ಸಾರಾಂಶ
ರಾಮನಗರ: ರಕ್ತದ ಮಾದರಿ ಪರೀಕ್ಷೆ ವರದಿ ವಿಚಾರವಾಗಿ ಡಯಾಗ್ನೋಸ್ಟಿಕ್ ಸೆಂಟರ್ ಗೆ ಅತಿಕ್ರಮವಾಗಿ ಪ್ರವೇಶಿಸಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿರುವ ಆರು ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೆಂಟರ್‌ನ ಜಿ. ವೇಣುಗೋಪಾಲ್ ಐಜೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ ನವೆಂಬರ್ 23ರಂದು ಪೂಜಿತಾ ಡಯಾಗ್ನೋಸ್ಟಿಕ್ ಸೆಂಟರ್ ಗೆ ಮೂವರು ಔಟ್ ಸೈಡ್ ಬ್ಲಡ್ ಸ್ಯಾಂಪಲ್ ಟ್ಯೂಬ್ ತಂದು ಕೊಟ್ಟು ರಕ್ತದ ಮಾದರಿ ಗುಂಪನ್ನು ಪರೀಕ್ಷಿಸಿ ಕೊಡುವಂತೆ ಕೇಳಿದ್ದಾರೆ. ಅದರಂತೆ ಸೆಂಟರ್ ನವರು ರಕ್ತದ ಮಾದರಿಯನ್ನು ಪರೀಕ್ಷಿಸಿ ಅದು ಎ ಪಾಸಿಟಿವ್ ಗುಂಪಿಗೆ ಸೇರಿದೆ ಎಂದು ವರದಿ ನೀಡಿದ್ದಾರೆ. ಆದರೆ, ರೋಗಿಯ ಸಂಬಂಧಿಕರು ಸೆಪ್ಟೆಂಬರ್ 2ರಂದು ಇದೇ ರಕ್ತದ ಮಾದರಿಯನ್ನು (ಔಟ್ ಸೈಡ್ ಬ್ಲಡ್ ಸ್ಯಾಂಪಲ್ ಟ್ಯೂಬ್ ) ಕೊಟ್ಟಿದ್ದಾಗ ಅದರ ಗುಂಪಿನ ವರದಿಯನ್ನು ಎಬಿ ಪಾಸಿಟಿವ್ ಎಂದು ವರದಿ ನೀಡಿದ್ದೀರಿ. ಅದರಿಂದ ನನ್ನ ತಾಯಿಗೆ ಎಬಿ ಪಾಸಿಟಿವ್ 2 ಬಾಟಲ್ ರಕ್ತವನ್ನು ನೀಡಲಾಗಿದೆ. ಈಗ ನನ್ನ ತಾಯಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಆ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗಿದ್ದು, ಅದನ್ನು ನೀವೇ ಭರಿಸಬೇಕೆಂದು ಹೇಳಿದ್ದಾರೆ.ಆದರೆ, ಸೆಂಟರ್ ನವರು ನೀವು 2 ಬಾರಿಯೂ ಔಟ್ ಸೈಡ್ ನಿಂದ ಟ್ಯೂಬ್ ನಲ್ಲಿ ರಕ್ತದ ಮಾದರಿ ತಂದು ಕೊಟ್ಟಿದ್ದು, ಅದಕ್ಕೆ ತಕ್ಕಂತೆ ನಾವು ವರದಿ ನೀಡಿದ್ದೇವೆಂದು ರೋಗಿಯ ಸಂಬಂಧಿಕರಿಗೆ ಹೇಳಿದ್ದಾರೆ. ಆನಂತರ ಮಾಧ್ಯಮ ಪ್ರತಿನಿಧಿಗಳೆಂದು ಇನ್ನೂ ಇಬ್ಬರನ್ನು ರೋಗಿ ಸಂಬಂಧಿಕರು ಸೆಂಟರ್ ಗೆ ಕರೆದುಕೊಂಡು ಬಂದಿದ್ದಾರೆ. ಅವರೆಲ್ಲರು ಹಣಕ್ಕೆ ಬೇಡಿಕೆ ಇಟ್ಟರಲ್ಲದೆ, ಸಿಬ್ಬಂದಿಯನ್ನು ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಂಟರ್ ಜಿ.ವೇಣುಗೋಪಾಲ್ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.