ಸಾರಾಂಶ
ಹಾರೋಹಳ್ಳಿ: ತಾಲೂಕಿನ ಮರಳವಾಡಿ ಶ್ರೀ ಮಾತಾ ಅನ್ನಪೂರ್ಣೇಶ್ವರಿ ಋಷಿ ತಪೋ ಕ್ಷೇತ್ರದಲ್ಲಿ 2025ನೇ ಸಾಲಿನ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಆರಂಭದ ದಿನ ದೇವಿಗೆ ಪೂಜೆ ಅಲಂಕಾರ ಹಾಗೂ ಗಣಪತಿ ಹೋಮ ಪ್ರಾರಂಭಿಸಲಾಯಿತು. ಈ ವೇಳೆ ಮಾತನಾಡಿದ ತಪೋ ಕ್ಷೇತ್ರದ ಸತೀಶ್ ಗುರೂಜಿ, ಪರೋತ್ತಮ ಶ್ರೀ ಕಾಂತಾನಂದ ಸರಸ್ವತಿ ಮಹರಾಜ್ ಆಶೀರ್ವಾದದೊಂದಿಗೆ 9 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳಿರುತ್ತವೆ. ಬುಧವಾರ ಭಕ್ತಿ ಗಾನಸುಧಾ, ಗುರುವಾರ ಗಾಯತ್ರಿ ಹೋಮ ಹಾಗೂ ಪಿಟೀಲು ವಾದನ, ಶುಕ್ರುವಾರ ಲಲಿತ ಸಹಸ್ರನಾಮ ಹೋಮ ಹಾಗೂ ಭಕ್ತಿಗಾನ, ಶನಿವಾರ ಮೃತ್ಯಂಜಯ ಮತ್ತು ನವಗ್ರಹ ಹೋಮ, ಸಂಗೀತ ಸೌಧ, ಭಾನುವಾರ ರುದ್ರಹೋಮ, ಹಾರ್ಮೋನಿಯಂ ವಾದನ, ಸೋಮವಾರ ಸರಸ್ವತಿ ಪೂಜೆ ಹಾಗೂ ಸೂಕ್ತ ಹೋಮ, ಗಾನ ರಾಗ ವಾದ್ಯ ವೈಭವ, ಮಂಗಳವಾರ ದುರ್ಗ ಹೋಮ, ಮ್ಯೂಸಿಕ್ ಅಕಾಡೆಮಿಯಿಂದ ಭಕ್ತಿ ಗೀತೆ, ಬುಧವಾರ ಚಂಡಿಕಾ ಹೋಮ, ಆಯುಧಪೂಜೆ, ಭಕ್ತಿಗೀತೆ, ಗುರುವಾರ ವಿಜಯದಶಮಿ ಅಂಗವಾಗಿ ಕುಂಭಾಭಿಷೇಕ ಉತ್ಸವ, ಸಂಜೆ 4 ಗಂಟೆಗೆ ಮಾತ ಅನ್ನಪೂರ್ಣೇಶ್ವರಿ ಬೆಳ್ಳಿ ಪಲ್ಲಕ್ಕಿ ಉತ್ಸವ ಮತ್ತು ಬನ್ನಿ ಪೂಜೆ ಹಮ್ಮಿಕೊಳ್ಳಲಾಗಿದೆ.