ಕಂದಾಯ ಅಧಿಕಾರಿ ಮೇಲೆ ದರ್ಪ: ಡೀಸಿ, ಎಡೀಸಿ ವರ್ಗಾವಣೆ ಮಾಡಿ

| Published : Feb 01 2025, 12:47 AM IST

ಕಂದಾಯ ಅಧಿಕಾರಿ ಮೇಲೆ ದರ್ಪ: ಡೀಸಿ, ಎಡೀಸಿ ವರ್ಗಾವಣೆ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ದರ್ಪ ತೋರಿಸುತ್ತಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅವರನ್ನು ವರ್ಗಾವಣೆ ಮಾಡುವಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಘಟಕದ ಸದಸ್ಯರು ಆಗ್ರಹಿಸಿ ತಾಲೂಕು ದಂಡಾಧಿಕಾರಿ ಮಂಜುನಾಥ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕನಕಪುರ

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಸ್ವ ನಿರೀಕ್ಷಕ ತಂಗರಾಜು ಮಾತನಾಡಿ, ನಮ್ಮ ಸಂಘದ ಕೇಂದ್ರ ಸಂಘ ಜ. 24 ರಿಂದ 29 ರವರಿಗೂ ಜಂಟಿ ಕಾರ್ಯಕಾರಿಣಿ ಸಭೆಯನ್ನು ನಡೆಸಿದ್ದು, ಜ. 24 ರಂದು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಮೀನಾ ನಾಗರಾಜು, ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅದೇ ದಿನ ಕೆಸ್ವಾನ್ ಸಭೆಯನ್ನು ನಡೆಸಿದ್ದರು. ಸಭೆಗೆ ಹಾಜರಾಗದ 29 ಗ್ರಾಮ ಆಡಳಿತ ಅಧಿಕಾರಿಗಳನ್ನು ವಿಚಾರಣೆ ನಡೆಸದೆ ವಾರ್ಷಿಕ ವೇತನ ಬಡ್ತಿ ಖಡಿತಗೊಳಿಸಿ, ದಂಡ ವಿಧಿಸಿ ಆದೇಶಿಸಿದ್ದಾರೆ. ಆದರೆ ಸಭೆಯಲ್ಲಿ ಹಾಜರಾಗಿದ್ದವರನ್ನು ಅನುಮತಿ ಪಡೆದು ರಜೆ ಹಾಕಿದವರನ್ನು, ಗರ್ಭಿಣಿ ಮಹಿಳೆ ಅನುಮತಿ ಪಡೆದು ಆಸ್ಪತ್ರೆಗೆ ಹೋಗಿದ್ದವರನ್ನು, ಹೀಗೆ ಹಲವಾರು ಕಾರಣಗಳಿಂದ ಅನುಮತಿ ಪಡೆದು ರಜೆ ಹಾಕಿದವರನ್ನು, ಕೆ ಸಿ ಆರ್ ನಿಯಮಗಳನ್ನು ಉಲ್ಲಂಘಿಸಿ, ಮನಬಂದಂತೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಹೋದಾಗ ಯಾವುದೇ ಅಹವಾಲನ್ನು ಕೇಳದೆ ನಾನು ಮಾಡಿರುವ ಆದೇಶ ಸರಿ ಇದೆ ಎಂದು ಗದರಿಸಿ ಕಳುಹಿಸಿದ್ದಾರೆ. ಡೀಸಿ, ಎಡೀಸಿ ನಿಯಮ ಬಾಹಿರವಾಗಿ ಆದೇಶ ಮಾಡುತ್ತಿದ್ದು, ಇದರಿಂದ ಕಂದಾಯ ನೌಕರರಿಗೆ ದಕ್ಕೆಯಾಗಿದೆ. ಡೀಸಿ ಮೀನಾ ನಾಗರಾಜ್ ಮತ್ತು ಎಡೀಸಿ ಕನಕರೆಡ್ಡಿ ಅವರನ್ನು ವರ್ಗಾವಣೆ ಮಾಡದಿದ್ದಲ್ಲಿ ಫೆ.3ರಿಂದ ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬಗೆಯ ಕೆಲಸ ಸ್ಥಗಿತಗೊಳಿಸಿ ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾತನೂರು ಉಪ ತಹಸೀಲ್ದಾರ್ ಪ್ರವೀಣ್, ಕೋಡಿಹಳ್ಳಿ ಉಪ ತಹಸೀಲ್ದಾರ್ ಹನುಮಂತು,ಕಂದಾಯ ಅಧಿಕಾರಿ ಗಳಾದ ಪಾಷಾ,ರಜತ್,ಬಸವರಾಜ್ ಗ್ರಾಮ ಆಡಳಿತಾಧಿ ಕಾರಿ ಗಿರೀಶ್, ಮಹೇಶ್, ಶ್ರೀರಾಮ್ ಕಠಾರಿ, ಅಕ್ಕಮ್ಮ ಬಂಡಿ,ಹರ್ಷಿತಾ,ಮಿಥುನ್, ಆನಂದ ಹಾಜರಿದ್ದರು.