ಯಳಂದೂರು ತಾಲೂಕು ಕಚೇರಿಗೆ ಡಿಸಿ ಶಿಲ್ಪಾನಾಗ್ ಭೇಟಿ

| Published : Jan 22 2024, 02:15 AM IST

ಸಾರಾಂಶ

ಯಳಂದೂರುಪಟ್ಟಣದ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಶಿಲ್ಪನಾಗ್ ಭೇಟಿ ನೀಡಿ ಕಚೇರಿಯ ಕಡತಗಳನ್ನು ಪರಿಶೀಲನೆ ನಡೆಸಿದರು. ಇಲಾಖೆಯ ಅಧಿಕಾರಿಗಳ ಜೊತೆ ತಾಲೂಕು ಕಚೇರಿಯ ಕಡತಗಳ ಪರಿಶೀಲನೆ ಹಾಗೂ ಪ್ರತಿದಿನ ನಡೆಯುತ್ತಿರುವ ಸಾರ್ವಜನಿಕರ ಕೆಲಸಗಳು, ಕಚೇರಿಯ ಸ್ವಚ್ಛತೆ ಬಗ್ಗೆ ತಾಲೂಕು ನೋಂದಣಿ ಅಧಿಕಾರಿಗಳ ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡರು.

ಸಾರ್ವಜನಿಕರ ಜೊತೆ ಉತ್ತಮವಾಗಿ ಸ್ಪಂದಿಸುವಂತೆ ಸಲಹೆ

ಕನ್ನಡಪ್ರಭ ವಾರ್ತೆ ಯಳಂದೂರುಪಟ್ಟಣದ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಶಿಲ್ಪನಾಗ್ ಭೇಟಿ ನೀಡಿ ಕಚೇರಿಯ ಕಡತಗಳನ್ನು ಪರಿಶೀಲನೆ ನಡೆಸಿದರು. ಇಲಾಖೆಯ ಅಧಿಕಾರಿಗಳ ಜೊತೆ ತಾಲೂಕು ಕಚೇರಿಯ ಕಡತಗಳ ಪರಿಶೀಲನೆ ಹಾಗೂ ಪ್ರತಿದಿನ ನಡೆಯುತ್ತಿರುವ ಸಾರ್ವಜನಿಕರ ಕೆಲಸಗಳು, ಕಚೇರಿಯ ಸ್ವಚ್ಛತೆ ಬಗ್ಗೆ ತಾಲೂಕು ನೋಂದಣಿ ಅಧಿಕಾರಿಗಳ ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡರು.ಸೌಲಭ್ಯ ಬಯಸಿ ಬರುವ ಸಾರ್ವಜನಿಕರಿಗೆ ಮೂಲಭೂತವಾಗಿ ಕುಡಿಯುವ ನೀರು, ಆಸನಗಳು, ಶೌಚಾಲಯ ಇನ್ನಿತರ ಅವಶ್ಯಕ ವ್ಯವಸ್ಥೆಗಳನ್ನು ಒದಗಿಸಲು ಅಗತ್ಯ ಏರ್ಪಾಡು ಮಾಡುವಂತೆ ನಿರ್ದೇಶನ ನೀಡಿದರು. ಕಚೇರಿಗೆ ಬಂದಿದ್ದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿ ಅವರು ಶೀಘ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಅರ್ಜಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಪನೋಂದಣಾಧಿಕಾರಿ ಕಚೇರಿಗೂ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ನೀಡಿದರು.

ಪ್ರತಿದಿನ ಕಚೇರಿಗೆ ಬರುವ ಅರ್ಜಿಗಳನ್ನು ಯಾವ ರೀತಿಯಲ್ಲಿ ಸ್ವೀಕಾರ ಮಾಡುತ್ತೀರಾ ಹಾಗೂ ಅರ್ಜಿದಾರರಿಗೆ ಕಚೇರಿ ಮೊಹರು ಹಾಕಿ ಸರಿಯಾಗಿ ನೀಡಬೇಕು ಎಂದರು, ಮುಂದೆ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಮತದಾನ ಮಾಡುವ ವಿಧಾನವನ್ನು ಪರಿಶೀಲನೆ ನಡೆಸಿದರು, ಇದರಿಂದ ಸಾರ್ವಜನಿಕರಿಗೆ ಹೇಗೆ ಮತದಾನ ಮಾಡಬೇಕು ಎಂದು ತಿಳಿಯುತ್ತದೆ ಎಂದು ತಿಳಿಸಿದರು. ಕಚೇರಿಗಳಲ್ಲಿ ಶುಚಿತ್ವ ಕಾಪಾಡಿಕೊಂಡು ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಸಬೇಕು, ಬೇಸಿಗೆ ಸಮೀಪಿಸಿರುವ ಹಿನ್ನಲೆಯಲ್ಲಿ ನಾಗರಿಕರಿಗೆ ಒದಗಿಸಬೇಕಿರುವ ಸೌಕರ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಮುಂದಾಗಬೇಕು. ರೆಕಾರ್ಡ್ ರೂಮ್ ಡಿಜಿಟಲೀಕರಣ, ಇ.ಆಫೀಸ್ ಅನುಷ್ಠಾನ ಹಾಗೂ ಕಾರ್ಯ ವೈಖರಿ ಬಗ್ಗೆ ಪರಿಶೀಲನೆ ನಡೆಸಿದರು.ಈ ವೇಳೆ ಉಪ ವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಜಯಪ್ರಕಾಶ್, ಉಪ ತಹಸೀಲ್ದಾರ್ ಶಿವರಾಜ್, ಇತರೆ ಅಧಿಕಾರಿಗಳು ಹಾಜರಿದ್ದರು.