ಕಣಗಲದ ರಮೇಶ ಗ್ರಾಮದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ರಭಸದಿಂದ ಬಂದ ಬುಲೆಟ್ ಗಾಡಿ ಬಡಿದು ತೀವ್ರ ಗಾಯಗೊಂಡರು.

ಟೇಕಲ್: ಗ್ರಾಪಂ ಮಾಜಿ ಸದಸ್ಯ ಕಣಗಲ ಗ್ರಾಮದ ರಮೇಶ (48) ರವರು ಶುಕ್ರವಾರ ರಾತ್ರಿ 8 ಗಂಟೆಯಲ್ಲಿ ಗ್ರಾಮದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬುಲೆಟ್‌ ಬೈಕ್‌ ಬಡಿದು ಸಾವನಪ್ಪಿದ್ದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಸುಮಾರು 8 ಗಂಟೆ ವೇಳೆಯಲ್ಲಿ ಕಣಗಲದ ರಮೇಶ ಗ್ರಾಮದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ರಭಸದಿಂದ ಬಂದ ಬುಲೆಟ್ ಗಾಡಿ ಬಡಿದು ತೀವ್ರ ಗಾಯಗೊಂಡರು. ಅದೇ ಸಮಯದಲ್ಲಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದ ಶಾಸಕ ಕೆ.ವೈ.ನಂಜೇಗೌಡರು ತಕ್ಷಣ ಘಟನೆ ಗಮನಿಸಿ ಸ್ಥಳಕ್ಕೆ ಆ್ಯಂಬುಲೆನ್ಸ್‌ನ್ನು ಕರೆಯಿಸಿ ಆಸ್ಪತ್ರೆಗೆ ಕಳುಹಿಸಲು ಚಿಕಿತ್ಸೆ ನೀಡಲು ವೈದ್ಯರಿಗೆ ಸಂಪರ್ಕಿಸಿ ತಿಳಿಸಿದರು. ನಂತರ ಮಾರ್ಗ ಮಧ್ಯದಲ್ಲಿ ಆತ ಸಾವನ್ನಪ್ಪಿದರು.

ರಮೇಶ್‌ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ಕುಟುಂಬಸ್ಥರು ಗ್ರಾಮದ ರಸ್ತೆಗೆ ಸ್ಪೀಡ್ ಕಟ್ (ಉಬ್ಬುತಗ್ಗು) ಹಾಕಬೇಕು. ಇದರಿಂದಲೇ ಇಲ್ಲಿ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದು ಇಂತಹ ಘಟನೆಗಳು ನಡೆಯುತ್ತಿದೆ ಎಂದು ಆರೋಪಿಸಿ ಅದೇ ರಸ್ತೆಯನ್ನು ತಡೆದು ಸುಮಾರು 2 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಕನ್ನಿಕಾ ಸುಕ್ರಿವಾಲ್, ಡಿವೈಎಸ್‌ಸಿ ನಾಗಥ್ತೆ, ಪಿಐ ಓಂಪ್ರಕಾಶೌಡ ರವರು ಸ್ಥಳಕ್ಕೆ ಬಂದು ಗ್ರಾಮಸ್ಥರ ಜೊತೆ ಮಾತನಾಡಿ ರಸ್ತೆಗೆ ತಾತ್ಕಾಲಿಕವಾಗಿ ತಕ್ಷಣವೇ ಬ್ಯಾರಿಕೆಡ್‌ಗಳನ್ನು ಅಳವಡಿಸಲಾಗುತ್ತದೆ. ನಂತರ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದರು. ನಂತರ ರಸ್ತೆಯನ್ನು ಸುಗಮಗೊಳಿಸಲಾಯಿತು.