ಸಮರ್ಪಕ ಕಾರ್ಯನಿರ್ವಹಣೆಗೆ ಡಿಸಿ ಸೂಚನೆ

| Published : Mar 31 2024, 02:14 AM IST

ಸಾರಾಂಶ

ತಾಲೂಕಿನ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ಚೆಕ್ ಪೋಸ್ಟ್‌ಗಳಿಂದ ಯಾವುದೇ ರೀತಿಯ ಗಮನಾರ್ಹ ಕಾರ್ಯ ನಡೆಯುತ್ತಿಲ್ಲ. ಈ ಕುರಿತು ಹೆಚ್ಚಿನ ತಪಾಸಣೆ ನಡೆಸಿ ಜವಾಬ್ದಾರಿ ವಹಿಸಿಬೇಕೆಂದು ಸೂಚಿಸಿದೆ.

ಕನ್ನಡಪ್ರಭ ವಾರ್ತೆ ಹುನಗುಂದ

ಹುನಗುಂದ ಮತಕ್ಷೇತ್ರದಲ್ಲಿ ತಾಲೂಕು ಮಟ್ಟದಲ್ಲಿ ಇಲ್ಲಿಯವರೆಗೆ ನಡೆದಂತಹ ಚುನಾವಣಾ ಚುಟುವಟಿಕೆಗಳು ನಮ್ಮ ತಂಡಕ್ಕೆ ಸಮಾಧಾನಕರವಾಗಿಲ್ಲ. ಹುನಗುಂದ ಕ್ಷೇತ್ರದಲ್ಲಿ ಸ್ವೀಪ್ ಚಟುವಟಿಕೆಗಳ ಜೊತೆಗೆ ಎಲ್ಲ ಬಗೆಯ ಚುನಾವಣಾ ಕಾರ್ಯಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹೇಳಿದರು.

ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಭವನದಲ್ಲಿ ಚುನಾವಣಾ ತಯಾರಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುನಗುಂದ ಮತಕ್ಷೇತ್ರದಲ್ಲಿ ತಾಲೂಕು ಮಟ್ಟದಲ್ಲಿ ಕೈಗೊಂಡ ಲೋಕಸಭಾ ಚುನಾವಣಾ ಸಿದ್ಧತೆ ಬಗ್ಗೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ತಾಲೂಕಿನ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ಚೆಕ್ ಪೋಸ್ಟ್‌ಗಳಿಂದ ಯಾವುದೇ ರೀತಿಯ ಗಮನಾರ್ಹ ಕಾರ್ಯ ನಡೆಯುತ್ತಿಲ್ಲ. ಈ ಕುರಿತು ಹೆಚ್ಚಿನ ತಪಾಸಣೆ ನಡೆಸಿ ಜವಾಬ್ದಾರಿ ವಹಿಸಿಬೇಕೆಂದು ಸೂಚಿಸಿದೆ. ಇನ್ನೂ ಹೆಚ್ಚಿನ ಸೂಕ್ತ ನಿರ್ದೇಶನಗಳನ್ನು ನೀಡಲು ಎಲ್ಲ ವರ್ಗದ ಅಧಿಕಾರಿಗಳ ಈ ಸಭೆ ನಡೆಸಲಾಯಿತು ಎಂದು ತಿಳಿಸಿದರು. ಕ್ಷೇತ್ರದಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳ ಭೇಟಿ ನೀಡುವುದು ಮತ್ತು ಎಲ್ಲ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಅಧಿಕಾರಿ ವರ್ಗ ಕ್ರಮ ಕೈಗೊಳ್ಳಬೇಕು. ಕಳೆದ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿತ್ತು ಎಂಬ ಪ್ರಶ್ನೆಗೆ ಸರ್ಕಾರ ಮತ್ತು ನಮ್ಮ ಅಧಿಕಾರಿ ವರ್ಗ 100ರಷ್ಟು ಮತದಾನಕ್ಕೆ ಶ್ರಮಿಸುತ್ತೇವೆ. ಆದರೆ, ತಾವು ತಮ್ಮವರು ಹೀಗೆ ಎಲ್ಲ ಜನರು ಮುಂದೆ ಬಂದಾಗ ಶೇ.100ರಷ್ಟು ಮತದಾನ ಆಗುತ್ತದೆ. ಈ ಬಗ್ಗೆ ವಿವಿಧ ರೀತಿಯ ಸಾರ್ವಜನಿಕರು ಮತದಾನದ ಬಗ್ಗೆ ಎಚ್ಚರಗೊಳ್ಳಬೇಕು. ಮತ್ತು ಮತಗಟ್ಟೆ ಕಡೆ ಬರುವ ಹಾಗೆ ಪಂಚಾಯತ್ ಮಟ್ಟದಲ್ಲಿ ಸ್ವೀಪ್ ಚಟುವಟಿಕೆಯ ಮೂಲಕ ಹಲವು ರ್‍ಯಾಲಿ, ರಂಗೋಲಿ ಸ್ಪರ್ಧೆ ಹೀಗೆ 14 ಸಾಂಸ್ಕೃತಿ ಚಟುವಟಿಕೆಗಳನ್ನು ಹಾಕಿಕೊಳ್ಳಲಾಗಿದೆ. ಮತಗಟ್ಟೆ ಗುರುತಿಸಿ ಈ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ತಿಳಿಸಿದರು.

ಎಲ್ಲರೂ ಚುನಾವಣಾ ಆಯೋಗದ ರಾಯಬಾರಿಗಳಾಗಿ ಕಾರ್ಯೋನ್ಮುಖರಾದಾಗ ಶೇ.100ರಷ್ಟು ಮಾತದಾನ ಆಗೇ ಆಗುತ್ತದೆ. 85 ವಯಸ್ಸಿನ ವಯೋವೃದ್ದರು ಮತ್ತು ವಿಕಲಚೇತನರು ಮತಗಟ್ಟೆಗಳಲ್ಲಿ ಮತದಾನ ಮಾಡಲು ವಿಶೇಷ ಸೌಲಭ್ಯ ಒದಗಿಸಿದೆ. ಆದರೆ, ಅವರು ವೈದ್ಯಕೀಯ ಪಮಾಣ ಪತ್ರ ನೀಡಿದಲ್ಲಿ ಮಾತ್ರ, ಅವರು ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಲಾಗುವುದು ಎಂದರು.

ಚೆಕ್ ಪೋಸ್ಟ್‌ಗಳಲ್ಲಿ ನಡೆಯುವ ಎಲ್ಲ ಚಟುವಟಿಕೆಗಳನ್ನು ನಾವು ವಾರ್‌ ರೂಮ್‌ನಲ್ಲಿ ಗಮನಿಸುತ್ತೇವೆ. ಆದರೂ, ಈ ಭಾಗದಲ್ಲಿ ಸಮರ್ಪಕವಾಗಿ ಕಾರ್ಯ ಆಗುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ಹಾಗೂ ಅದಕ್ಕೆ ಕಾರಣಗಳನ್ನು ಹುಡುಕಿ ಹೆಚ್ಚಿನ ಕ್ರಮಕ್ಕೆ ಸೂಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಎಲ್ಲ ಚೆಕ್ ಪೋಸ್ಟ್‌ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತವೆ. ಈಗ ಓಡಾಡುವ ವಾಹನಗಳನ್ನು ಸರ್ವೆ ಮಾಡಿ ಅವಶ್ಯಕತೆ ಇದ್ದಲ್ಲಿ ಚೆಕ್ ಪೋಸ್ಟ್‌ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ, ಡಿವೈಎಸ್ಪಿ ವಿಶ್ವನಾಥರಾವ ಕುಲಕರ್ಣಿ, ಸಿಪಿಐ ಸುನೀಲ ಸವದಿ, ತಹಸೀಲ್ದಾರ್‌ ನಿಂಗಪ್ಪ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ತಾಪಂ ಇಒ ಮುರಳಿ ದೇಶಪಾಂಡೆ, ಬಿಇಒ ಜಾಸ್ಮಿನ್ ಕಿಲ್ಲೇದಾರ ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಮಟ್ಟಿದ ಅಧಿಕಾರಿಗಳು ಇದ್ದರು.

ಕೋಟ್..

ಚೆಕ್ ಪೋಸ್ಟ್‌ಗಳಲ್ಲಿ ನಡೆಯುವ ಎಲ್ಲ ಚಟುವಟಿಕೆಗಳನ್ನು ನಾವು ವಾರ್‌ ರೂಮ್‌ನಲ್ಲಿ ಗಮನಿಸುತ್ತೇವೆ. ಆದರೂ, ಈ ಭಾಗದಲ್ಲಿ ಸಮರ್ಪಕವಾಗಿ ಕಾರ್ಯ ಆಗುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ಹಾಗೂ ಅದಕ್ಕೆ ಕಾರಣಗಳನ್ನು ಹುಡುಕಿ ಹೆಚ್ಚಿನ ಕ್ರಮಕ್ಕೆ ಸೂಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಎಲ್ಲ ಚೆಕ್ ಪೋಸ್ಟ್‌ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತವೆ. ಈಗ ಓಡಾಡುವ ವಾಹನಗಳನ್ನು ಸರ್ವೆ ಮಾಡಿ ಅವಶ್ಯಕತೆ ಇದ್ದಲ್ಲಿ ಚೆಕ್ ಪೋಸ್ಟ್‌ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.

ಕೆ.ಎಂ. ಜಾನಕಿ. ಜಿಲ್ಲಾ ಚುನಾವಣಾಧಿಕಾರಿ

---

30;ಎಚ್‌ಎನ್‌ಡಿ;1;

ಪೋಟೋ ವಿವರ- ಹುನಗುಂದ ತಾಲೂಕ ಆಡಳಿತದ ಮುಂದೆ ಮತದಾನ ಜಾಗೃತಿ ಜಾಥಾಕ್ಕೆ ಜಿಲ್ಲಾ ಚುನಾವಣಾಧಿಕಾರಿ ಕೆ.ಎಂ. ಜಾನಕಿ ಚಾಲನೆ ನೀಡಿದರು. ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ ಇದ್ದರು.