ಪ್ರತಿ ಟನ ಕಬ್ಬಿಗೆ ಕನಿಷ್ಠ ₹5500 ನೀಡಲೇಬೇಕು ಎಂದು ಒತ್ತಾಯಿಸುವ ಬಗ್ಗೆ ಹಾಗೂ ರೈತರ ಇತರ ಸಮಸ್ಯೆಗಳು ಮತ್ತು ಬರಗಾಲ ಪರಿಹಾರ ತಕ್ಷಣ ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವಂತೆ ಸಭೆಯಲ್ಲಿ ರೈತರು ಒತ್ತಾಯಿಸಿದರು.
ಅಳ್ನಾವರ: ಕಬ್ಬಿನ ದರ ನಿಗದಿಪಡಿಸುವ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅ. 26ರಂದು ಬೆಳಗಾವಿಯಲ್ಲಿ ನಡೆಯುವ ಸಭೆಗೆ ಭಾಗವಹಿಸುವ ಕುರಿತು ಪೂರ್ವಭಾವಿ ಸಭೆ ಅಳ್ನಾವರದಲ್ಲಿ ಜರುಗಿತು.
ಪ್ರತಿ ಟನ ಕಬ್ಬಿಗೆ ಕನಿಷ್ಠ ₹5500 ನೀಡಲೇಬೇಕು ಎಂದು ಒತ್ತಾಯಿಸುವ ಬಗ್ಗೆ ಹಾಗೂ ರೈತರ ಇತರ ಸಮಸ್ಯೆಗಳು ಮತ್ತು ಬರಗಾಲ ಪರಿಹಾರ ತಕ್ಷಣ ನೀಡುವದು ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವಂತೆ ಸಭೆಯಲ್ಲಿ ರೈತರು ಒತ್ತಾಯಿಸಿದರು.ಅಳ್ನಾವರ ತಾಲೂಕಿನಿಂದ ಕೋಗಿಲಗೇರಿ ಗ್ರಾಮದ ಭರತೇಶ್ ಪಾಟೀಲ್, ಕುಂಬಾರಕೊಪ್ಪ ಗ್ರಾಮದ ಅಶೋಕ ಜೋಡಟ್ಟಿ ಹಾಗೂ ರವಿ ವಡ್ಡರ್ ಮುಖ್ಯಮಂತ್ರಿಗಳು ನಡೆಸುವ ಸಭೆಯಲ್ಲಿ ಅಳ್ನಾವರ ತಾಲೂಕಿನ ಪ್ರತಿನಿಧಿಗಳಾಗಿ ಭಾಗವಹಿಸುತ್ತಿದ್ದು, ಇವರ ಜತೆಗೆ ಭಾನುವಾರ ತಾಲೂಕಿನ ರೈತ ಮುಖಂಡರು ಸಭೆಯನ್ನು ನಡೆಸಿದರು. ತಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿ ತಮಗೆ ಬರಬೇಕಾದ ಕನಿಷ್ಠ ಬೆಂಬಲ ಬೆಲೆಯನ್ನು ಪಡೆದುಕೊಂಡೆ ಬರಬೇಕು ಎಂದು ಒತ್ತಾಯಿಸಿ ಬೆಂಬಲ ಸೂಚಿಸಿದರು.
ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಕೈಕೊಳ್ಳಲಾಗುವ ನಿರ್ಣಯದ ಆಧಾರದ ಮೇಲೆ ಮುಂದಿನ ಹೆಜ್ಜೆ ಇಡಲು ರೈತರು ನಿಶ್ಚಯಿಸಿದರು.ಮುಖ್ಯಮಂತ್ರಿಗಳ ಸಭೆಯಲ್ಲಿ ತಮ್ಮ ಬೇಡಿಕೆಗಳು ಈಡೇರದೆ ಇದ್ದರೆ ಮುಂದಿನ ಹೋರಾಟವನ್ನು ತೀವ್ರ ಗೊಳಿಸಲಾಗುವುದೆಂದು ಸಭೆಯಲ್ಲಿ ಸೇರಿದ್ದ ರೈತರು ತಿಳಿಸಿದರು.
ಸಭೆಯಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದ ನಿಂಗಪ್ಪ ಬೇಕ್ವಾಡಕರ್, ಉಪಾಧ್ಯಕ್ಷ ಮಲ್ಲಪ್ಪ ಗಾಣಿಗೇರ, ರಾಯಪ್ಪ ಹುಡೇದ, ಬಸವರಾಜ ಪಾಟೀಲ್, ಶಿವಾಜಿ ಡೊಳ್ಳಿನ, ಬಸವರಾಜ ಇನಾಮದಾರ, ರಮೇಶ ಕಿತ್ತೂರ, ರವಿರಾಜ ಕಂಬಳಿ, ನಿಂಗಪ್ಪ ಮಾಧನಬಾವಿ ಹಾಗೂ ತಾಲೂಕಿನ ನೂರಾರು ರೈತರು ಪಾಲ್ಗೊಂಡಿದ್ದರು.