ಸಂಖ್ಯಾಶಾಸ್ತ್ರವು ದತ್ತಾಂಶಗಳ ವಿಶ್ಲೇಷಣೆ, ಕೃಷಿ ವಿಜ್ಞಾನ ಸಂಶೋಧನೆ, ವಿಮೆ, ಮಾರುಕಟ್ಟೆ ಸಂಶೋಧನೆ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಂಖ್ಯಾಶಾಸ್ತ್ರವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ.
ಧಾರವಾಡ:
ಡಾಟಾ ಸೈನ್ಸ್ ಮತ್ತು ಎಐ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಸಂಖ್ಯಾಶಾಸ್ತ್ರದ ಕೊಡುಗೆ ಬಹಳ ಇದೆ ಎಂದು ಕವಿವಿ ಸಂಖ್ಯಾಶಾಸ್ತ್ರದ ವಿಭಾಗದ ಮುಖ್ಯಸ್ಥ ಪ್ರೊ. ಎ.ಎಸ್. ತಳವಾರ ಹೇಳಿದರು.ಕರ್ನಾಟಕ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ವತಿಯಿಂದ ಬಿಸಿಎ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಸಂಖ್ಯಾಶಾಸ್ತ್ರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಸಂಖ್ಯಾಶಾಸ್ತ್ರದ ಸ್ಟಡಿ ಸರ್ಕಲ್ ದ ''''''''ಸ್ಟ್ಯಾಟೋರಾ'''''''' ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಂಖ್ಯಾಶಾಸ್ತ್ರವು ದತ್ತಾಂಶಗಳ ವಿಶ್ಲೇಷಣೆ, ಕೃಷಿ ವಿಜ್ಞಾನ ಸಂಶೋಧನೆ, ವಿಮೆ, ಮಾರುಕಟ್ಟೆ ಸಂಶೋಧನೆ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಂಖ್ಯಾಶಾಸ್ತ್ರವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ. ತಂತ್ರಾಂಶದ ಅಭಿವೃದ್ಧಿಯಲ್ಲಿ ಸಂಖ್ಯಾಶಾಸ್ತ್ರದ ಮಹತ್ವದ ಪಾತ್ರ ವಹಿಸಿದೆ. ಸ್ಟಡಿ ಸರ್ಕಲ್‌ಗಳ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಸ್ಟಡಿ ಸರ್ಕಲ್‌ಗಳು ವಿದ್ಯಾರ್ಥಿಗಳ ನಾಯಕತ್ವ, ಸಂವಹನ ಕೌಶಲಗಳ ವೃದ್ಧಿಗೆ ಬಹಳ ಸಹಕಾರಿಯಾಗಿವೆ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಕಡಿಮೆ ಇದ್ದು, ಭವಿಷ್ಯತ್ತಿನಲ್ಲಿ ಅವಕಾಶವಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದು ಇಂದಿನ ಅಗತ್ಯವಿದೆ ಎಂದ ಅವರು, ಸಂಖ್ಯಾಶಾಸ್ತ್ರದ ವಿಭಾಗದ ಹಳೆಯ ವಿದ್ಯಾರ್ಥಿಗಳನ್ನು ಸ್ಟಡಿ ಸರ್ಕಲ್ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.ಸಂಖ್ಯಾಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಎನ್. ಮ್ಯಾಗೇರಿ ಮಾತನಾಡಿ, ಸಂಖ್ಯಾಶಾಸ್ತ್ರದ ಅಧ್ಯಯನದಿಂದ ಸಂಶೋಧನೆ, ಬೋಧನೆಯಲ್ಲಿ ಖಾಸಗಿ ಕಂಪನಿಗಳಲ್ಲಿ ವಿಪುಲವಾದ ಅವಕಾಶಗಳಿವೆ. ಸಂಖ್ಯಾಶಾಸ್ತ್ರದ ಸಮಾಜ ವಿಜ್ಞಾನ, ವಿಜ್ಞಾನ ತಂತ್ರಜ್ಞಾನ, ಸಾಹಿತ್ಯ ಭಾಷಾ ವಿಜ್ಞಾನದಲ್ಲಿ ಸಂಖ್ಯಾಶಾಸ್ತ್ರವನ್ನು ಬಳಸಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಐ.ಸಿ. ಮುಳಗುಂದ ಮಾತನಾಡಿದರು. ವಿಭಾಗದ ಮುಖ್ಯಸ್ಥರಾದ ಡಾ. ಕೀರ್ತಿ ಅಷ್ಠಗಿಮಠ, ಪ್ರಾಧ್ಯಾಪಕ ಡಾ. ಶ್ರೀಶೈಲ ಗಣಿ, ಡಾ. ಶ್ರೀದೇವಿ ಹಾಲವರ, ಡಾ. ಭೀಮಣ್ಣ , ಡಾ. ಪ್ರಭಾಕರ ಕಾಂಬಳೆ ಇದ್ದರು.