ದಲಿತರನ್ನು ಒಕ್ಕಲೆಬ್ಬಿಸುವ ಹುನ್ನಾರ: ದರ್ಶನ್ ಆರೋಪ

| Published : May 07 2024, 01:05 AM IST

ಸಾರಾಂಶ

ಸೂಲಿಬೆಲೆ: ಹೋಬಳಿ ದೊಡ್ಡಹರಳಗೆರೆ ಗ್ರಾಮದ ಸರ್ವೆ ನಂ.45 ರಲ್ಲಿ ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ವಿಶ್ವ ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ದರ್ಶನ್ ಆದಿತ್ಯ ಆರೋಪಿಸಿದರು.

ಸೂಲಿಬೆಲೆ: ಹೋಬಳಿ ದೊಡ್ಡಹರಳಗೆರೆ ಗ್ರಾಮದ ಸರ್ವೆ ನಂ.45 ರಲ್ಲಿ ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ವಿಶ್ವ ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ದರ್ಶನ್ ಆದಿತ್ಯ ಆರೋಪಿಸಿದರು.

ಹೋಬಳಿ ವ್ಯಾಪ್ತಿಯ ದೊಡ್ಡಹರಳಗೆರೆ ಗ್ರಾಮದ ಗೋಮಾಳದಲ್ಲಿ ಸುಮಾರು 43 ಎಕರೆ ಜಾಗವನ್ನು ೧೫ ಜನರಿಗೆ ಮಂಜೂರು ಮಾಡಿ ಆದೇಶಿಸಲಾಗಿದೆ. ಅರಣ್ಯ ಇಲಾಖೆ ಮೇ 6ರಂದು ಸೋಮವಾರ ಏಕಾಏಕಿ ಜಮೀನಿನ ಒತ್ತುವರಿ ತೆರವು ನೆಪದಲ್ಲಿ ದಲಿತರಿಗೆ ಮಂಜೂರಾಗಿರುವ ಜಾಗದಲ್ಲಿ ಜೆಸಿಬಿಯಿಂದ ಗುಂಡಿ ತೆಗೆದು ಕಾಲುವೆ ನಿರ್ಮಾಣ ಮಾಡಲು ಹೊರಟಿರುವುದು ದಲಿತರ ಮೇಲೆ ಅರಣ್ಯ ಇಲಾಖೆಯ ದಬ್ಬಾಳಿಕೆ ಹಾಗೂ ದೌರ್ಜನ್ಯವಾಗಿದೆ ಎಂದು ಕಿಡಿ ಕಾರಿದರು.

ಫಲಾನುಭವಿ ಮಂಜುಳಾ ವೆಂಕಟೇಶ್ ಮಾತನಾಡಿ, ಸರ್ಕಾರದ ಆದೇಶದಂತೆ ಭೂಮಿ ಮಂಜೂರಾಗಿದೆ. ಪಹಣಿ ಇದ್ದು, ನಮಗಿನ್ನು ಪೋಡಿಯಾಗಿಲ್ಲ. ನಾವು ನಕ್ಷೆ ತಯಾರಿಸಿ ಸರ್ವೇ ಮಾಡಿಸಿಕೊಂಡು ಭೂಮಿಯ ಸುಬರ್ದಿಗೆ ಬರಲು 3 ತಿಂಗಳ ಕಾಲಾವಕಾಶ ನೀಡಬೇಕು ಎಂದು ಮಹಿಳೆಯರು, ಮಕ್ಕಳು ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.ನೀ ವೇಳೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಭೂಮಿ ಮಾಲೀಕರು, ದಲಿತರ ನಡುವೆ ಮಾತಿನ ಚಕಮುಕಿ ನಡೆಯಿತು. ಸ್ಥಳಕ್ಕೆ ಸೂಲಿಬೆಲೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದು ತಕ್ಷಣಕ್ಕೆ ಕಾಮಗಾರಿ ನಿಲ್ಲಿಸುವಂತೆ ಅರಣ್ಯಾಧಿಕಾರಿಗಳ ಮನವೊಲಿಸಿದರು. ತುರ್ತಾಗಿ ನಿಮ್ಮ ಜಮೀನಿನ ದಾಖಲೆಗಳನ್ನು ಮಾಡಿಸಿಕೊಂಡು ಸುಬರ್ದಿಗೆ ಬರವಂತೆ ಪ್ರತಿಭಟನಾಕಾರರಿಗೆ ತಿಳಿಸಿದರು.

ಸಂಘಟನೆಯ ವೆಂಕಟೇಶ್, ಸಾದಪ್ಪ, ನಾರಾಯಣಸ್ವಾಮಿ, ಸೋಮಶೇಖರ್, ಗ್ರಾಪಂ ಸದಸ್ಯರು, ದಲಿತ ಮುಖಂಡರು ಹಾಗೂ ಮಹಿಳೆಯರು ಹಾಜರಿದ್ದರು.ಕೋಟ್.......

ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿದ್ದ ಹಳೆಯ ಹಣ್ಣಿನ ಗಿಡಮರಸಸಿಗಳನ್ನು ನಿರ್ದಾಕ್ಷಣ್ಯವಾಗಿ ಕಡಿದು ಹಾಕಿದ್ದಾರೆ. ಇದಕ್ಕೂ ಮುನ್ನಾ ಹಾಕಿದ್ದ ಫೆನ್ಸಿಂಗ್ ಹಾಳು ಮಾಡಿದ್ದಾರೆ. ದಾಖಲೆಗಳ ಪ್ರಕಾರ ಸರ್ವೇ ಮಾಡಿಸಿ ನಕ್ಷೆಯಂತೆ ಅರಣ್ಯ ಇಲಾಖೆಗೆ ಸೇರುವ ಸ್ಥಳವನ್ನು ನಮ್ಮ ಸುಪರ್ದಿಗೆ ಪಡೆಯಲು ಕ್ರಮ ಕೈಗೊಂಡಿದ್ದೇವೆ. ಯಾವುದೇ ಹೆಚ್ಚುವರಿ ಜಾಗ ನಾವು ಕಸಿದುಕೊಂಡಿಲ್ಲ.

-ವರುಣ್‌ಕುಮಾರ್, ಅರಣ್ಯಾಧಿಕಾರಿ, ಹೊಸಕೋಟೆಕೋಟ್‌...........

ಸರ್ಕಾರಿ ಗೋಮಾಳದ ಭೂಮಿ ಮಂಜೂರಾಗಿರುವ ಫಲಾನುಭವಿಗಳು ತುರ್ತಾಗಿ ತಮ್ಮ ಭೂಮಿಯನ್ನು ಸರ್ವೇ ಮಾಡಿಸಿಕೊಂಡು ತಮ್ಮ ಹೆಸರಿಗೆ ದಾಖಲೆ ಮಾಡಿಸಿಕೊಳ್ಳಬೇಕು. ಅದಕ್ಕೆ1 ತಿಂಗಳ ಗಡುವು ಮಾತ್ರ ತೆಗೆದುಕೊಳ್ಳಬೇಕು.

-ರವಿಕುಮಾರ್, ಇನ್ಸ್‌ಪೆಕ್ಟರ್, ಸೂಲಿಬೆಲೆ ಠಾಣೆಕೋಟ್‌.........

ದಲಿತರಿಗಾಗಿ ಬೆಂಡಿಗಾನಹಳ್ಳಿ ಕುಟುಂಬ ಈ ಸ್ಥಳವನ್ನು ನೀಡಿದೆ. ಆದರೆ ಅರಣ್ಯ ಇಲಾಖೆ ನಮಗೆ ಮಂಜೂರಾಗಿರುವ ಜಾಗವನ್ನು ಅತಿಕ್ರಮಣ ಎಂಬ ನೆಪವೊಡ್ಡಿ ಯಾವುದೇ ಮಾಹಿತಿ ನೀಡದೆ ತರಾತುರಿಯಲ್ಲಿ ದಲಿತರ ಭೂಮಿಯನ್ನು ಅರಣ್ಯ ಭೂಮಿಗೆ ಸೇರಿಸಿಕೊಳ್ಳುವ ಹುನ್ನಾರ ನಡೆಸುತ್ತಿದೆ.

-ಡಾ.ಡಿ.ಟಿ.ವೆಂಕಟೇಶ್, ದಲಿತ ಮುಖಂಡರು, ದೊಡ್ಡಹರಳಗೆರೆ