ಮುಂಜಾನೆಯಿಂದ ಮಧ್ಯರಾತ್ರಿವರೆಗೂ ಓವರ್‌ಲೋಡ್ ಟಿಪ್ಪರ್ ಹಾವಳಿ
ಜೂ.1ರಂದು ಶಾಲಾವಧಿಯಲ್ಲಿ ಟಿಪ್ಪರ್ ಸಂಚಾರ ನಿಷೇಧ ಹೇರಿದ್ದ ಡೀಸಿಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಜಿಲ್ಲಾದ್ಯಂತ ಶಾಲಾ ಆರಂಭ ಮತ್ತು ಅಂತ್ಯದ ಸಮಯದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ ಆದರೆ ಮಿನಿ ಬಳ್ಳಾರಿ ಎಂದೇ ಕರೆಯಲ್ಪಡುವ ತಾಲೂಕಿನ ಹಿರೀಕಾಟಿ ಗ್ರಾಮದೊಳಗೆ ಟಿಪ್ಪರ್‌ಗಳು ಸಂಚರಿಸುತ್ತಿವೆ ಹಾಗೂ ಹಿರೀಕಾಟಿ ಗೇಟ್ ಬಳಿಯೂ ಶಾಲಾ ಮಕ್ಕಳು ತೆರಳಲು ಅನನುಕೂವಾಗಿದೆ.ಓವರ್ ಲೋಡ್ ಟಿಪ್ಪರ್‌ಗಳು ಬೆಳಗ್ಗೆಯಿಂದ ರಾತ್ರಿ ತನಕ ಎಡಬಿಡದೆ ಸಂಚರಿಸುವ ಕಾರಣ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂದು ಗ್ರಾಮದ ಚಂದ್ರು ದೂರಿದ್ದಾರೆ.
ಬೆಳಗ್ಗೆ 10 ಗಂಟೆ ತನಕ ಹಾಗೂ ಶಾಲಾ ಬಿಡುವ ಸಮಯ ಮಧ್ಯಾಹ್ನ 3 ಗಂಟೆ ಬಳಿಯ ಟಿಪ್ಪರ್‌ಗಳು ಸಂಚಾರಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದರೂ ತಾಲೂಕು ಆಡಳಿತ ಜಿಲ್ಲಾಧಿಕಾರಿ ಆದೇಶವನ್ನು ಪಾಲಿಸಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.ಶಾಲಾ ಆರಂಭ ಹಾಗೂ ಅಂತ್ಯದ ಸಮಯದಲ್ಲಿ ಟಿಪ್ಪರ್‌ಗಳು ಗ್ರಾಮದೊಳಗೆ ಸಂಚರಿಸದಂತೆ ತಾಲೂಕು ಆಡಳಿತ ಕಡಿವಾಣ ಹಾಕಬೇಕು. ಜೊತೆಗೆ ಶಾಲಾ, ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಬಂದು ನಿಲ್ಲುವ ಹಿರೀಕಾಟಿ ಗೇಟ್‌ನಲ್ಲೂ ಟಿಪ್ಪರ್‌ಗಳ ಹಾವಳಿ ಹೆಚ್ಚಿದೆ ಎಂದು ದೂರಿದ್ದಾರೆ.
ಬೆಳಗ್ಗೆಯಿಂದಲೇ ಟಿಪ್ಪರ್‌ಗಳ ಸದ್ದಿನೊಂದಿಗೆ ಗ್ರಾಮದೊಳಗೆ ಪ್ರವೇಶಿಸುತ್ತಿವೆ ಹಾಗೂ ರಾತ್ರಿ ಸಮಯದಲ್ಲೂ ಸಂಚರಿಸುತ್ತಿವೆ. ಕ್ರಷರ್‌ಗಳಿಗೆ ಮಧ್ಯರಾತ್ರಿಯಾದರೂ ಟಿಪ್ಪರ್‌ಗಳು ಕ್ವಾರಿಯಿಂದ ಕಲ್ಲು ತಂದು ಸುರಿಯುತ್ತಿವೆ ಎಂದು ಹೇಳಿದ್ದಾರೆ.
ಗ್ರಾಮದೊಳಗೆ ಹಾದು ಹೋಗುವ ಟಿಪ್ಪರ್‌ಗಳು ಬೆಳಗ್ಗೆ 10 ಗಂಟೆ ತನಕ ಹಾಗೂ ಮಧ್ಯಾಹ್ನ 3ರಿಂದ 6ರತನಕ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗಳು ಹೊರಡಿಸಿವ ಆದೇಶ ಹಿರೀಕಾಟಿ ಗ್ರಾಮ ಹಾಗೂ ಗೇಟ್‌ನಲ್ಲಿ ಪಾಲನೆಯಾಗುತ್ತಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಟಿಪ್ಪರ್ ಸಂಚಾರಕ್ಕೆ ಕಡಿವಾಣ ಹಾಕಲಿ ಎಂದು ಒತ್ತಾಯಿಸಿದ್ದಾರೆ.---21ಜಿಪಿಟಿ2ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗ್ರಾಮದಲ್ಲಿ ಟಿಪ್ಪರ್‌ಗಳ ಸಾಲು.
--21ಜಿಪಿಟಿ3ಹಿರೀಕಾಟಿ ಗೇಟ್ ಬಳಿ ಓವರ್ ಲೋಡ್ ಟಿಪ್ಪರ್ ದೃಶ್ಯ.