ಇಂದಿನಿಂದ ದಾಸರಹಳ್ಳಿ ಸಂಭ್ರಮ ಶುರು

| Published : Feb 02 2024, 01:07 AM IST

ಸಾರಾಂಶ

ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವತಿಯಿಂದ ದಾಸರಹಳ್ಳಿ ಕ್ಷೇತ್ರದಲ್ಲಿ ದಾಸರಹಳ್ಳಿ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಆಯೋಜಿಸುತ್ತಿರುವ ಬೆಂಗಳೂರಿನ ಅತಿದೊಡ್ಡ ಫುಡ್‌, ಫನ್‌ ಆ್ಯಂಡ್‌ ಫ್ಯಾಷನ್‌ ಫೆಸ್ಟಿವಲ್‌ ‘ದಾಸರಹಳ್ಳಿ ಸಂಭ್ರಮ’ ಮೂರು ದಿನ ನಡೆಯಲಿದ್ದು, ಇಂದು (ಜ.2) ಅದ್ಧೂರಿಯಾಗಿ ಪ್ರಾರಂಭವಾಗಲಿದೆ.

‘ಜ.2ರಿಂದ 4ರವರೆಗೆ ಬಾಗಲಕುಂಟೆಯ ಎಂಇಐ ಲೇಔಟ್‌ ಮೈದಾನದಲ್ಲಿ ನಡೆಯಲಿರುವ ‘ದಾಸರಹಳ್ಳಿ ಸಂಭ್ರಮ’ಕ್ಕೆ ಶುಕ್ರವಾರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಮುನಿರಾಜು ಚಾಲನೆ ನೀಡಲಿದ್ದಾರೆ. ಮೂರು ದಿನ ನಡೆಯಲಿರುವ ದಾಸರಹಳ್ಳಿ ಸಂಭ್ರಮದಲ್ಲಿ, ರುಚಿಯಾದ ಸ್ಥಳೀಯ ತಿಂಡಿ, ತಿನಿಸುಗಳನ್ನು ಸವಿಯಬಹುದು. ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ಫ್ಯಾಷನ್, ಲೈಫ್ ಸ್ಟೈಲ್ ವಸ್ತುಗಳ ಖರೀದಿಸಲು ಹಾಗೂ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಇದೊಂದು ಸುವರ್ಣ ಅವಕಾಶ.

ದಾಸರಹಳ್ಳಿ ಸಂಭ್ರಮದಲ್ಲಿ ಕೇವಲ ಸ್ಪರ್ಧೆಗಳು, ವಿವಿಧ ಖಾದ್ಯಗಳ ಸವಿ ಮಾತ್ರವಲ್ಲ. ಯುವ ಸಮುದಾಯವನ್ನು ಸೆಳೆಯಲಿರುವ ‘ಒಂದು ಸರಳ ಪ್ರೇಮ ಕತೆ’, ‘ಪ್ರಣಯಂ’, ‘ಜೂನೀ’ ಚಲನ ಚಿತ್ರ ತಂಡಗಳು ಪಾಲ್ಗೊಂಡು ಉತ್ಸವದ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಲಿವೆ. ಜೊತೆಗೆ ರಾಜಕೀಯ ಗಣ್ಯರು, ಕಲಾವಿದರು ಹಾಗೂ ನಟ ನಟಿಯರು ಭಾಗವಹಿಸಲಿದ್ದಾರೆ,

ಮೂರೂ ದಿನವೂ ದಾಸರಹಳ್ಳಿ ಹಾಗೂ ಸುತ್ತ ಮುತ್ತಲಿನ ಜನತಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ಮಕ್ಕಳಿಗೆ ಫ್ಯಾನ್ಸಿ ಡ್ರೆಸ್, ಕ್ಯೂಟ್ ಬೇಬ್ಯ್, ಹಾಗೂ ಬೊಂಬಾಟ್ ಜೋಡಿ, ಫ್ಯಾಷನ್ ಶೋ, ಕುಕ್ಕುರಿ ಕಾಂಪಿಟೇಷನ್ ಜೊತೆಗೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವೂ ಲಭಿಸಲಿದೆ.

ಇಂದಿನ ಕಾರ್ಯಕ್ರಮ:

ಜ.2ರಂದು ಮಧ್ಯಾಹ್ನ ದಾಸರಹಳ್ಳಿ ಸಂಭ್ರಮ ಆರಂಭಗೊಳ್ಳಲಿದ್ದು, ಸಂಜೆ 5ರವರೆಗೆ ಮುಕ್ತ ವೇದಿಕೆ ಮತ್ತು ಗಾಯನ, ಸಂಜೆ 5ಕ್ಕೆ ಮುದ್ದುಮಗು ಮತ್ತು ವೇಷಭೂಷಣ (ಮಕ್ಕಳಿಗಾಗಿ), ಸಂಜೆ 7ಕ್ಕೆ ಉದ್ಘಾಟನಾ ಸಮಾರಂಭ ಮತ್ತು ದಾಸರಹಳ್ಳಿ ಸಾಧಕರಿಗೆ ಸನ್ಮಾನ ನಡೆಯಲಿದೆ. ಸಂಜೆ 7.30ಕ್ಕೆ ಸಂಗೀತ ಸಂಜೆ, ಡ್ಯೂಯಲ್‌ ವಾಯ್ಸ್‌ ಸಿಂಗರ್‌ ಮಂಜು ಹಾಸನ ಮತ್ತು ಚಲನಚಿತ್ರ ಕಲಾವಿದ ಲೋಕೇಶ್‌, ವೈಷ್ಣವಿ ಮೆಲೋಡಿಸ್‌ ಮತ್ತು ತಂಡ, ಸಾರೆಗಮಪ ಖ್ಯಾತಿಯ ಜ್ಞಾನ ಗುರುರಾಜ್‌ ಅವರಿಂದ ಸಂಗೀತ ಸಂಜೆ. ರಾತ್ರಿ 8.30ಕ್ಕೆ ಬೀಟ್‌ ಬಾಕ್ಸಿಂಗ್‌- ಹ್ಯಾರಿ ಡಿ ಕ್ರೂಜ್‌ ಮತ್ತು ಡಿಜೆ ರಬ್ಜ್‌ ತಂಡದಿದೆ. ರಾತ್ರಿ 9.30ಕ್ಕೆ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮ ಇರಲಿದೆ.