ಕರಾವಳಿ ಸೇವಾ ಪ್ರತಿಷ್ಠಾನದಿಂದ ಕುಣಿತ ಭಜನೆ ಸ್ಪರ್ಧೆ

| Published : Oct 20 2025, 01:04 AM IST

ಕರಾವಳಿ ಸೇವಾ ಪ್ರತಿಷ್ಠಾನದಿಂದ ಕುಣಿತ ಭಜನೆ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಕರಾವಳಿ ಸೇವಾ ಪ್ರತಿಷ್ಠಾನ ಸುರತ್ಕಲ್ ವತಿಯಿಂದ ದೀಪಾವಳಿ ಸಂಭ್ರಮದ ಪ್ರಯುಕ್ತ ಸುರತ್ಕಲ್ ಕರ್ನಾಟಕ ಸೇವಾ ವೃಂದದಲ್ಲಿ ಕುಣಿತ ಭಜನಾ ಸ್ಪರ್ಧೆ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಹಿಂದಿನ ಕಾಲದಲ್ಲಿ ಮನೆ ಮನೆಯಲ್ಲಿ ನಡೆಯುತ್ತಿದ್ದ ಭಜನೆ, ಭಜನೆ ಸಂಕೀರ್ತನೆ ಮತ್ತಿತರ ಸಂಪ್ರದಾಯಗಳು ಕಡಿಮೆಯಾಗುತ್ತಿದ್ದು, ಕರಾವಳಿ ಸೇವಾ ಪ್ರತಿಷ್ಠಾನ ಕುಣಿತ ಭಜನೆಯ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವೆಂದು ಸಮಾಜ ಸೇವಕ ಮಹಾಬಲ ಪೂಜಾರಿ ಕಡಂಬೋಡಿ ಹೇಳಿದರು.

ಕರಾವಳಿ ಸೇವಾ ಪ್ರತಿಷ್ಠಾನ ಸುರತ್ಕಲ್ ವತಿಯಿಂದ ದೀಪಾವಳಿ ಸಂಭ್ರಮದ ಪ್ರಯುಕ್ತ ಸುರತ್ಕಲ್ ಕರ್ನಾಟಕ ಸೇವಾ ವೃಂದದಲ್ಲಿ ಆಯೋಜಿಸಿದ ಕುಣಿತ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ಸೇವಾ ಪ್ರತಿಷ್ಠಾನದ ಮೂಲಕ ಯುವ ಸಮೂಹ ಹಿಂದೂ ಸಂಪ್ರದಾಯ ಆಚಾರ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಡುವ ಮೂಲಕ ದೀಪಾವಳಿ ಸಾಮೂಹಿಕವಾಗಿ ಆಚರಿಸಲು ಯೋಜನೆ ರೂಪಿಸಿ ಯಶಸ್ವಿಯಾಗಿದೆಯೆಂದು ಹೇಳಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಎಂಎಸ್‌ಇಝೆಡ್ ಅಧಿಕಾರಿ ಜಯಪ್ರಕಾಶ್ ಸೂರಿಂಜೆ, ಸಂದೀಪ್ ಪಚ್ಚನಾಡಿ, ಗಣೇಶ್ ಭಟ್ ಕೃಷ್ಣಾಪುರ, ರಕ್ಷಿತ್ ಪೂಜಾರಿ, ಪುಷ್ಪರಾಜ್ ಮುಕ್ಕ, ಆಶಿತ್ ನೋಂಡ, ಸಂಜಿತ್ ಶೆಟ್ಟಿ, ವರುಣ್ ಚೌಟ ಮತ್ತಿತರರು ಉಪಸ್ಥಿತರಿದ್ದರು. ಕರಾವಳಿ ಸೇವಾ ಪ್ರತಿಷ್ಠಾನ ಸುರತ್ಕಲ್ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಸ್ವಾಗತಿಸಿ, ಪ್ರಸ್ತಾವನೆಗೈದರು. ನವೀನ್ ಶೆಟ್ಟಿ ಎಡಿಮೆಮಾರ್ ನಿರೂಪಿಸಿದರು.