ಚಿಕ್ಕಮಗಳೂರುಕಳೆದ ಐದು ವರ್ಷದ ಹಿಂದೆ ಇ-ಕೆವೈಸಿ ಮಾಡಿಕೊಂಡ ಚಿಕ್ಕಮಗಳೂರು ಜಿಲ್ಲೆಯ 5 ಲಕ್ಷ ಬಿಪಿಎಲ್ ಪಡಿತರ ಗ್ರಾಹಕರು ಸೆ.30ರ ಒಳಗೆ ಮತ್ತೊಂದು ಬಾರಿ ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯ.ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮೂರು ವರ್ಷ ತುಂಬುತ್ತಿದ್ದಂತೆ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅರ್ಹತೆ ಪರಿಶೀಲನೆ ನಡೆಸುತ್ತಿದೆ.
- ಜಿಲ್ಲೆಯಲ್ಲಿ 5 ಲಕ್ಷ ಬಿಪಿಎಲ್ ಪಡಿತರ ಗ್ರಾಹಕರು । ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅರ್ಹತೆ ಪರಿಶೀಲನೆ
ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಳೆದ ಐದು ವರ್ಷದ ಹಿಂದೆ ಇ-ಕೆವೈಸಿ ಮಾಡಿಕೊಂಡ ಚಿಕ್ಕಮಗಳೂರು ಜಿಲ್ಲೆಯ 5 ಲಕ್ಷ ಬಿಪಿಎಲ್ ಪಡಿತರ ಗ್ರಾಹಕರು ಸೆ.30ರ ಒಳಗೆ ಮತ್ತೊಂದು ಬಾರಿ ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯ.ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮೂರು ವರ್ಷ ತುಂಬುತ್ತಿದ್ದಂತೆ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅರ್ಹತೆ ಪರಿಶೀಲನೆ ನಡೆಸುತ್ತಿದೆ.
ಗೃಹಲಕ್ಷ್ಮಿ ಯೋಜನೆ ಬಳಿಕ, ಗೃಹ ಜ್ಯೋತಿ ಫಲಾನುಭವಿಗಳ ಅರ್ಹತೆ ಪರಿಶೀಲನೆ ನಡೆಸುತ್ತಿದೆ. ಈ ನಡುವೆ ಕಳೆದ ಜುಲೈ 15 ರಿಂದ ರಾಜ್ಯಾದ್ಯಂತ ಕಳೆದ ಐದು ವರ್ಷದ ಹಿಂದೆ ಇ-ಕೆವೈಸಿ ಮಾಡಿಕೊಂಡ ಬಿಪಿಎಲ್ ಪಡಿತರದಾರರು ಇದೀಗ ಮತ್ತೊಂದು ಬಾರಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕೆಂದು ನಿರ್ದೇಶನದೊಂದಿಗೆ ಪಡಿತರದಾರರನ್ನು ಪರಿಷ್ಕರಣೆಗೆ ಒಳಪಡಿಸಲಾಗುತ್ತಿದೆ. ಈ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರೋಬ್ಬರಿ 5,06,101ಮಂದಿ ಇ-ಕೆವೈಸಿಗೆ ಒಳಗಾಗಬೇಕಾಗಿದೆ.ಇ-ಕೆವೈಸಿ ಮಾಡಿಸಿಕೊಳ್ಳಲು ಸೆ.30ರ ವರೆಗೆ ಕಾಲಾವಕಾಶ ನೀಡಲಾಗಿದೆ. ಆ ಬಳಿಕ ಬಹುತೇಕ ಇ-ಕೆ ವೈಸಿ ಆಗದಿರುವ ಗ್ರಾಹಕರ ಪಡಿತರ ಕಡಿತಗೊಳಿಸಿ ಇನ್ನುಳಿದ ಗ್ರಾಹಕರಿಗೆ ಮಾತ್ರ ಪಡಿತರ ನೀಡುವ ಸಾಧ್ಯತೆ ಇದೆ.
ಈವರೆಗೆ 4,400 ಮಾತ್ರ ಪ್ರಗತಿಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 5 ಲಕ್ಷ ಮಂದಿ ಕಳೆದ ಐದು ವರ್ಷದ ಹಿಂದೆ (2018-19) ಬಿಪಿಎಲ್ ಕಾರ್ಡ್‌ಗೆ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಆ ಎಲ್ಲರೂ ಸಹ ಇದೀಗ ಮತ್ತೊಂದು ಬಾರಿ ಇ ಕೆ. ವೈಸಿ ಮಾಡಿಕೊಳ್ಳಬೇಕು. ಜುಲೈ 15ರಿಂದ ಎಲ್ಲ ನ್ಯಾಯ ಬೆಲೆ ಅಂಗಡಿಗಳನ್ನು ಇ-ಕೆವೈಸಿ ಮಾಡ ಲಾಗುತ್ತಿದೆ. ಈ ವರಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 4,400 ಮಂದಿ ಮಾತ್ರ ಇ-ಕೆವೈಸಿ ಮಾಡಿಕೊಂಡಿ ದ್ದಾರೆ. ಉಳಿದವರು ಸೆ.30ರ ಒಳಗೆ ಮಾಡಿಕೊಳ್ಳಬೇಕಿದೆ.
ಸೆ.1 ರಿಂದ ಮತ್ತೆ ಇ-ಕೆವೈಸಿ ಆರಂಭಕೇಂದ್ರ ಸರ್ಕಾರದಿಂದ ಬಿಪಿಎಲ್ ಕಾರ್ಡ್‌ದಾರರಿಗೆ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಪಡಿತರ ಒಟ್ಟಿಗೆ ಆಗಸ್ಟ್ ನಲ್ಲಿ ವಿತರಣೆ ಮಾಡಲಾಗುತ್ತಿದೆ. ಗ್ರಾಹಕರು ಎರಡು ಬಾರಿ ಒಟಿಪಿ ನೀಡಬೇಕಾಗಿದೆ. ಅದರೊಂದಿಗೆ ಇ-ಕೆವೈಸಿ ಮಾಡುವುದರಿಂದ ಸರ್ವೇರ್ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಇ-ಕೆವೈಸಿ ನಿಲ್ಲಿಸಲು ಸೂಚನೆ ನೀಡಲಾಗಿದೆ. ಮತ್ತೆ ಸೆ.1 ರಿಂದ ಇ-ಕೆವೈಸಿ ಆರಂಭಿಸಲಾಗುತ್ತದೆ. ಆಗ ಕಡ್ಡಾಯವಾಗಿ ಪಡಿತರದಾರರು ಇ-ಕೆವೈಸಿ ಮಾಡಿಕೊಳ್ಳಬೇಕಿದೆ.
ನ್ಯಾಯ ಬೆಲೆ ಅಂಗಡಿಯಲ್ಲಿ ಉಚಿತಇ-ಕೆವೈಸಿ ಉಚಿತವಾಗಿ ನ್ಯಾಯ ಬೆಲೆ ಅಂಗಡಿಯಲ್ಲಿ ಮಾಡಲಾಗುವುದು. ಬಿಪಿಎಲ್ ಕಾರ್ಡ್‌ನಲ್ಲಿ ಹೆಸರು ಇರುವ ಎಲ್ಲರೂ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಜತೆಗೆ, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ನಲ್ಲಿಯೂ ಇ-ಕೆವೈಸಿ ಮಾಡಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಅಲ್ಲಿ ಸೇವಾ ಶುಲ್ಕ ಪಾವತಿಸ ಬೇಕಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
---ಬಾಕ್ಸ್---ಜಾತಿ ಪ್ರಮಾಣ ಪತ್ರ ಕಡ್ಡಾಯ
ಇ-ಕೆವೈಸಿಗೂ ಜಾತಿ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಜಾತಿ ಪ್ರಮಾಣ ಪತ್ರದಲ್ಲಿರುವ ಆರ್‌ಡಿ ಸಂಖ್ಯೆ ಇ ಕೆವೈಸಿ ವೇಳೆ ದಾಖಲಿಸಬೇಕಾಗಲಿದೆ. ಅದರೊಂದಿಗೆ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ ಯನ್ನು ಅಪ್‌ಡೇಟ್ ಮಾಡಬೇಕಾಗಲಿದೆ. ಮೊಬೈಲ್ ಸಂಖ್ಯೆ ಇಲ್ಲವಾದರೆ ಇತರರ ಮೊಬೈಲ್ ಸಂಖ್ಯೆ ನೀಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.ಪಡಿತರದಾರರು ಒಂದು ವೇಳೆ ಗ್ಯಾಸ್ ಸೌಲಭ್ಯ ಹೊಂದಿದ್ದ ಪೈಕಿ ಯಾವ ಕಂಪನಿ ಗ್ಯಾಸ್, ಸರ್ಕಾರದ ವಿವಿಧ ಯೋಜನೆ ಮೂಲಕ ಗ್ಯಾಸ್ ಪಡೆಯಲಾಗಿದೆಯೇ ಅಥವಾ ಹಣಕೊಟ್ಟು ಪಡೆಯಲಾಗಿದೆಯೇ ಎಂಬು ದನ್ನು ನಮೂದಿಸಬೇಕು. ಪಡಿತರ ಕಾರ್ಡ್‌ನಲ್ಲಿ ಹೆಸರು ಇರುವವರು ಬಯೋ ಮೆಟ್ರಿಕ್ ನೀಡುವ ಮೂಲಕ ಖಾತ್ರಿ ಪಡೆಸಬೇಕಿದೆ.-- ಕೋಟ್--
ಇ ಕೆವೈಸಿ ಆಗಬೇಕಿರುವ ಪಡಿತರ ಚೀಟಿ ಸಂಖ್ಯೆಯೊಂದಿಗೆ ಹೆಸರುಗಳನ್ನು ಆಯಾ ನ್ಯಾಯ ಬೆಲೆ ಅಂಗಡಿಗೆ ನೀಡಲಾಗಿದೆ. ಒಂದು ಪ್ರತಿಯನ್ನು ನ್ಯಾಯ ಬೆಲೆ ಅಂಗಡಿಯ ಮುಂಭಾಗದಲ್ಲಿ ಅಂಟಿಸಲು ಸೂಚಿಸಲಾಗಿದೆ. ಈಗಾಗಲೇ ಇ ಕೆವೈಸಿ ಮಾಡಿಕೊಂಡಿದ್ದರೂ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಮತ್ತೊಂದು ಬಾರಿ ಇ ಕೆವೈಸಿ ಮಾಡಬೇಕಿದೆ.- ಯೋಗಾನಂದ್, ಉಪ ನಿರ್ದೇಶಕ, ಚಿಕ್ಕಮಗಳೂರು ಆಹಾರ ಇಲಾಖೆ
--ತಾಲೂಕು ವಾರು ಇ ಕೆವೈಸಿ ಮಾಡಿಕೊಳ್ಳಬೇಕಾದವರ ಸಂಖ್ಯೆ
ತಾಲೂಕುಇ-ಕೆವೈಸಿ ಸಂಖ್ಯೆಅಜ್ಜಂಪುರ38,782
ಚಿಕ್ಕಮಗಳೂರು1,31,064ಕಡೂರು1,49,812
ಕಳಸ10,850ಕೊಪ್ಪ26,758
ಮೂಡಿಗೆರೆ42,586ಎನ್.ಆರ್,ಪುರ26,108
ಶೃಂಗೇರಿ11,920ತರೀಕೆರೆ68,221
ಒಟ್ಟು5,06,101(ಸೂಕ್ತ ಪೋಟೋ ಬಳಸುವುದು)
