ವಿಜಯವಾಡದಲ್ಲಿ ದಾವಣಗೆರೆ ಯೋಧ ಆತ್ಮಹತ್ಯೆ

| Published : Mar 20 2025, 01:20 AM IST

ಸಾರಾಂಶ

ಜೀವನದಲ್ಲಿ ಜಿಗುಪ್ಸೆಗೊಂಡ ದಾವಣಗೆರೆ ತಾಲೂಕು ಮೂಲದ ಯೋಧನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದ ವಿಜಯವಾಡದ ಬಳಿ ಸೋಮವಾರ ನಡೆದಿದೆ.

ದಾವಣಗೆರೆ: ಜೀವನದಲ್ಲಿ ಜಿಗುಪ್ಸೆಗೊಂಡ ದಾವಣಗೆರೆ ತಾಲೂಕು ಮೂಲದ ಯೋಧನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದ ವಿಜಯವಾಡದ ಬಳಿ ಸೋಮವಾರ ನಡೆದಿದೆ.

ತಾಲೂಕಿನ ಕೈದಾಳೆ ಗ್ರಾಮದ ಯೋಧ ಉಮೇಶ (34) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ವಿಜಯವಾಡದ ಬಳಿ ಸೋಮವಾರ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಯೋಧ ಉಮೇಶ ಸಾವಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೀವನದಲ್ಲಿ ಆತ ಜಿಗುಪ್ಸೆಗೊಂಡಿದ್ದರು ಎನ್ನಲಾಗಿದೆ.ಛತ್ತೀಸ್‌ಘಡದ ಕೊಂಟಾ ಬೆಟಾಲಿಯನ್‌-217ರಲ್ಲಿ ಯೋಧ ಉಮೇಶ ಕೆಲಸ ಮಾಡುತ್ತಿದ್ದರು. ಯೋಧನ ಪಾರ್ಥೀವ ಶರೀರ ಬುಧವಾರ ಗ್ರಾಮಕ್ಕೆ ತಲುಪಿದ್ದು, ಮಧ್ಯಾಹ್ನ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

- - -

- - -

-19ಕೆಡಿವಿ41, 42, 43, 44:

ಯೋಧ ಉಮೇಶ