ಸಾರಾಂಶ
ಮಾನಸಿಕ ದಿನಾಚರಣೆಯು ತುರ್ತು ಪರಿಸ್ಥಿತಿ ಮತ್ತು ವಿಪತ್ತುಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಲಭ್ಯತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಿದೆ
ಕುಂದಗೋಳ: ಇಂದಿನ ಜನತೆಯಲ್ಲಿ ದಿನನಿತ್ಯ ಕೆಲಸದ ಒತ್ತಡ ಮತ್ತು ಊಹಾಪೋಹಗಳ ಚಿಂತೆಯಿಂದಾಗಿ ದಿನೇ ದಿನೇ ವ್ಯಕ್ತಿ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗುತ್ತಿದ್ದಾನೆ. ಇದರಿಂದಾಗಿ ಇಂದಿನ ಯುವ ಪೀಳಿಗೆಯಲ್ಲಿ ಸಾವು- ನೋವುಗಳು ಹೆಚ್ಚಾಗುತ್ತಿವೆ ಎಂದು ಡಾ. ಸುರೇಶ ಕಳಸಣ್ಣವರ ಹೇಳಿದರು.
ಅವರು ತಾಲೂನಿ ತಾಲೂಕಿನ ಸಂಶಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾನಸಿಕ ದಿನಾಚರಣೆಯು ತುರ್ತು ಪರಿಸ್ಥಿತಿ ಮತ್ತು ವಿಪತ್ತುಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಲಭ್ಯತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಿದೆ. ಆದ್ದರಿಂದ ಎಲ್ಲರೂ ಜಾಗೃತಿ ಹೊಂದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ದೊಡ್ಡೇಶ್, ಎಂ.ಜಿ. ಭಟ್, ಕವಿತಾ ಕೆ.ಎಚ್, ಸವಿತಾ, ಅನಿತಾ, ಜಯಮ್ಮ, ಗಂಗಪ್ಪ ನಿಜಗುಣಿ, ದ್ಯಾಮನಗೌಡ ಕಬ್ಬೇರಹಳ್ಳಿ, ಐ.ಪಿ. ಹಿರೇಮಠ, ಫಾತಿಮಾ ಗೋಕಾವಿ, ಮಲ್ಲಪ್ಪ ಕುಂದಗೋಳ, ಬಸವಣ್ಣಪ್ಪ ಗಡ್ಡಣ್ಣವರ, ಶಂಕ್ರಪ್ಪ ಗರಡ್ಡಿ ಸೇರಿದಂತೆ ಹಲವರಿದ್ದರು.