ಸಾರಾಂಶ
ಬೆಳಗ್ಗೆ ಸೋಮು ಮತ್ತು ತಂಡದಿಂದ ವಾದ್ಯಗೋಷ್ಠಿ, ಮೈಸೂರಿನ ಸಂಜೀವಿನಿ ಭಜನಾ ಮಂಡಳಿ ಜಯಶಂಕರ್ ಮತ್ತು ನಿರ್ಮಲರಿಂದ ಭಜನೆ, ಶಿವಾರ ಉಮೇಶ್ ತಂಡದಿಂದ ಭಕ್ತಿಗೀತೆ, ಸಂಜೆ ಮಳವಳ್ಳಿ ಸಂಗೀತ ಶಾಲೆ ನಿರ್ದೇಶಕಿ ಸಿಂಧೂ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹರಿಕಥಾ ವಿದ್ವಾನ್ ಕಾರಸವಾಡಿ ಸಚ್ಚಿನ್ ಮತ್ತು ತಂಡದಿಂದ ಶ್ರೀನಿವಾಸ ಕಲ್ಯಾಣ ಹರಿಕಥೆ, ರಾತ್ರಿ ಮಲ್ಲರಾಜು ತಂಡದಿಂದ ಹೆಬ್ಬೆಟ್ಟು ನಾಟಕ ಪ್ರದರ್ಶನಗೊಂಡಿತು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ವೈಕುಂಠ ಏಕಾದಶಿ ಅಂಗವಾಗಿ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ- ಭಕ್ತಿಯಿಂದ ನಡೆದವು.ಶ್ರೀ ವೆಂಕಟೇಶ್ವರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ವೈಕುಂಠ ಏಕಾದಶಿ ಅಂಗವಾಗಿ ಮುಂಜಾನೆ ವೈಕುಂಠ ದ್ವಾರ ಪ್ರವೇಶದೊಂದಿಗೆ ಸ್ವಾಮಿಗೆ ಅಷ್ಟಾವಧಾನ ಸೇವೆ ಮತ್ತು ಮಹಾಮಂಗಳಾರತಿ ಜರುಗಿತು. ಬಳಿಕ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ದೇಗುಲಕ್ಕೆ ಮುಂಜಾನೆಯಿಂದ ಸಂಜೆವರೆಗೆ 25 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರು ವಿಶೇಷವಾಗಿ ಕಜ್ಜಾಯ, ಬಾದಾಮಿ ಹಾಲು ಮತ್ತು ಬಾಳೆ ಹಣ್ಣನ್ನು ಪ್ರಸಾದವಾಗಿ ಸ್ವೀಕರಿಸಿದರು.ಮೇಲುಕೋಟೆ ಆಗಮ ಪ್ರವೀಣ ಸ್ಥಾನಾಚಾರ್ಯರಾದ ಡಾ.ಶೆಲ್ವ ಪಿಳ್ಳೈ ಅಯ್ಯಂಗಾರ್ ನೇತೃತ್ವದಲ್ಲಿ ಎಲ್ಲಾ ಪೂಜೆ, ಪುನಸ್ಕಾರಗಳು ಸೇರಿದಂತೆ ಪ್ರವಚನಗಳು ಸಾಂಗವಾಗಿ ನಡೆಸಿ ಕೊಟ್ಟರೆ ದೇವಾಲಯದ ಅರ್ಚಕರಾದ ಶ್ರೀ ಗೋಪಾಲ ಕೃಷ್ಣ ಭಟ್ಟರ್, ಶ್ರೀ ಅನಂತ ಕೃಷ್ಣ ಭಟ್ಟರ್, ಪುರೋಹಿತ ಯು.ವಿ. ಗಿರೀಶ್, ಅರ್ಚಕ ಬಿ.ಎಸ್. ಉದಯ್‌ಕುಮಾರ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಬೆಳಗ್ಗೆ ಸೋಮು ಮತ್ತು ತಂಡದಿಂದ ವಾದ್ಯಗೋಷ್ಠಿ, ಮೈಸೂರಿನ ಸಂಜೀವಿನಿ ಭಜನಾ ಮಂಡಳಿ ಜಯಶಂಕರ್ ಮತ್ತು ನಿರ್ಮಲರಿಂದ ಭಜನೆ, ಶಿವಾರ ಉಮೇಶ್ ತಂಡದಿಂದ ಭಕ್ತಿಗೀತೆ, ಸಂಜೆ ಮಳವಳ್ಳಿ ಸಂಗೀತ ಶಾಲೆ ನಿರ್ದೇಶಕಿ ಸಿಂಧೂ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹರಿಕಥಾ ವಿದ್ವಾನ್ ಕಾರಸವಾಡಿ ಸಚ್ಚಿನ್ ಮತ್ತು ತಂಡದಿಂದ ಶ್ರೀನಿವಾಸ ಕಲ್ಯಾಣ ಹರಿಕಥೆ, ರಾತ್ರಿ ಮಲ್ಲರಾಜು ತಂಡದಿಂದ ಹೆಬ್ಬೆಟ್ಟು ನಾಟಕ ಪ್ರದರ್ಶನಗೊಂಡಿತು.ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಕಾಂಗ್ರೆಸ್ ಮುಖಂಡ ಆಶಯ್ ಮಧು, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಕೂಳಗೆರೆ ಶೇಖರ್, ಇಒ ರಾಮಲಿಂಗಯ್ಯ, ಟಿಎಚ್‌ಒ ರವೀಂದ್ರ ಬಿ.ಗೌಡ ಆಗಮಿಸಿ ದೇವರ ದರ್ಶನ ಪಡೆದರು.
ಸಮಿತಿ ಅಧ್ಯಕ್ಷ ಪೂಜೂರಿ ವೆಂಕಟೇಗೌಡ, ಕಾರ್ಯಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ನಾಗಪ್ಪ, ಸದಸ್ಯರಾದ ದೇವರಹಳ್ಳಿ ವೆಂಕಟೇಶ್, ಶೀನಕೆಂಚೇಗೌಡ, ಗುಡಿಗೆರೆ ಮೈಕ್‌ಸೆಟ್ ಬಸವರಾಜು, ವಾಟರ್ ವೆಂಕಟೇಶ್, ಸೇರಿದಂತೆ ಮತ್ತಿತರಿದ್ದರು.