:00 AM IST
ಉಪ್ಪಿನಂಗಡಿ: ಸಿಡಿಲು ಬಡಿದು ಹಾನಿ
ಸಾರಾಂಶ
ಉಪ್ಪಿನಂಗಡಿ ಸುತ್ತಮುತ್ತ ಸುರಿದ ಸಿಡಿಲಬ್ಬರದ ಮಳೆಯಿಂದಾಗಿ ಹಲವೆಡೆ ಹಾನಿಯಾಗಿದೆ.
ಉಪ್ಪಿನಂಗಡಿ: ಕಳೆದೆರಡು ದಿನಗಳಲ್ಲಿ ಉಪ್ಪಿನಂಗಡಿ ಸುತ್ತಮುತ್ತ ಸುರಿದ ಸಿಡಿಲಬ್ಬರದ ಮಳೆಯಿಂದಾಗಿ ಹಲವೆಡೆ ಹಾನಿಯಾಗಿದೆ. ಉಪ್ಪಿನಂಗಡಿಯ ಶ್ರೀ ಮಹಾಕಾಳಿ ದೇವಾಲಯದ ಮುಖ್ಯಧ್ವಾರದ ಗೋಪುರದ ಒಂದು ಪಾರ್ಶ್ವಕ್ಕೆ ಸಿಡಿಲು ಬಡಿದು ಕಾಂಕ್ರೀಟ್ ಕಲಾಕೃತಿ ಛಿದ್ರವಾಗಿದೆ. ಉಪ್ಪಿನಂಗಡಿ ಸಮೀಪದ ತೆಕ್ಕಾರು ಗ್ರಾಮದ ಕಾಪಿಗುಡ್ಡೆ ಎಂಬಲ್ಲಿ ತಾಹಿರಾ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಭಾಗಶಃ ಹಾನಿಗೀಡಾಗಿದೆ. ಗೋಡೆ ಬಿರುಕು ಬಿಟ್ಟಿದ್ದು, ಮನೆಯ ವಿದ್ಯುತ್ ಸಂಪರ್ಕಗಳೆಲ್ಲ ಹಾನಿಗೀಡಾಗಿದೆ. ಪರಿಣಾಮ ೨ ಲಕ್ಷಕ್ಕೂ ಹೆಚ್ಚಿನ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸಿಡಿಲ ಬಡಿತಕ್ಕೆ ಸಿಲುಕಿ ಹಲವು ಮನೆಗಳ ಇನ್ವಾರ್ಟರ್, ವಿದ್ಯುತ್ ಪರಿಕರಗಳೂ ಹಾನಿಗೀಡಾದ ಘಟನೆಗಳು ನಡೆದಿದೆ.