ವಿದ್ಯಾರ್ಥಿನಿ ಹತ್ಯೆಗೈದ ದುಷ್ಕರ್ಮಿಗೆ ಗಲ್ಲುಶಿಕ್ಷೆ ವಿಧಿಸಿ

| Published : Apr 20 2024, 01:02 AM IST

ವಿದ್ಯಾರ್ಥಿನಿ ಹತ್ಯೆಗೈದ ದುಷ್ಕರ್ಮಿಗೆ ಗಲ್ಲುಶಿಕ್ಷೆ ವಿಧಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಸುಗೂರು ಎಸಿ ಕಚೇರಿ ಮುಂದೆ ವೀರಶೈವ ಜಂಗಮ ಸಮಾಜದ ಮುಖಂಡರು ಕೆಲ ನಿಮಿಷ ಪ್ರತಿಭಟನೆ ನಡೆಸಿ ಎಸಿ ಅವಿನಾಶ ಶಿಂಧೆರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಹುಬ್ಬಳ್ಳಿ ವಿದ್ಯಾನಗರದ ಕೆಎಲ್ಇ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ಕುಮಾರಿ ನೇಹಾಳನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ವೀರಶೈವ ಜಂಗಮ ಸಮಾಜದ ಮುಖಂಡರು ಎಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಎಸಿ ಅವಿನಾಶ ಶಿಂಧೆರಿಗೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ ಕುಮಾರಿ ನೇಹಾ ವಿದ್ಯಾನಗರದ ಕೆಎಲ್ಇ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದಳು. ಫಯಾಜ್ ಎಂಬಾತ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು. ಗುರುವಾರ ನೇಹಾಳು ಪರೀಕ್ಷೆ ಬರೆದು ಮನೆಗೆ ತೆರಳುತ್ತಿದ್ದ ವೇಳೆ ಕಾಲೇಜಿಗೆ ಆಗಮಿಸಿದ ಫಯಾಜ್ ಏಕಾಏಕಿ ನೇಹಾಳಿಗೆ ಮನಬಂದಂತೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಸಿ ಪರಾರಿಯಾಗಿದ್ದಾನೆ.

ಕುಮಾರಿ ನೇಹಾಳ ಹತ್ಯೆಗೈದ ದುಷ್ಕರ್ಮಿ ಬಂಧಿಸಿ ಗಲ್ಲುಶಿಕ್ಷೆ ವಿಧಿಸಬೇಕು. ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು. ಕುಟುಂಬಸ್ಥರಿಗೆ ರಕ್ಷಣೆ ನೀಡಬೇಕು ಮತ್ತು ಇಂತಹ ಘಟನೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದರು.

ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು, ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಹಿರೇಮಠ, ಪ್ರಮುಖರಾದ ಮಹಾದೇವಯ್ಯ ಗೌಡೂರು, ಶರಣಯ್ಯ ದಾಸೋಹಮಠ, ರಾಜು ಹಿರೇಮಠ, ವಿರುಪಾಕ್ಷಯ್ಯ ಹಿರೇಮಠ, ಮಹೆಶ ಜಗವತಿಮಠ, ಅಮರೇಶ ವಸ್ತ್ರದ್, ಚನ್ನಬಸವ ಹಿರೇಮಠ, ಗುರುರಾಜ, ಸಂತೋಷ ಸೊಪ್ಪಿಮಠ, ಗಂಗಾಧರ, ಗುರುಬಾಯಿ ಹಿರೇಮಠ, ಸುಹಾಸಿನಿ ಹಿರೇಮಠ ಸೇರಿ ಇತರರು ಇದ್ದರು.