ಸಾರಾಂಶ
ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯ ನೀತಿ ರೂಪಿಸಲು ದತ್ತಾಂಶವು ಮಹತ್ವದ ಪಾತ್ರ ವಹಿಸುತ್ತಿದ್ದು ಗುಣಮಟ್ಟದ ದತ್ತಾಂಶ ಸಂಗ್ರಹಣೆ ಮಹತ್ವದಾಗಿದೆ.
ಧಾರವಾಡ:
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಸಾಂಖ್ಯಿಕ ದಿನ ಆಚರಿಸಲಾಯಿತು.ಕರ್ನಾಟಕ ವಿಶ್ವವಿದ್ಯಾಲಯ ಸಂಖ್ಯಾಶಾಸ್ತ್ರ ವಿಷಯ ಪ್ರಾಧ್ಯಾಪಕ ಡಾ. ನಾಗೇಶ ಎಸ್. 2024ನೇ ಸಾಲಿನ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆಯ ಧ್ಯೇಯ ವಾಕ್ಯ-ನಿರ್ಧಾರ ತೆಗೆದುಕೊಳ್ಳುವುದಕ್ಕೆ ದತ್ತಾಂಶ ಬಳಕೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯ ನೀತಿ ರೂಪಿಸಲು ದತ್ತಾಂಶವು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಕವಿವಿ ಸಂಖ್ಯಾಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಎಂ.ಎಸ್. ಚಿಕ್ಕಗೌಡ್ರರ, ಪ್ರೊ. ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರು ಭಾರತದಲ್ಲಿ ಸಾಂಖ್ಯಿಕ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ ಎಂದರು.ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳ, ಗುಣಮಟ್ಟದ ದತ್ತಾಂಶ ಸಂಗ್ರಹಣೆ ಮಹತ್ವದಾಗಿದೆ. ದತ್ತಾಂಶ ಸಂಗ್ರಹಣೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲು ಸೂಚಿಸಿದರು. ಜಿಲ್ಲಾ ಕಚೇರಿಯ ಸಹಾಯಕ ಸಾಂಖ್ಯಿಕ ಅಧಿಕಾರಿ ಗಂಗಮ್ಮ ಅಕ್ಕಿ ಅವರು ದತ್ತಾಂಶಗಳ ಬಳಕೆ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜೆ.ಪಿ. ಅರಕೇರಿಮಠ ಇದ್ದರು.
ವಿದ್ಯಾರ್ಥಿಗಳಿಗೆ ಯುಜ್ ಆಪ್ ಡಾಟಾ ಪೊರ್ ಡಿಸಿಜನ್ ಮೇಕಿಂಗ್ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಅಧಿಕಾರಿಗಳಾದ ಮಾರುತಿ ತಳವಾರ, ಆರ್.ಡಿ. ಜೋಶಿ, ಎಸ್.ವಿ. ಹೊಂಬಳಮಠ, ಬಿ.ಬಿ. ಗಾವಡೆ, ಉಷಾ ಕನ್ನೂರ ಇದ್ದರು.