ಕೀರ್ತನೆಗಳಲ್ಲಿ ಸಾಮಾಜಿಕ ಬದುಕಿನ ಸಂದೇಶ ಬಿತ್ತಿದ ದಾಸಶ್ರೇಷ್ಠರು: ಸಾಹಿತಿ ಗಂಗಾಧರ್‌

| Published : Feb 16 2025, 01:45 AM IST

ಕೀರ್ತನೆಗಳಲ್ಲಿ ಸಾಮಾಜಿಕ ಬದುಕಿನ ಸಂದೇಶ ಬಿತ್ತಿದ ದಾಸಶ್ರೇಷ್ಠರು: ಸಾಹಿತಿ ಗಂಗಾಧರ್‌
Share this Article
  • FB
  • TW
  • Linkdin
  • Email

ಸಾರಾಂಶ

ದಾಸ ಸಾಹಿತಿಗಳು ಕೀರ್ತನೆಗಳ ರಚಿಸಿ, ಹಾಡುವ ಮೂಲಕ ಸಮಾಜದ ಜನರಲ್ಲಿ ಬದುಕಿನ ಸಂದೇಶ ಬಿತ್ತಿದರು. ದಾಸ ಸಾಹಿತ್ಯದಲ್ಲಿ ಅನೇಕ ಅಧ್ಯಯನಗಳು ನಡೆಯುತ್ತಿವೆ ಎಂದು ಸಾಹಿತಿ ಬಿ.ಎಲ್. ಗಂಗಾಧರ್ ಹೇಳಿದ್ದಾರೆ.

- ಜಿ.ಬೇವಿನಹಳ್ಳಿಯಲ್ಲಿ ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ದಾಸ ಸಾಹಿತಿಗಳು ಕೀರ್ತನೆಗಳ ರಚಿಸಿ, ಹಾಡುವ ಮೂಲಕ ಸಮಾಜದ ಜನರಲ್ಲಿ ಬದುಕಿನ ಸಂದೇಶ ಬಿತ್ತಿದರು. ದಾಸ ಸಾಹಿತ್ಯದಲ್ಲಿ ಅನೇಕ ಅಧ್ಯಯನಗಳು ನಡೆಯುತ್ತಿವೆ ಎಂದು ಸಾಹಿತಿ ಬಿ.ಎಲ್. ಗಂಗಾಧರ್ ಹೇಳಿದರು.

ಇಲ್ಲಿಗೆ ಸಮೀಪದ ಜಿ.ಬೇವಿನಹಳ್ಳಿಯಲ್ಲಿ ಸಿದ್ದಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರ ಸಂಜೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕು.ಎಚ್‌ಎಂ ಅರುಣ ಸವಿನೆನಪು, ಸದ್ಗುರು ಆರೂಢ ದತ್ತಿ ಮತ್ತು ಶಾರದಮ್ಮ ಎಂ.ಎನ್. ಬಸವರಾಜಪ್ಪ ದತ್ತಿ ಉಪನ್ಯಾಸ ಹಾಗೂ ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಹಾಗೂ ಪರೀಕ್ಷ ಪೂರ್ವ ತಯಾರಿಯಲ್ಲಿ ಅವರು ಉಪನ್ಯಾಸ ನೀಡಿದರು.

ಪುರಂದರದಾಸ, ಕನಕದಾಸ, ಕಬೀರದಾಸ, ಹೆಳವನಕಟ್ಟೆ ಗಿರಿಯಮ್ಮ ಮತ್ತಿತರೆ ನೂರಾರು ದಾರ್ಶನಿಕರು ತಮ್ಮ ಸಾಮಾಜಿಕ ಕಳಕಳಿಯ ಸೇವೆಯಿಂದಾಗಿ ಇಂದು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.

ವಿದ್ಯಾರ್ಥಿಗಳು ಸಮಾಜ ಪರೀಕ್ಷಾ ಸಮಯದಲ್ಲಿ ಮನಸಿನ ಶಾಂತಿ ಕಾಪಾಡಿಕೊಂಡು, ಬೆಟ್ಟದ ತುದಿಯನ್ನು ಸಾಧನೆಯ ಗುರಿಯಾಗಿಸಿಕೊಳ್ಳಬೇಕು. ಪರೀಕ್ಷೆ ಹಬ್ಬವಾಗುವ ಬದಲು, ವಿದ್ಯಾರ್ಥಿಗಳಿಗೆ ಫಲಿತಾಂಶವೇ ಹಬ್ಬವಾಗಬೇಕು. ಮಕ್ಕಳು ಭವಿಷ್ಯ ಉತ್ತಮವಾಗಿ ರೂಪಿಸುವಲ್ಲಿ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.

ನಂದಿತಾವರೆ ಬಸವೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಪಿ. ಉಮೇಶ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾಡಿನಲ್ಲಿ ಹಲವಾರು ಭಾಷೆ, ಜಾತಿ, ಧರ್ಮಗಳಿವೆ. ಮಕ್ಕಳಿಗೆ ಮಾತೃಭಾಷೆಯ ಜ್ಞಾನ ಹೆಚ್ಚಾಗಲು ಕನ್ನಡ ಸಾಹಿತ್ಯ ಪರಿಷತ್ತು ಶಾಲೆಗಳಲ್ಲಿ ಇಂಥ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಪರಿಷತ್ತು ನಡೆದು ಬಂದ ದಾರಿ ವಿವರಿಸಿದರು. ಹೋಬಳಿ ಅಧ್ಯಕ್ಷ ದಂಡಿ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿಗಳಾದ ಎಚ್.ಎಂ. ಸದಾನಂದ, ಎನ್‌.ಎಲ್. ಪ್ರಕಾಶ್, ಕನ್ನಡಪರ ಹೋರಾಟಗಾರ ಎಚ್.ಬಿ. ರುದ್ರಗೌಡ, ಕಸಾಪ ಪದಾಧಿಕಾರಿ ಎ.ರಿಯಾಜ್ ಅಹ್ಮದ್, ಚಂದ್ರಶೇಖರ್, ಪ್ರಭಾರ ಮುಖ್ಯ ಶಿಕ್ಷಕ ಕಮಲಾಕ್ಷಪ್ಪ ಕಲ್ಲೇರ, ಶಿಕ್ಷಕರಾದ ಕೆ.ಎಂ. ರವೀಂದ್ರ, ನಾಗನಗೌಡ, ಶಿವನಗೌಡ ಇದ್ದರು.

ಸ್ಥಳದಲ್ಲಿ ಕೇಳಲಾದ ಕನ್ನಡ ಭಾಷೆಯ ರಸಪ್ರಶ್ನೆಗೆ ವಿದ್ಯಾರ್ಥಿಗಳಾದ ಪಿ.ವೈ. ಸುಮಾ, ಕೆ.ಎಂ.ಚಿಂಚನ, ಪವನ್‌ಕುಮಾರ್, ಅನು, ಸಿಂಚನ, ಯಶವಂತ್‌ ಬಹುಮಾನವಾಗಿ ಪುಸ್ತಕ ಪಡೆದರು.

- - - -೧೫ಎಂಬಿಆರ್೧: ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕ ಬಿ.ಪಿ. ಉಮೇಶ್ ಉದ್ಘಾಟಿಸಿದರು.