ಸಾರಾಂಶ
ಚಿಕ್ಕಮಗಳೂರು, ಭದ್ರಾ ಹಿನ್ನೀರಿನಲ್ಲಿ ಕಾಡಾನೆಯೊಂದು ಮೃತಪಟ್ಟಿರುವುದು ಬೆಳಕಿಗೆ ಬಂದಿದ್ದು, ಅದರ ಹಣೆ ಭಾಗದಲ್ಲಿ ರಂಧ್ರ ಇರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಆನೆ ಆಸ್ತಿ ಪಂಜರ ಕಂಡ ಮೀನುಗಾರರು ಇಲಾಖೆಗೆ ಮಾಹಿತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭದ್ರಾ ಹಿನ್ನೀರಿನಲ್ಲಿ ಕಾಡಾನೆಯೊಂದು ಮೃತಪಟ್ಟಿರುವುದು ಬೆಳಕಿಗೆ ಬಂದಿದ್ದು, ಅದರ ಹಣೆ ಭಾಗದಲ್ಲಿ ರಂಧ್ರ ಇರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಭದ್ರಾ ಅಭಯಾರಣ್ಯದ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ, ಅಲ್ದಾರ ವಿಭಾಗದ ಬೈರಾಪುರ ಹಿನ್ನೀರಿನ ಪ್ರದೇಶದಲ್ಲಿ ಆನೆ ಕಳೇಬರಹ ಕಂಡು ಬಂದಿದೆ. ಆನೆ ಮೃತಪಟ್ಟು ಸುಮಾರು ತಿಂಗಳು ಕಳೆದಿದೆ. ಆನೆ ಆಸ್ತಿ ಪಂಜರ ಸ್ಥಳೀಯ ಮೀನುಗಾರಿಗೆ ಕಂಡು ಬಂದು ಇಲಾಖೆಗೆ ಮಾಹಿತಿ ನೀಡಿದ್ದಾರೆ.ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಆನೆಯ ಆಸ್ತಿಯನ್ನು ಸರಿಯಾಗಿ ತಪಾಸಣಾ ಮಾಡದಿರುವುದಕ್ಕೆ ಪರಿಸರಾಸ್ತರು ಸಂಶಯ ವ್ಯಕ್ತಪಡಿ ಸಿದ್ದಾರೆ. ಕಾರಣ, ಆನೆಯ ಹಣೆ ಭಾಗಕ್ಕೆ ಗುಂಡು ಹೊಡೆದಿರುವ ಗುರುತು ಪತ್ತೆ ಆಗಿದೆ. ಹಣೆ ಮಧ್ಯ ಭಾಗದಲ್ಲಿ ಸುಮಾರು ಎರಡು ಇಂಚು ಅಗಲದ ರಂಧ್ರ ಕಂಡು ಬಂದಿದೆ.
ಆನೆ ಸತ್ತ ಜಾಗದಲ್ಲಿ ಯಾವುದೇ ದಂತಗಳು ಕಂಡು ಬಂದಿಲ್ಲ. ಇವು ದಂತಚೋರರ ಪಾಲಾಗಿವೆ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಭದ್ರಾ ಹಿನ್ನೀರಿನಲ್ಲಿ ಆನೆಗಳ ಹಿಂಡು ವ್ಯಾಪಕವಾಗಿವೆ. ಆನೆ ದಂತಕ್ಕೆ ಭಾರಿ ಬೇಡಿಕೆ ಇದ್ದು ಕಳೆದ ವರ್ಷ ಮುತ್ತೋಡಿ ಅರಣ್ಯದ ಜಾಗರ ಗ್ರಾಮ ಸಮೀಪ ಆನೆ ಕೊಂದು ದಂತ ಅಪಹರಿಸಲಾಗಿತ್ತು. ಅಧಿಕಾರಿಗಳ ಕರ್ತವ್ಯ ನಿರ್ಲಕ್ಷದಿಂದ ಲಕ್ಕವಳ್ಳಿ ಹಿನ್ನೀರಿನಲ್ಲಿ, ದಂತಕ್ಕಾಗಿ ಆನೆ ಹತ್ಯೆ ಮಾಡಿರುವ ಸಂಬಂಧ ಹಿರಿಯ ಅರಣ್ಯಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕಿತ್ತು. ಆದರೆ ಯಾವುದೇ ತನಿಖೆ ಮಾಡದೆ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ ಇದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅರಣ್ಯ ಸಚಿವರು ಇದನ್ನು ಖುದ್ದು ಪರಿಶೀಲಿಸಿ ದಂತ ಚೋರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಪರಿಸರಸಕ್ತರು ಒತ್ತಾಯಿಸಿದ್ದಾರೆ.26 ಕೆಸಿಕೆಎಂ 5ಭದ್ರಾ ಹಿನ್ನೀರಿನಲ್ಲಿ ಪತ್ತೆಯಾಗಿರುವ ಆನೆಯ ಕಳೆ ಬರಹದಲ್ಲಿ ರಂಧ್ರ ಇರುವುದು ಕಂಡು ಬಂದಿದೆ.