ಆಗಸ್ಟ್‌ನಲ್ಲಿ ದಲಿತ ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ: ತೇಗಲತಿಪ್ಪಿ

| Published : Jul 21 2024, 01:21 AM IST

ಆಗಸ್ಟ್‌ನಲ್ಲಿ ದಲಿತ ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ: ತೇಗಲತಿಪ್ಪಿ
Share this Article
  • FB
  • TW
  • Linkdin
  • Email

ಸಾರಾಂಶ

ಬಡತನ, ಹಸಿವು, ನೋವು-ನಲಿವು, ಶೋಷಣೆ, ಅನ್ಯಾಯಕ್ಕೆ ತುತ್ತಾದ ಜನಸಾಮಾನ್ಯರ ಸಂಕಥನ ಕುರಿತು ಚಿಂತನ-ಮಂಥನ ಮಾಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಗಷ್ಟ್ ತಿಂಗಳಲ್ಲಿ ಒಂದು ದಿನದ ಜಿಲ್ಲಾಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಈ ಕುರಿತು ನಗರದ ಕನ್ನಡ ಭವನದಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯ ನೇತೃತ್ವ ವಹಿಸಿ ವಿವರಣೆ ನೀಡಿದ ಅವರು, ಇಂಥ ಸಮ್ಮೇಳನಗಳು ಶೋಷಿತ ಸಮುದಾಯದ ಬದುಕನ್ನು ಕಟ್ಟಿಕೊಳ್ಳುವ ಮತ್ತು ಅವರ ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸುವ ಸಾಹಿತ್ಯ ಇದಾಗಿದೆ. ತಳ ಸಮುದಾಯಗಳ ತಳಮಳಗಳನ್ನು ಅವಲೋಕಿಸುವುದರ ಜತೆಗೆ ಇಂದಿನ ವರ್ತಮಾನದ ಬದುಕನ್ನು ರೂಪಿಸಿಕೊಳ್ಳುವ ಪರಿಯನ್ನು ಚರ್ಚಿಸಬೇಕಾಗಿದೆ. ಈ ದಿಸೆಯಲ್ಲಿ ಹಸಿವು ಮುಕ್ತ, ಶೋಷಣೆ ರಹಿತ ಸಮ ಸಮಾಜವನ್ನು ಕಟ್ಟಲು ಈ ದಲಿತ ಸಾಹಿತ್ಯ ಸಮ್ಮೇಳನ ಬೆಳಕು ಚೆಲ್ಲಲಿದೆ ಎಂದು ಆಶಿಸಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ ಮಾತನಾಡಿ, ಸಾಂಸ್ಕೃತಿಕ ಜೀವನ ಮತ್ತಷ್ಟು ಎತ್ತರಿಸಬೇಕಾಗಿದೆ. ಆ ಮೂಲಕ ದಲಿತರ ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸುವ ಇಂಥ ಸಮ್ಮೇಳನಗಳು ಇಂದು ಅವಶ್ಯವಾಗಿವೆ. ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ಸ್ವಾಗತ ಸಮಿತಿ ರಚನೆ, ಸಮ್ಮೇಳನಾಧ್ಯಕ್ಷರ ಆಯ್ಕೆ ಶೀಘ್ರದಲ್ಲಿ ಮಾಡಲಾಗುವುದೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ ಜಾವಳಿ, ರವೀಂದ್ರಕುಮಾರ ಭಂಟನಳ್ಳಿ, ಬಾಬುರಾವ ಪಾಟೀಲ, ರಾಜೇಂದ್ರ ಮಾಡಬೂಳ, ಸಿದ್ಧಲಿಂಗ ಜಿ ಬಾಳಿ, ವಿನೋದಕುಮಾರ ಜೇನವೇರಿ, ಸುರೇಶ ದೇಶಪಾಂಡೆ, ಗುರುಬಸಪ್ಪ ಸಜ್ಜನಶೆಟ್ಟಿ, ಸಂತೋಷ ಕುಡಳ್ಳಿ, ಎಸ್.ಕೆ.ಬಿರಾದಾರ, ಪ್ರಭುಲಿಂಗ ಮೂಲಗೆ, ಶಾಮಸುಂದರ ಕುಲಕರ್ಣಿ, ಬಸಯ್ಯಾ ಸ್ವಾಮಿ, ಸೋಮಶೇಖರಯ್ಯಾ ಹೊಸಮಠ, ಶಿವಶರಣ ಬಡದಾಳ, ಡಾ.ರೆಹಮಾನ್ ಪಟೇಲ್, ಶಿವಾನಂದ ಪೂಜಾರಿ, ಎಂ.ಎನ್. ಸುಗಂಧಿ, ಧರ್ಮರಾಜ ಜವಳಿ, ಗಣೇಶ ಚಿನ್ನಾಕಾರ, ಹಣಮಂತಪ್ರಭು, ರೇವನಸಿದ್ದಪ್ಪ ಜೀವಣಗಿ, ಸೈಯದ್ ನಜಿರುದ್ದೀನ್ ಮುತ್ತವಲಿ, ರಮೇಶ ಡಿ. ಬಡಿಗೇರ, ರಾಜಶೇಖರ ಚೌಧರಿ, ಶರಣಬಸಪ್ಪ ಕೋಬಾಳ, ವೀರೇಂದ್ರಕುಮಾರ ಕೊಲ್ಲೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.