ವಳಗೆರೆದೊಡ್ಡಿ ಗ್ರಾಮದ ವಿದ್ಯಾಧಾರೆ ಸ್ಕೂಲ್‌ನಲ್ಲಿ ದಸರಾ ಸಂಭ್ರಮ

| Published : Sep 25 2025, 01:00 AM IST

ವಳಗೆರೆದೊಡ್ಡಿ ಗ್ರಾಮದ ವಿದ್ಯಾಧಾರೆ ಸ್ಕೂಲ್‌ನಲ್ಲಿ ದಸರಾ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸ್ಕೂಲ್‌ನಲ್ಲಿ ನಾಡಹಬ್ಬ ದಸರಾ ಸಂಭ್ರಮದ ಅಂಗವಾಗಿ ನವರಾತ್ರಿಯಲ್ಲಿ ಚಾಮುಂಡೇಶ್ವರಿ ದೇವಿ 9 ಅವತಾರಗಳು, ಅವುಗಳ ಹಿನ್ನೆಲೆ ಮತ್ತು ವಿಶೇಷತೆಗಳನ್ನು ಪ್ರತಿಬಿಂಬಿಸುವ ವೇಷಭೂಷಣಗಳನ್ನು ನಮ್ಮ ಶಾಲೆ ಮಕ್ಕಳು ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ವಳಗೆರೆದೊಡ್ಡಿ ಗ್ರಾಮದ ವಿದ್ಯಾಧಾರೆ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಾಡಹಬ್ಬ ದಸರಾ ಸಂಭ್ರಮ ಹಾಗೂ ವಿಜಯದಶಮಿಯ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳನ್ನು ತೊಟ್ಟು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಕನ್ನಡ ಶಿಕ್ಷಕ ಶಿವಬೀರಯ್ಯ ಮಾತನಾಡಿ, ನಮ್ಮ ಸ್ಕೂಲ್‌ನಲ್ಲಿ ನಾಡಹಬ್ಬ ದಸರಾ ಸಂಭ್ರಮದ ಅಂಗವಾಗಿ ನವರಾತ್ರಿಯಲ್ಲಿ ಚಾಮುಂಡೇಶ್ವರಿ ದೇವಿ 9 ಅವತಾರಗಳು, ಅವುಗಳ ಹಿನ್ನೆಲೆ ಮತ್ತು ವಿಶೇಷತೆಗಳನ್ನು ಪ್ರತಿಬಿಂಬಿಸುವ ವೇಷಭೂಷಣಗಳನ್ನು ನಮ್ಮ ಶಾಲೆ ಮಕ್ಕಳು ಧರಿಸಿದ್ದಾರೆ ಎಂದರು.

ಕೊನೆ ದಿನ ವಿಜಯದಶಮಿ ಅಂಗವಾಗಿ ದುರ್ಗಾ ಮಾತೆ ಮಹಿಷಾಸುರನನ್ನು ಸಂಹಾರ ಮಾಡಿದ ಹಾಗೂ ಕೈಲಾಸ ಪರ್ವತದ ಕಲ್ಪನೆ, ರಾಮಾಯಣದ ಕಥಾ ಭಾಗವಾಗಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯರ ವೇಷ ಧರಿಸಿ ರಾಮ ರಾವಣನನ್ನು ಸಂಹರಿಸಿದನ್ನು ಅಭಿನಯಿಸಿ ಪ್ರಸ್ತುತ ಪಡಿಸುವಮೂಲಕ ಮಕ್ಕಳಲ್ಲಿ ನಮ್ಮ ಇತಿಹಾಸ, ಧರ್ಮ, ದೇವತೆಗಳ ಬಗ್ಗೆ ಕಲ್ಪನೆ, ಮೂಡಿಸುವ ಮೂಲಕ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆ ಮೇಲ್ವಿಚಾರಕಿ ಎಚ್.ವಿ.ಶ್ವೇತಕುಮಾರಿ, ಅಕ್ಷತಾ ಅಶ್ವಿನ್ ಕುಮಾರ್, ಸೌಮ್ಯ, ಶೃತಿ, ಸುನೀತಾ, ಸವಿತಾ, ಪೂಜಾ, ಜೊಯೆಶ್ ಜೊಸೆಫ್, ವರಲಕ್ಷ್ಮಿ, ಶಿವಬೀರಯ್ಯ, ನಾಜಿಮಾ ಬೇಗಂ, ಸೂರಜ್, ಪ್ರಜಾಪತಿ, ವಂದಿತ, ಸೇರಿದಂತೆ ಇತರರು ಇದ್ದರು.ನ.15 ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನಕ್ಕೆ ಅರ್ಜಿ ಆಹ್ವಾನ: ಎಂ.ಎಸ್.ರವೀಂದ್ರ

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಫಿಲಂ ಚೇಂಬರ್‌ನಿಂದ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನ.15ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನಿಸಲು ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಚೇಂಬರ್‌ನ ಅಧ್ಯಕ್ಷ ಎಂ.ಎಸ್.ರವೀಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಫಿಲಂ ಚೇಂಬರ್ ವತಿಯಿಂದ ನಡೆಯುತ್ತಿರುವ 5ನೇ ಬೃಹತ್ ಕಾರ್ಯಕ್ರಮವಾಗಿದೆ. ಇದುವರೆಗೂ 800ಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗಿದೆ ಎಂದರು.

ಕಲಾವಿದರು, ಸಮಾಜ ಸೇವಕರು, ಮಾಧ್ಯಮದವರು, ಸಂಗೀತ, ನೃತ್ಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ನವೆಂಬರ್ 10 ಕೊನೆ ದಿನ. ಅಧ್ಯಕ್ಷ ಎಂ.ಎಸ್.ರವೀಅದ್ರ ಅವರ ಸಂಖ್ಯೆಗೆ 2000 ರು. ಶುಲ್ಕ ಪಾವತಿಸಿ, ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.

ಸಂಘಟನಾ ಕಾರ್ಯದರ್ಶಿ ಅಭಿಷೇಕ್ ಮಾತನಾಡಿ, ಜ್ಯೋತಿಷ್ಯ ಶಾಸ್ತ, ಪೌರೋಹಿತ ಶಾಸ್ತಗಳಂತಹ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜೋತಿಷಿ, ಪುರೋಹಿತ, ಅರ್ಚಕರಿಗೂ ಅವಕಾಶ ಕಲ್ಪಿಸಲಾಗಿದೆ. ಅವರು ಸಹ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜವರಪ್ಪ, ಶಂಕರ ಮೂರ್ತಿ ಇದ್ದರು.

ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ಜಾಗೃತಿ ವಹಿಸಿ

ಮಂಡ್ಯ:

ಜಿಲ್ಲೆಯ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆ, ವಸತಿ ಶಾಲೆಗಳಲ್ಲಿ ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಜರುಗದಂತೆ ರಾಜ್ಯ ಮಕ್ಕಳ ರಕ್ಷಣಾ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಜಿಲ್ಲೆಯ ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಗಳು ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಜರುಗದಂತೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ.