ಚಿಕ್ಕಬಳ್ಳಾಪುರ : ಮಳೆ, ಬೆಳೆ ಕೊರತೆ, ಹಾಲು ಖರೀದಿ ದರ ಕುಸಿತ - ಚಿಮುಲ್‌ಗೆ ಹಾಲು ಪೂರೈಕೆ ಪ್ರಮಾಣ ಕುಸಿತ

| Published : Dec 31 2024, 01:04 AM IST / Updated: Dec 31 2024, 11:57 AM IST

ಚಿಕ್ಕಬಳ್ಳಾಪುರ : ಮಳೆ, ಬೆಳೆ ಕೊರತೆ, ಹಾಲು ಖರೀದಿ ದರ ಕುಸಿತ - ಚಿಮುಲ್‌ಗೆ ಹಾಲು ಪೂರೈಕೆ ಪ್ರಮಾಣ ಕುಸಿತ
Share this Article
  • FB
  • TW
  • Linkdin
  • Email

ಸಾರಾಂಶ

 ಇತ್ತೀಚೆಗೆ ಮಳೆ, ಬೆಳೆ ಕೊರತೆ, ಹಾಲು ಖರೀದಿ ದರ ಕುಸಿತ ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಇನ್ನೂ ಹಸು ಸಾಕಾಣಿಕೆಗೆ ತಗಲುವ ಖರ್ಚು ಹೆಚ್ಚಾಗಿ ಲಾಭ ಕಡಿಮೆಯಾಗುತ್ತಿದೆ.

 ಚಿಕ್ಕಬಳ್ಳಾಪುರ : ಹೈನೋದ್ಯಮಕ್ಕೆ ಹೆಸರಾಗಿದ್ದ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಜಿಲ್ಲೆಯ ರೈತರು ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರೆ. ಮೆಗಾ ಡೇರಿಗೆ ನಿಗದಿತ ಪ್ರಮಾಣದಲ್ಲಿ ಹಾಲು ಬರುತ್ತಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಹಾಲಿಗೂ ಬರ ಬರಲಿದೆಯೇ ಎಂಬ ಶಂಕೆ ಮೂಡಿದೆ.

ಜಿಲ್ಲೆಯ ಬಹುತೇಕ ರೈತರು ಉಳುಮೆ ಮಾಡದಿದ್ದರೂ ಕಡ್ಡಾಯವಾಗಿ ಹೈನೋದ್ಯಮ ಮಾಡುವುದರ ಮೂಲಕ ಹಾಲು ಉತ್ಪಾದನೆಗೆ ಖ್ಯಾತಿಯಾಗಿದ್ದರು. ಆದರೆ ಇತ್ತೀಚೆಗೆ ಮಳೆ, ಬೆಳೆ ಕೊರತೆ, ಹಾಲು ಖರೀದಿ ದರ ಕುಸಿತ ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಇನ್ನೂ ಹಸು ಸಾಕಾಣಿಕೆಗೆ ತಗಲುವ ಖರ್ಚು ಹೆಚ್ಚಾಗಿ ಲಾಭ ಕಡಿಮೆಯಾಗುತ್ತಿದೆ. ಇದರಿಂದ ರೈತರು ಕೃಷಿ ಹಾಗೂ ಹೈನೋದ್ಯಮದಿಂದ ವಿಮುಖರಾಗುತ್ತಿರುವ ಅನುಮಾನ ಮೂಡಿಸಿದೆ.

ಡೇರಿಗೆ ಹಾಲು ಪೂರೈಕೆ ಇಳಿಕೆ

ಸರ್ಕಾರ ಹೈನುಗಾರಿಗೆ ಉತ್ತೇಜನ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಇತ್ತೀಚೆಗೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಓಕ್ಕೂಟ ಕೊಚಿಮುಲ್​​ನಿಂದ ವಿಭಜನೆ ಆದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಓಕ್ಕೂಟದ ಮೆಗಾ ಡೇರಿಗೆ ಹಾಲಿನ ಕೊರತೆ ಉಂಟಾಗಿದೆ. ಆರುವರೆ ಲಕ್ಷ ಲೀಟರ್ ಹಾಲಿನಿಂದ ಏಳುವರೆ ಲಕ್ಷ ಲೀಟರ್ ಹಾಲು ಬೇಕಾಗಿದೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ 4 ಲಕ್ಷ 70 ಸಾವಿರ ಲೀಟರ್ ಹಾಲು ಮಾತ್ರ ಪೂರೈಕೆ ಆಗುತ್ತಿದೆ.

ರೈತರು ಜಾನುವಾರುಗಳ ಸಾಕಾಣಿಕೆಯಿಂದ ದೂರವಾಗುತ್ತಿದ್ದು ಹಾಲಿನ ಉತ್ಪಾದನೆ ಕುಸಿಯಲು ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹಸು, ಎಮ್ಮೆಗಳನ್ನು ಸಾಕುವವರು ಕಡಿಮೆ ಆಗುತ್ತಿದ್ದಾರೆ. ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶವನ್ನು ಸುತ್ತು ಹಾಕಿದರೆ ಹೈನುಗಾರಿಕೆಯೇ ಇಲ್ಲಿನ ಜನರ ಪ್ರಧಾನ ಉದ್ಯೋಗವಾಗಿತ್ತು.

ಜಾನುವಾರು ಸಾಕಣೆ ಹೊರೆ

ರೈತರು ಜಾನುವಾರುಗಳ ಸಾಕಾಣಿಕೆಯಿಂದ ದೂರವಾಗುತ್ತಿದ್ದು ಹಾಲಿನ ಉತ್ಪಾದನೆ ಕುಸಿಯಲು ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹಸು, ಎಮ್ಮೆಗಳನ್ನು ಸಾಕುವವರು ಕಡಿಮೆ ಆಗುತ್ತಿದ್ದಾರೆ. ದುಬಾರಿಯಾಗುತ್ತಿರುವ ಪಶು ಆಹಾರ, ಹಾಲಿನ ಉತ್ಪಾದನೆಯ ವೆಚ್ಚ ಹೆಚ್ಚಿರುವುದು, ತೋಟಗಾರಿಕಾ ಬೆಳೆಗಳತ್ತ ರೈತರು ವಾಲುತ್ತಿದ್ದಾರೆ. ಹೀಗೆ ನಾನಾ ಕಾರಣದಿಂದ ಜಿಲ್ಲೆಯಲ್ಲಿ ಹೈನುಗಾರರ ಸಂಖ್ಯೆ ಕಡಿಮೆ ಆಗಲು ಕಾರಣವಾಗಿದೆ.ಜಿಲ್ಲೆಯಲ್ಲಿ ಬಹಳಷ್ಟು ರೈತರು ಹೂ, ಹಣ್ಣು, ತರಕಾರಿ ಬೇಸಾಯದ ಕಡೆ ಮುಖ ಮಾಡಿದ್ದಾರೆ. ಹೈನುಗಾರಿಕೆಗೆ ಹೆಚ್ಚು ಸಮಯವನ್ನು ಮೀಸಲಿಡಬೇಕು. ಇಂದಿನ ತಲೆಮಾರಿನ ಯುವ ಸಮುದಾಯ ಹೈನುಗಾರಿಕೆಗಿಂತ ಬೇರೆ ಉದ್ಯೋಗಗಳನ್ನು ಅರಸುತ್ತಿದೆ. ಈ ಎಲ್ಲ ಕಾರಣದಿಂದ ಹಾಲು ಉತ್ಪಾದನೆ ಕಡಿಮೆ ಆಗುತ್ತಿದೆ.ಜಾನುವಾರು ನಿರ್ವಹಣೆ ಸಮಸ್ಯೆ

ಈ ಮೊದಲು ಮನೆಯಲ್ಲಿ ಎಂಟತ್ತು ಹಸುಗಳು ಇರುತ್ತಿದ್ದವು. ಹಿರಿಯರು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಹೈನುಗಾರಿಕೆಗೆ ಇಷ್ಟೊಂದು ಕಷ್ಟಪಡಬೇಕು ಎನ್ನುವ ಮನೋಭಾವವಿದೆ. ಬೇರೆ ಖಾಸಗಿಯವರಿಗೆ ಹೋಲಿಸಿದರೆ ಹಾಲಿನ ದರ ಸಹ ಕಡಿಮೆ. ರಾಸುಗಳ ಸಾಕಣೆಯ ವೆಚ್ಚವೂ ಅಧಿಕವಾಗಿದೆ. ಆದರೆ ಲಾಭ ಕಡಿಮೆ. ಅಲ್ಲದೆ ರೈತರ ಮಕ್ಕಳು ಚೆನ್ನಾಗಿ ಓದಿ ಬೇರೆ ಬೇರೆ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಎಂಟತ್ತು ಹಸುಗಳನ್ನು ಸಾಕುತ್ತಿದ್ದ ಮನೆಗಳಲ್ಲಿ ಈಗ ಮನೆ ಬಳಕೆಗೆ ಹಾಲು ಸಾಕು ಎನ್ನುವ ಸ್ಥಿತಿ ಉಂಟಾಗಿದೆ.

ಜಾನುವಾರುಗಳ ನಿರ್ವಹಣೆಯೂ ಕಷ್ಟವಾಗುತ್ತಿದ್ದು ಈಗ ಮನೆಯಲ್ಲಿ ಎರಡು- ಮೂರು ಹಸುಗಳನ್ನು ಸಾಕುತ್ತಿದ್ದಾರೆ. ಹಿಂದೆ ನೀರು ಮತ್ತು ಮೇವಿಗೆ ಬರ ವಿತ್ತು. ಆದರೆ ಈಗ ಎಚ್.ಎನ್.ವ್ಯಾಲಿ ಮತ್ತು ಮಳೆಯಿಂದ ಕೆರೆಗಳಲ್ಲಿ ನೀರಿದ್ದು, ಕೊಳವೆ ಬಾವಿಗಳಲ್ಲಿ ಸಹಾ ನೀರು ಮೆಲ್ಮಟ್ಟಕ್ಕೆ ಏರಿಕೆಯಾಗಿದೆ. ಆದರೂ ಇಲ್ಲಿಯ ರೈತರು ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಹಾಲು ಉತ್ಪಾದನೆ ವೆಚ್ಚ ದುಬಾರಿ

ಆದರೆ ದಿನದಿಂದ ದಿನಕ್ಕೆ ರೈತರು ಹಸು, ಎಮ್ಮೆ ಸಾಕಲು ಹಿಂದೇಟು ಹಾಕ್ತಿದ್ದಾರೆ. ಹಾಲು ಉತ್ಪಾದನೆಯಲ್ಲಿ ಲಾಭಕ್ಕಿಂತ ಖರ್ಚು ಹೆಚ್ಚಾಗುತ್ತಿರುವ ಕಾರಣ ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರೆ. ಇದೆ ರೀತಿ ಮುಂದುವರೆದರೆ, ಮುಂದೆ ಒಂದು ದಿನ ಹಾಲಿಗೂ ಬರ ಬಂದರೂ ಆಶ್ಚರ್ಯವಿಲ್ಲ.