ಕೋಲಿ ಸಮಾಜದ ಸಮಾವೇಶ ಬಹಿಷ್ಕರಿಸಲು ನಿರ್ಧಾರ: ರಾಮಲಿಂಗ ಬಾನರ್‌

| Published : Feb 03 2024, 01:47 AM IST

ಕೋಲಿ ಸಮಾಜದ ಸಮಾವೇಶ ಬಹಿಷ್ಕರಿಸಲು ನಿರ್ಧಾರ: ರಾಮಲಿಂಗ ಬಾನರ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ತಾಪುರ ಪಟ್ಟಣದ ಅಂಬಿಗರ ಚೌಡಯ್ಯ ಭವನದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನರ್ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಕೋಲಿ ಸಮಾಜ ಎಸ್ಟಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಫೆ.೨೫ರಂದು ಕಲಬುರಗಿಯಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶವನ್ನು ಚಿತ್ತಾಪುರ ತಾಲೂಕು ಕೋಲಿ ಸಮಾಜವು ಬಹಿಷ್ಕರಿಸುವುದಾಗಿ ತಾಲೂಕು ಕೋಲಿ ಸಮಾಜದ ಅಧ್ಯಕ್ಷ ರಾಮಲಿಂಗ ಬಾನರ್ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಭವನದಲ್ಲಿ ಸಮಾವೇಶ ಕುರಿತಾಗಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಿ ಸಮಾಜ ಎಸ್ಟಿ ಸೇರ್ಪಡೆಗಾಗಿ ಆಯೋಜನೆ ಮಾಡಿರುವ ಸಮಾಜವೇಶವನ್ನು ಇಡೀ ಸಮಾಜದ ಜನರ, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡು ಸಮಾಜ ನನ್ನ ಹಿಂದೆ ಇದೆ ಎಂದು ಬಿಂಬಿಸಿಕೊಂಡು ಸಮಾಜದ ದಾರಿಯನ್ನು ತಪ್ಪಿಸುವ ಕೆಲಸವನ್ನು ಕಮಕನೂರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖಂಡರಾದ ಹಣಮಂತ ಸಂಕನೂರ, ಬಸವರಾಜ ಚಿಣಮಳ್ಳೊ, ಸುರೇಶ ಬೆನಕನಹಳ್ಳಿ, ಭೀಮಣ್ಣ ಹೊತಿನಮಡಿ, ನಿಂಗಣ್ಣ ಹೆಗಲೇರಿ, ಬಸಣ್ಣ ತಳವಾರ, ಗುರುನಾಥ ಗುದಗಲ್, ಮುನಿಯಪ್ಪ ಕೊಳ್ಳಿ, ನಾಗೇಂದ್ರ ಜೈಗಂಗಾ, ದಶರಥ ದೊಡ್ಮನಿ, ವೆಂಕಟರಮಣ ಬೇವಿನಗಿಡ, ಶಿವಕುಮಾರ ಯಾಗಾಪುರ, ಕರಣಕುಮಾರ ಅಲ್ಲೂರ, ತಮ್ಮಣ್ಣ ಡಿಗ್ಗಿ, ಮಲ್ಲಿಕಾರ್ಜುನ ಸಂಗಾವಿ, ಲಕ್ಷ್ಮಿಕಾಂತ ಸಾಲಿ ಇತರರು ಇದ್ದರು.