ಸಾರಾಂಶ
ಏಪ್ರಿಲ್ ೩೦ರ ಬುಧವಾರ ಬೆಳಿಗ್ಗೆ ೮-೩೦ಕ್ಕೆ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಶ್ರೀ ಬಸವೇಶ್ವರ ದೇವಾಲಯದ ಮುಂಭಾಗದಿಂದ ಶ್ರೀ ಜಗಜ್ಯೋತಿ ಶ್ರೀ ಬಸವೇಶ್ವರರ ಪೋಟೋವನ್ನು ಬೆಳ್ಳಿರಥದಲ್ಲಿ ಇಟ್ಟು ಕಲಾತಂಡದೊಂದಿಗೆ ಹಾಸನ ನಗರದಲ್ಲಿ ಮೆರವಣಿಗೆ ನಡೆಸಿ ೧೧-೩೦ಕ್ಕೆ ಕಲಾಭವನ ತಲುಪಿ ನಂತರ ಕಲಾಭವನದಲ್ಲಿ ಬಸವ ಜಯಂತಿಯ ಧಾರ್ಮಿಕ ಸಭೆ ಜಿಲ್ಲಾ ಆಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ನಡೆಯುವುದು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲಗೂ ದಾಸೋಹ ವ್ಯವಸ್ಥೆಯನ್ನು ಮಾಡಲು ತಿರ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಿರ್ಮಾನಿಸಲಾಯಿತು.ಏಪ್ರಿಲ್ ೩೦ರ ಬುಧವಾರ ಬೆಳಿಗ್ಗೆ ೮-೩೦ಕ್ಕೆ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಶ್ರೀ ಬಸವೇಶ್ವರ ದೇವಾಲಯದ ಮುಂಭಾಗದಿಂದ ಶ್ರೀ ಜಗಜ್ಯೋತಿ ಶ್ರೀ ಬಸವೇಶ್ವರರ ಪೋಟೋವನ್ನು ಬೆಳ್ಳಿರಥದಲ್ಲಿ ಇಟ್ಟು ಕಲಾತಂಡದೊಂದಿಗೆ ಹಾಸನ ನಗರದಲ್ಲಿ ಮೆರವಣಿಗೆ ನಡೆಸಿ ೧೧-೩೦ಕ್ಕೆ ಕಲಾಭವನ ತಲುಪಿ ನಂತರ ಕಲಾಭವನದಲ್ಲಿ ಬಸವ ಜಯಂತಿಯ ಧಾರ್ಮಿಕ ಸಭೆ ಜಿಲ್ಲಾ ಆಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ನಡೆಯುವುದು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲಗೂ ದಾಸೋಹ ವ್ಯವಸ್ಥೆಯನ್ನು ಮಾಡಲು ತಿರ್ಮಾನಿಸಲಾಯಿತು.
ಸಭೆಯಲ್ಲಿ ಹಾಸನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ತಾರನಾಥ್, ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷರಾದ ಬಿ.ಪಿ. ಐಸಾಮಿಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ನವಿಲೆ ಪರಮೇಶ್, ತಾಲೂಕು ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಉಪಾದ್ಯಾಕ್ಷರಾದ ಲೀಲಾ ಧರ್ಮ, ಜಯಶಂಕರ್, ಪ್ರಧಾನ ಪ್ರಧಾನ ಕಾರ್ಯದರ್ಶಿ ಹೇಮಂತ್, ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಉಪಾಧ್ಯಕ್ಷ ಭೂವನಾಕ್ಷ, ಪ್ರಧಾನ ಕಾರ್ಯದರ್ಶಿ ರುದ್ರಕುಮಾರ್, ಸಹಕಾರ್ಯದರ್ಶಿ ಮಲ್ಲಿಕ್ ನಿರ್ದೇಶಕರಾದ ಶೋಭನ್ ಬಾಬು, ಬಾಳ್ಳು ನಾಗೇಶ್, ಮಿಥುನ್, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷರಾದ ಪುನಿತ್ ಪಟೇಲ್, ಕಾರ್ಯದರ್ಶಿ ಸುರೇಶ್, ನಿರ್ದೇಶಕ ವಿಜಯ ಕುಮಾರ್, ಮಯೂರಿ ಲೋಕೇಶ್, ರಾಜಶೇಖರ್ ಮೂರ್ತಿ, ದರ್ಶನ್, ಮಹಿಳಾ ಘಟಕದ ಉಪಾಧ್ಯಕ್ಷರಾದ ಆಶಾದೇವಿ ಕುಮಾರ್, ಸಹ ಕಾರ್ಯದರ್ಶಿ ನಾಗರತ್ನ ಯೋಗಿಶ್, ಜಿಲ್ಲಾ ಬಸವಕೇಂದ್ರದ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಸೋಮಶೇಖರ್, ಯುವಸೇನೆ ಕಾರ್ಯದರ್ಶಿ ಅವಿನಾಶ್, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ್, ಮಂಜುನಾಥ್ ಎಂಜಿನಿಯರ್, ಗಣೇಶ್, ಬ್ಯಾಡರಹಳ್ಳಿ ಸಂಪತ್, ಪಾಲಾಕ್ಷ, ಚಂದ್ರಶೇಖರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನರಸಿಂಹಯ್ಯ ಮತ್ತಿತರರು ಉಪಸ್ಥಿತರಿದ್ದರು.