ಸಾರಾಂಶ
ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಸಾಗುತ್ತಿದ್ದ ವೇಳೆ ಕಾರು-ಬಸ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಆರೋಗ್ಯ ಮಾತೆ ಬಸಿಲಿಕದ ಧರ್ಮಗುರುವಾಗಿ ಸೇವೆ ಸಲ್ಲಿಸಿ, ಶಿಕಾರಿಪುರದ ಚರ್ಚ್‌ಗೆ ವರ್ಗಾವಣೆಯಾಗಿದ್ದ ರೆವರೆಂಡ್ ಫಾದರ್ ಅಂಟೋನಿ ಪೀಟರ್ ಮಂಗಳವಾರ ಸಾವನ್ನಪ್ಪಿದ್ದಾರೆ.
ದಾವಣಗೆರೆ: ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಸಾಗುತ್ತಿದ್ದ ವೇಳೆ ಕಾರು-ಬಸ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹರಿಹರದ ಆರೋಗ್ಯ ಮಾತೆ ಬಸಿಲಿಕದ ಧರ್ಮಗುರುವಾಗಿ ಸೇವೆ ಸಲ್ಲಿಸಿ, ಶಿಕಾರಿಪುರದ ಚರ್ಚ್‌ಗೆ ವರ್ಗಾವಣೆಯಾಗಿದ್ದ ರೆವರೆಂಡ್ ಫಾದರ್ ಅಂಟೋನಿ ಪೀಟರ್ ಮಂಗಳವಾರ ಸಾವನ್ನಪ್ಪಿದ್ದಾರೆ.
ಹರಿಹರದಲ್ಲಿ ಧರ್ಮಗುರುವಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಟೋನಿ ಪೀಟರ್ ಜನಾನುರಾಗಿಯಾಗಿದ್ದರು. ಹಲವಾರು ಸಮಾಜ ಸೇವೆಗಳಿಗೆ ಸಹಕಾರ ನೀಡುತ್ತಿದ್ದರು. ಶಿಕಾರಿಪುರಕ್ಕೆ ವರ್ಗಾವಣೆಯಾದ ನಂತರ ಅಲ್ಲಿನ ಚರ್ಚ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹರಿಹರದಲ್ಲಿ ಚಿಂತನಾ ಪ್ರತಿಷ್ಟಾನದ ಕಾರ್ಯಕ್ರಮಗಳಿಗೆ ಸದಾ ಬೆನ್ನೆಲುಬಾಗಿದ್ದರು.ಶಿವಮೊಗ್ಗದ ಪವಿತ್ರ ಹೃದಯ ಪ್ರಾರ್ಥನಾಲಯದಲ್ಲಿ ಕ್ಯಾಥೋಲಿಕ್ ಧರ್ಮದ ಪೂಜಾ ವಿಧಾನ, ಪದ್ಧತಿ ನೆರವೇರಿಸಿದ ನಂತರ ಮೃತ ಫಾದರ್ ಡಾ.ಅಂಟೋನಿ ಪೀಟರ್ ಅವರ ಅಂತ್ಯ ಸಂಸ್ಕಾರ ನಡೆಸಲಾಗುವುದು.
- - - -23ಕೆಡಿವಿಜಿ21: