ದಾವಣಗೆರೆಯ ದೂಡಾ: ₹1.3 ಕೋಟಿ ಉಳಿತಾಯ ಬಜೆಟ್‌: ಆಯುಕ್ತ ತಿಮ್ಮಪ್ಪ

| Published : Mar 02 2025, 01:18 AM IST

ದಾವಣಗೆರೆಯ ದೂಡಾ: ₹1.3 ಕೋಟಿ ಉಳಿತಾಯ ಬಜೆಟ್‌: ಆಯುಕ್ತ ತಿಮ್ಮಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಗೆ 100 ಕೋಟಿ ರು. ಮೀಸಲು, ಮಹಾ ಯೋಜನೆಗೆ ನಕ್ಷೆ ತಯಾರಿಸಲು 75 ಲಕ್ಷ ರು., ವಿವಿಧ ಬಡಾವಣೆಗೆ ರಸ್ತೆ ನಿರ್ಮೂಣ, ಕೆರೆಗಳ ಅಭಿವೃದ್ಧಿ, ವಿದ್ಯುತ್‌ ದೀಪ ಅಳವಡಿಕೆ ಸೇರಿದಂತೆ 2025-26ನೇ ಸಾಲಿನಲ್ಲಿ 1.3 ಕೋಟಿ ರು. ಉಳಿತಾಯ ಬಜೆಟ್‌ನ್ನು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಶನಿವಾರ ಮಂಡಿಸಿದೆ.

ದಾವಣಗೆರೆ: ಜಿಲ್ಲೆಗೆ 100 ಕೋಟಿ ರು. ಮೀಸಲು, ಮಹಾ ಯೋಜನೆಗೆ ನಕ್ಷೆ ತಯಾರಿಸಲು 75 ಲಕ್ಷ ರು., ವಿವಿಧ ಬಡಾವಣೆಗೆ ರಸ್ತೆ ನಿರ್ಮೂಣ, ಕೆರೆಗಳ ಅಭಿವೃದ್ಧಿ, ವಿದ್ಯುತ್‌ ದೀಪ ಅಳವಡಿಕೆ ಸೇರಿದಂತೆ 2025-26ನೇ ಸಾಲಿನಲ್ಲಿ 1.3 ಕೋಟಿ ರು. ಉಳಿತಾಯ ಬಜೆಟ್‌ನ್ನು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಶನಿವಾರ ಮಂಡಿಸಿದೆ.

ನಗರದ ದೂಡಾ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಧ್ಯಕ್ಷತೆಯ ಬಜೆಟ್‌ ಸಭೆಯಲ್ಲಿ ದಾವಣಗೆರೆ-ಹರಿಹರ ಅವಳಿ ನಗರದಲ್ಲಿ ಹೊಸ ಬಡಾವಣೆಗಳ ನಿರ್ಮಾಣ, ವಿವಿಧ ಬಡಾವಣೆಗೆ ರಸ್ತೆ ಸೌಕರ್ಯ, ಕೆರೆಗಳ ಅಭಿವೃದ್ಧಿ ಸೇರಿದಂತೆ 185.44 ಕೋಟಿ ರು. ಆದಾಯ ನಿರೀಕ್ಷೆಯನ್ನು ಬಜೆಟ್ ಹೊಂದಿದೆ.

ಸಭೆಯ ನಂತರ ಬಜೆಟ್ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ದೂಡಾ ಆಯುಕ್ತ ತಿಮ್ಮಪ್ಪ ಹುಲ್ಮನಿ, ವಿವಿಧ ಅಭಿವೃದ್ಧಿ ಕಾರ್ಯಕ್ಕೆ 184.40 ಕೋಟಿ ವೆಚ್ಚ ಮಾಡಲು ಉದ್ದೇಶಿಸಿದೆ. ಹೊಸ ಬಡಾವಣೆಗಳ ನಿರ್ಮಾಣಕ್ಕೆ 100 ಕೋಟಿ ಕಾಯ್ದಿರಿಸಿದೆ. ದಾವಣಗೆರೆ-ಹರಿಹರ ಮಹಾ ಯೋಜನೆಗೆ ನಕ್ಷೆ ತಯಾರಿಸಲು 75 ಲಕ್ಷ ರು. ಕಾಯ್ದಿರಿಸಿದೆ. ಬೇತೂರು ಗ್ರಾಮದಿಂದ ಬಸಾಪುರದವರೆಗೆ ವರ್ತುಲ ರಸ್ತೆ ನಿರ್ಮಿಸಲು 2.50 ಕೋಟಿ ರು. ಮೀಸಲಿಟ್ಟಿದೆ ಎಂದು ತಿಳಿಸಿದರು.

ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಶಾಸಕರಾದ ಮಾಯಕೊಂಡ ಕೆ.ಎಸ್.ಬಸವಂತಪ್ಪ, ಹರಿಹರ ಬಿ.ಪಿ.ಹರೀಶ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್‌, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ನಾಮ ನಿರ್ದೇಶಿತ ಸದಸ್ಯರಾದ ಎಂ.ಆರ್.ವಾಣಿ ಬಕ್ಕೇಶ ನ್ಯಾಮತಿ, ಎಚ್.ಗಿರೀಶ, ಎಚ್.ಜಬ್ಬಾರ್ ಖಾನ್, ಎಂ.ಮಂಜುನಾಥ ತಕ್ಕಡಿ ಇತರರು ಇದ್ದರು.