ದೇಶಕ್ಕೆ 6ನೇ ರ್ಯಾಂಕ್‌ ಪಡೆದ ದತ್ತಾತ್ರೇಯ

| Published : Sep 24 2025, 01:00 AM IST

ಸಾರಾಂಶ

ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಹಾರನಹಳ್ಳಿ ಹೋಬಳಿ ಬೋರನಕೊಪ್ಪಲು ಗ್ರಾಮದ, ಹಾಲಿ ಮೈಸೂರಿನಲ್ಲಿ ವಾಸವಿರುವ ಬಿ.ವೈ. ಸೋಮಶೇಖರಪ್ಪ ಮತ್ತು ದಾಕ್ಷಾಯಿಣಿ ದಂಪತಿಯ ಪುತ್ರನಾಗಿರುವ ಬಿ.ಎಸ್. ದತ್ತಾತ್ರೇಯ ಕೋಲಾರ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ(ಹಾರ್ಟಿಕಲ್ಚರ್) ವ್ಯಾಸಂಗ ಮಾಡಿದ್ದಾರೆ. ಕಳೆದ ಜುಲೈ ತಿಂಗಳಿನಲ್ಲಿ ನಡೆದ ಕೃಷಿ ಸಂಶೋದನಾ ಸ್ನಾತಕೋತ್ತರ ಅರ್ಹತಾ ಪರೀಕ್ಷೆಯಲ್ಲಿ 3910 ವಿದ್ಯಾರ್ಥಿಗಳ ಪೈಕಿ ಈತ ದೇಶಕ್ಕೆ 6ನೇ ರ‍್ಯಾಂಕ್ ಪಡೆಯುವ ಮೂಲಕ ಅಪ್ರತಿಮ ಸಾಧನೆ ತೋರುವ ಮೂಲಕ ಬೋರನಕೊಪ್ಪಲು ಗ್ರಾಮವನ್ನು ದೇಶಕ್ಕೆ ಪರಿಚಯಿಸಿದ್ದಾನೆ.

ಅರಕಲಗೂಡು: ಕೊಣನೂರಿನ ಗೊರೆದಿಣ್ಣೆ ರಸ್ತೆಯಲ್ಲಿರುವ ಕೆಸಿಪಿ ಲಿಕ್ಕರ್ಸ್‌ ಕ್ಯಾಷಿಯರ್‌ನ ಪುತ್ರ ಬಿ.ಎಸ್. ದತ್ತಾತ್ರೇಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್‌ನಲ್ಲಿ ದೇಶಕ್ಕೆ 6ನೇ ರ‍್ಯಾಂಕ್ ಪಡೆದು ಹಾಸನ ಜಿಲ್ಲೆಗೆ ಹೆಮ್ಮೆಯಾಗಿದ್ದಾನೆ.