ಬಟ್ಟಪ್ಪಾಡಿ ಬೀಚ್ ಸಂಪರ್ಕ ಮಾರ್ಗಕ್ಕೆ ‘ಅಮೃತ ಸೋಮೇಶ್ವರ ರಸ್ತೆ’ ನಾಮಕರಣ ನಿರ್ಧಾರ

| Published : Sep 10 2025, 01:04 AM IST

ಬಟ್ಟಪ್ಪಾಡಿ ಬೀಚ್ ಸಂಪರ್ಕ ಮಾರ್ಗಕ್ಕೆ ‘ಅಮೃತ ಸೋಮೇಶ್ವರ ರಸ್ತೆ’ ನಾಮಕರಣ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮೇಶ್ವರ-ಬಟ್ಟಪ್ಪಾಡಿ ಬೀಚ್ ಸಂಪರ್ಕ ರಸ್ತೆಗೆ ಸಾಹಿತಿ ‘ಅಮೃತ ಸೋಮೇಶ್ವರ ರಸ್ತೆ’ ಎಂದು ನಾಮಕರಣ ಮಾಡಲು ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.

ಉಳ್ಳಾಲ: ಸೋಮೇಶ್ವರ-ಬಟ್ಟಪ್ಪಾಡಿ ಬೀಚ್ ಸಂಪರ್ಕ ರಸ್ತೆಗೆ ಸಾಹಿತಿ ‘ಅಮೃತ ಸೋಮೇಶ್ವರ ರಸ್ತೆ’ ಎಂದು ನಾಮಕರಣ ಮಾಡಲು ಆಕ್ಷೇಪವಿದ್ದ ರಸ್ತೆಗೆ ಮಂಗಳವಾರ ಅಧ್ಯಕ್ಷೆ ಕಮಲ ಅಧ್ಯಕ್ಷತೆಯಲ್ಲಿ ನಡೆದ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.ಈ ಬಗ್ಗೆ ಸದಸ್ಯ ಹರೀಶ್ ಕುಂಪಲ ಮಾತನಾಡಿ‌, ಅಮೃತ ಸೋಮೇಶ್ವರ ಹೆಸರು ನಮ್ಮ ರಸ್ತೆಗೆ ಇಡುವುದು ಹೆಮ್ಮೆಯ ವಿಚಾರ ಎಂದರು. ಇದಕ್ಕೆ ಉಪಾಧ್ಯಕ್ಷ ರವಿಶಂಕರ್ ಮತ್ತು ವಿಪಕ್ಷ ಸದಸ್ಯರು ಬೆಂಬಲ ಸೂಚಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ಮತ್ತಡಿ, ಈ ಹೆಸರಿನಿಂದ ಬಟ್ಟಪಾಡಿ ಹೆಸರು ಅಳಿಸಿಹೋಗುವುದಿಲ್ಲ. ಒಂದು ರಸ್ತೆ ಗೆ ಮಾತ್ರ ಅಮೃತ ಸೋಮೇಶ್ವರ ರಸ್ತೆ ಎಂದು ನಾಮಕರಣ ಮಾಡಲಾಗಿದೆ ಹೊರತು ಬಟ್ಟಪ್ಪಾಡಿ ತೆಗೆದು ಅಮೃತ‌ ಸೋಮೇಶ್ವರ ಎಂದು ಮರುನಾಮಕರಣ ಮಾಡಿಲ್ಲ, ಎಲ್ಲರ ಒಪ್ಪಿಗೆ ಮೇರೆಗೆ ಆಕ್ಷೇಪಣೆ ರದ್ದು ಪಡಿಸಲಾಗುವುದು ಎಂದರು‌.ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಕ್ಕಳು, ಜನ ಸಾಮಾನ್ಯರು ಓಡಾಡದ ಸ್ಥಿತಿ ನಿರ್ಮಾಣವಾಗುತ್ತಿದೆ ಬೀದಿ ನಾಯಿಗಳಿಂದ ಮುಕ್ತಿ ಇಲ್ಲವೇ ಎಂದು ವಿರೋಧ ಪಕ್ಷದ ಮನೋಜ್ ಕಟ್ಟೆಮನೆ ಪ್ರಶ್ನೆಗೆ ಉತ್ತರಿಸಿದ ಪಶು ಸಂಗೋಪನೆ ಅಧಿಕಾರಿ ಎಲ್ಲ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಆಂಟಿ ರ್ಯಾಬೀಸ್ ಲಸಿಕೆ ನೀಡಿ ಅದೇ ಜಾಗದಲ್ಲಿ ಬಿಡಬೇಕು ಎಂಬ ನಿಯಮವಿದೆ. ನೀವು ತ್ಯಾಜ್ಯ ಗಳನ್ನು ವಿಂಗಡಣೆ ಸರಿಯಾಗಿ ಮಾಡಬೇಕು ಹಸಿವು, ರೆಬಿಸ್‌ನಂತಹ ಕಾಯಿಲೆ ಅಥವಾ ಹಿಂದೆ ಯಾರಾದರೂ ನಾಯಿಗೆ ಹೊಡೆದಿದ್ದರೆ ಅದರ ನೆನಪಿನಿಂದ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದರು. ಈ ಬಗ್ಗೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಮಾತನಾಡಿ ಕಳೆದ ಬಾರಿ 300 ಕ್ಕೂ ಅಧಿಕ ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಲಾಗಿದ್ದು ಸಂತಾನ ಕಡಿಮೆ ಮಾಡಬೇಕು ಹೊರತು ಬೇರೆ ಏನು ಮಾಡಲು ಸಾಧ್ಯವಿಲ್ಲ ಎಂದರು‌.‌

ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಪರ್ಯತ್ತೂರು ಉಪಸ್ಥಿತರಿದ್ದರು.