ಡೇಟಾ ಎಂಟ್ರಿ ಆಪರೇಟರ್‌ಗಳ ವಜಾ: ರೋಗಿಗಳ ಪರದಾಟ

| Published : May 06 2025, 12:20 AM IST

ಸಾರಾಂಶ

೮ ವರ್ಷಗಳ ಹಿಂದೆ ತಾಲೂಕು ಆಸ್ಪತ್ರೆಗಳಿಗೆ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕಮಾಡಿಕೊಳ್ಳಲಾಗಿತ್ತು. ಅದರಂತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐವರು ಮಂದಿ ನೇಮಕವಾಗಿ ಕೆಲಸ ಮಾಡುತ್ತಿದ್ದರು. ಇದೀಗ ಸರ್ಕಾರ ಸಿಬ್ಬಂದಿಯನ್ನು ಕಡಿಮೆ ಮಾಡಲು ದಿಢೀರನೆ ಡೇಟಾ ಎಂಟ್ರಿ ಆಪರೇಟರ್‌ಗಳ ಹುದ್ದೆಯನ್ನು ಮೇ ೧ರಿಂದ ಸ್ಥಗಿತಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಇ- ಹಾಸ್ಪಿಟಲ್ ಕಾರ್ಯಕ್ರಮದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನೇಮಕವಾಗಿದ್ದ ಡೇಟಾ ಎಂಟ್ರಿ ಆಪರೇಟ್‌ಗಳನ್ನು ಸರ್ಕಾರ ದಿಢೀರನೆ ಯಾವುದೇ ಸೂಚನೆ ನೀಡದೆ ಕೆಲಸದಿಂದ ತೆಗೆದಿರುವ ಪರಿಣಾಮ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ೫ ಮಂದಿ ಉದ್ಯೋಗದಿಂದ ವಂಚಿತರಾಗಿ ಅವರನ್ನೇ ಆಶ್ರಯಿಸಿದ್ದ ಅವರ ಕುಟುಂಬ ಬೀದಿಗೆ ಬೀಳುವಂತಾಗಿದೆ.ಕಳೆದ ೮ ವರ್ಷಗಳ ಹಿಂದೆ ತಾಲೂಕು ಆಸ್ಪತ್ರೆಗಳಿಗೆ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕಮಾಡಿಕೊಳ್ಳಲಾಗಿತ್ತು. ಅದರಂತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐವರು ಮಂದಿ ನೇಮಕವಾಗಿ ಕೆಲಸ ಮಾಡುತ್ತಿದ್ದರು. ಇದೀಗ ಸರ್ಕಾರ ಸಿಬ್ಬಂದಿಯನ್ನು ಕಡಿಮೆ ಮಾಡಲು ದಿಢೀರನೆ ಡೇಟಾ ಎಂಟ್ರಿ ಆಪರೇಟರ್‌ಗಳ ಹುದ್ದೆಯನ್ನು ಮೇ ೧ರಿಂದ ಸ್ಥಗಿತಗೊಳಿಸುವಂತೆ ಆರೋಗ್ಯ ಇಲಾಖೆಯ ಉಪ ನಿರ್ದೇಶಕರು ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿಗೆ ಪತ್ರ ಬರೆದಿದೆ.

ರೋಗಿಗಳ ಪರದಾಟ

ಡಿಇಒಗಳನ್ನು ಆಸ್ಪತ್ರೆ ಹಂತದಲ್ಲಿ ಹೊರಗುತ್ತಿದೆ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳಲಾಗಿತ್ತು. ಮತ್ತೊಂದು ಕಡೆ ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್‌ಗಳಿಲ್ಲದೆ ನಿತ್ಯ ೧ ಸಾವಿರ ಒಳ ರೋಗಿಗಳು ಬರುವ ಚೀಟಿ ಬರೆಸಿಕೊಳ್ಳಲು ಹಾಗೂ ಆಸ್ಪತ್ರೆಗೆ ದಾಖಲಾಗಲು ಡೇಟಾ ಆಪರೇಟರ್‌ಗಳಿಲ್ಲದೆ ರೋಗಿಗಳು ಪರದಾಡಿದರು.ಆರೋಗ್ಯ ಇಲಾಖೆಯಿಂದ ಇ-ಹಾಸ್ಪಿಟಲ್ ಕಾರ್ಯಕ್ರಮದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇರೆಗೆ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು, ಇವರು ಕೌಂಟರ್‌ಗಳಲ್ಲಿ ಒಪಿಡಿ ಚೀಟಿ ನೀಡುವುದು, ಔಷಧ ಮಳಿಗೆ, ದಾಖಲೆ ಕೊಠಡಿ ಹೀಗೆ ವಿವಿಧ ರೀತಿಯ ಕಾರ್ಯನಿರ್ವಹಿಸುತ್ತಿದ್ದರು. ಚೀಟಿ ನೀಡುವವರಿಲ್ಲ

ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಕೆಸಲದಿಂದ ವಜಾ ಮಾಡಿರುವ ಕಾರಣ, ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಗ್ಗೆಯಿಂದಲೇ ನೂರಾರು ಒಳರೋಗಿಗಳು ಚೀಟಿ ಪಡೆಯಲು ಕೌಂಟರ್ ಬಳಿ ನಿಂತರೂ ಯಾವ ಸಿಬ್ಬಂದಿಯೂ ಇಲ್ಲದೆ ಪರದಾಡಿದರು, ಜನರು ಹೆಚ್ಚಾಗಿ ನೂಕುನುಗ್ಗಾಟ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿಯನ್ನೇ ಬರವಣಿಗೆಯಲ್ಲಿ ಚೀಟಿ ನೀಡಲು ಆಯೋಜಿಸಲಾಯಿತು.

ರೋಗಿಗಳಿಗೆ ಉಂಟಾಗುತ್ತಿರುವ ತೊಂದರೆ ನಿವಾರಿಸಲು ಸರ್ಕಾರ ಡೇಟಾ ಸಿಬ್ಬಂದಿಯನ್ನು ಸಿಬ್ಬಂದಿಯನ್ನು ಮತ್ತೆ ನೇಮಿಸಿ ಆಸ್ಪತ್ರೆಯಲ್ಲಿ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.