ಸಾರಾಂಶ
ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಉಪನಿರ್ದೇಶಕರಾದ ಪಾಂಡು ಆದೇಶದ ಮೇರೆಗೆ ಹಣ ಪಡೆಯುತ್ತಿರುವುದಾಗಿ ಹೇಳಿಕೆ ನೀಡಿದ ಕಾರಣ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ. ಪಾಂಡು ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ
ಅನುದಾನಿತ ಹೈಸ್ಕೂಲ್‌ನ ಇಬ್ಬರು ಶಿಕ್ಷಕರನ್ನು ನಿಯೋಜನೆಗೊಳಿಸಲು ಸುಮಾರು ೪೦ ಸಾವಿರ ಲಂಚ ಪಡೆಯುವಾಗ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜಿಲ್ಲಾ ಪತ್ರಕರ್ತರದ ಭವನದ ಎದುರಿನ ಡಿಡಿಪಿಐ ಕಚೇರಿಯಲ್ಲಿ ನಡೆದಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಅನುದಾನಿತ ಹೈಸ್ಕೂಲ್‌ನ ಇಬ್ಬರು ಶಿಕ್ಷಕರನ್ನು ನಿಯೋಜನೆಗೊಳಿಸಲು ಸುಮಾರು ೪೦ ಸಾವಿರ ಲಂಚ ಕೇಳಿದ್ದು, ಲಂಚ ಕೊಡಲು ಇಷ್ಟವಿರದ ಶಿಕ್ಷಕರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಶಿಕ್ಷಕರ ದೂರು ಆಧರಿಸಿ ಲೋಕಾಯುಕ್ತ ಸಿಪಿಐ ಶಿಲ್ಪಾ ಮತ್ತು ಬಾಲು ಅವರ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮೇಲೆ ದಾಳಿ ನಡೆಸಿ ಲಂಚದ ಹಣದ ಸಮೇತ ಸೂಪರಿಂಟೆಂಡೆಂಟ್ ವೇಣುಗೋಪಾಲ್ ಅವರನ್ನು ಬಂಧನ ಮಾಡಿದ್ದಾರೆ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಉಪನಿರ್ದೇಶಕರಾದ ಪಾಂಡು ಆದೇಶದ ಮೇರೆಗೆ ಹಣ ಪಡೆಯುತ್ತಿರುವುದಾಗಿ ಹೇಳಿಕೆ ನೀಡಿದ ಕಾರಣ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ. ಪಾಂಡು ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಡಿಡಿಪಿಐ ಸೂಚನೆಯಂತೇ ಲಂಚ ಪಡೆಯುತ್ತಿದ್ದ ಬಗ್ಗೆ ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ವೇಣುಗೋಪಾಲ್ ಹಾಗೂ ಡಿಡಿಪಿಐ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.