ಬರಪೀಡಿತ ತಾಲೂಕೆಂದು ಘೋಷಿಸಿ, ಬಿಡಿಗಾಸೂ ನೀಡಿಲ್ಲ

| Published : Mar 12 2024, 02:02 AM IST

ಬರಪೀಡಿತ ತಾಲೂಕೆಂದು ಘೋಷಿಸಿ, ಬಿಡಿಗಾಸೂ ನೀಡಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಬರಪೀಡಿತ ತಾಲೂಕು ಎಂದು ಘೋಷಣೆ ಆಗಿದೆ ಹೊರತು, ಇಲ್ಲಿಯತನಕ ಬಿಡಿಗಾಸು ಪರಿಹಾರ ನೀಡಿಲ್ಲ. ಜಲದ ಸೆಲೆ ಬತ್ತಿಹೋಗಿ ಕಂಗಾಲಾಗಿರುವ ರೈತರು 7 ಗಂಟೆ ನಿರಂತರ 3 ಫೇಸ್ ವಿದ್ಯುತ್ ನೀಡುವುದಾಗಿ ಘೋಷಿಸಿರುವ ಸರ್ಕಾರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸರಬರಾಜು ಇಲ್ಲದೆ ರೈತರ ತೋಟ, ಕೃಷಿಗಳು ಒಣಗುತ್ತಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ ಹೊಸನಗರ ಪ್ರತಿಭಟನೆಯಲ್ಲಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸನಗರರಾಜ್ಯದಲ್ಲಿ ಬರಪೀಡಿತ ತಾಲೂಕು ಎಂದು ಘೋಷಣೆ ಆಗಿದೆ ಹೊರತು, ಇಲ್ಲಿಯತನಕ ಬಿಡಿಗಾಸು ಪರಿಹಾರ ನೀಡಿಲ್ಲ ಎಂದು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ ಆರೋಪಿಸಿದರು.

ಬರ ಪರಿಹಾರ, ಎಂಎಸ್‍ಪಿ ಗ್ಯಾರಂಟಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಜಲದ ಸೆಲೆ ಬತ್ತಿಹೋಗಿ ಕಂಗಾಲಾಗಿರುವ ರೈತರು 7 ಗಂಟೆ ನಿರಂತರ 3 ಫೇಸ್ ವಿದ್ಯುತ್ ನೀಡುವುದಾಗಿ ಘೋಷಿಸಿರುವ ಸರ್ಕಾರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸರಬರಾಜು ಇಲ್ಲದೆ ರೈತರ ತೋಟ, ಕೃಷಿಗಳು ಒಣಗುತ್ತಿದೆ ಎಂದು ದೂರಿದರು.

ರಾಜ್ಯ ಉಪಾಧ್ಯಕ್ಷ ರಾಜು ಹಿಟ್ಟೂರು ಮಾತನಾಡಿ, ಬರಗಾಲ ಪೀಡಿತ ಪ್ರದೇಶದ ರೈತರಿಗೆ ಸ್ವಾಮಿನಾಥನ್ ವರದಿಯಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸಹಕಾರಿ ಬ್ಯಾಂಕ್‍ಗಳಲ್ಲಿ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಯೋಜನೆಯು ಮುಂದಿನ ಬೆಳೆ ಕೈಗೆ ಬರುತನಕ ಮುಂದುವರಿಸಬೇಕು. ಮಹಿಳಾ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡಬೇಕು ಎಂದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿರುವ 100 ದಿನಗಳ ಕೂಲಿಯನ್ನು 150 ದಿನ ಕೂಲಿಯ ತನಕ ಏರಿಸಬೇಕು. ರೈತರ ಅಕ್ರಮ ಪಂಪ್‍ಸೆಟ್‍ಗಳನ್ನು ಸಕ್ರಮ ಮಾಡಬೇಕು ಎಂದು ಮನವಿ ಮಾಡಿದರು. ಮುಳುಗಡೆ ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾಋ ನೀಡಬೇಕು. ಬಾಕಿ ಇರುವ ಬಗರ್ ಹುಕುಂ ಜಮೀನಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷ ರಾಘವೇಂದ್ರ ಹಾರೋಬೆನವಳ್ಳಿ, ಪ್ರಧಾನ ಕಾರ್ಯದರ್ಶಿ ಜಗದೀಶ ಮೈಸವಳ್ಳಿ, ಜಿಲ್ಲಾ ಉಪಾಧ್ಯಕ್ಷ ಗುರುಪಾದಪ್ಪ ಗೌಡ, ರಾಜಪ್ಪ ಗೌಡ, ಹಸಿರು ಸೇನೆ ಸಂಚಾಲಕ ಎಂ.ಡಿ.ನಾಗರಾಜ ಪುರದಾಳು, ತಾಲೂಕು ಅಧ್ಯಕ್ಷ ರವೀಂದ್ರ ಮಾಸ್ತಿಕಟ್ಟೆ, ಪ್ರಧಾನ ಕಾರ್ಯದರ್ಶಿ ಸುಗಂಧರಾಜ್ ಕಲ್ಮಕ್ಕಿ, ವೈ.ಭಾಸ್ಕರ್ ಜೋಯ್ಸ್, ಸಹ ಕಾಯದರ್ಶಿ ಈಶ್ವರಪ್ಪ ಕುಕ್ಕಳಲೆ, ಅಮ್ಮುಗಡ್ಡೆ ಭಾಸ್ಕರ ಮತ್ತಿತರರು ಇದ್ದರು.

- - - -11ಎಚ್‍ಒಎಸ್1ಪಿ:

ಹೊಸನಗರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇವೆ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರು.