ಸಾರಾಂಶ
ಸಾವಯವ ಕೃಷಿಯ ಮೂಲ ಶಕ್ತಿಯಾಗಿರುವ ರಾಸಾಯನಿಕ ರಹಿತ ತಿಪ್ಪೆ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಜಾನುವಾರುಗಳ ಸಂಖ್ಯೆಯೇ ಅರ್ಧದಷ್ಟು ಇಳಿಮುಖವಾಗಿ ತಿಪ್ಪೆ ಗೊಬ್ಬರವೇ ಸಿಗುತ್ತಿಲ್ಲ!
ಮಾರುತಿ ಶಿಡ್ಲಾಪುರ
ಕನ್ನಡಪ್ರಭ ವಾರ್ತೆ ಹಾನಗಲ್ಲಸಾವಯವ ಕೃಷಿಯ ಮೂಲ ಶಕ್ತಿಯಾಗಿರುವ ರಾಸಾಯನಿಕ ರಹಿತ ತಿಪ್ಪೆ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಜಾನುವಾರುಗಳ ಸಂಖ್ಯೆಯೇ ಅರ್ಧದಷ್ಟು ಇಳಿಮುಖವಾಗಿ ತಿಪ್ಪೆ ಗೊಬ್ಬರವೇ ಸಿಗುತ್ತಿಲ್ಲ!
ಹಾನಗಲ್ಲ ತಾಲೂಕಿನಲ್ಲಿ ೪೭,೬೬೩ ಹೆಕ್ಟೇರ್ ಕೃಷಿ ಭೂಮಿ, ೧೪,೬೬೨ ಹೆಕ್ಟೇರ್ ತೋಟಗಾರಿಕೆ ಭೂಮಿ ಇಲ್ಲಿ ಇದೆ. ರಾಸಾಯನಿಕ ಬಳಕೆಯಿಂದ ಭೂಮಿ ಬರಡಾಗಿರುವುದು ಈಗ ರೈತರ ಅರಿವಿಗೆ ಬಂದಿದೆ. ಆದರೆ ಅದನ್ನು ಬದಲಾಯಿಸಿಕೊಳ್ಳಲು ಕಷ್ಟವಾಗುತ್ತಿದೆ. ಸಾವಯವದತ್ತ ಆಸಕ್ತಿ ತೋರಿದರೂ ತಿಪ್ಪೆಗೊಬ್ಬರ ಅಗತ್ಯ ಇರುವಷ್ಟು ಲಭ್ಯವಾಗುತ್ತಿಲ್ಲ. ೫೦ ಸಾವಿರ ಜಾನುವಾರು: ಈಗ ತಾಲೂಕಿನಲ್ಲಿ ೫೦ ಸಾವಿರ ಜಾನುವಾರುಗಳಿವೆ ಎಂದು ಅಂದಾಜಿಸಲಾಗಿದೆ. ಆದರೆ ಈ ಜಾನುವಾರುಗಳ ಸಗಣಿಯನ್ನು ಆ ರೈತರೇ ತಮ್ಮ ಹೊಲಕ್ಕೆ ಬಳಸಿಕೊಳ್ಳುತ್ತಾರೆ. ಕಳೆದ ೧೦ ವರ್ಷಗಳಲ್ಲಿ ಜಾನುವಾರುಗಳನ್ನು ಸಾಕುವವರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಬಹುತೇಕ ಕೃಷಿಕರು ಈಗ ಯಂತ್ರಗಳನ್ನೇ ಅವಲಂಬಿಸಿದ್ದು, ಕೃಷಿಗಾಗಿ ಜಾನುವಾರುಗಳ ಬಳಕೆ ಶೇ. ೮೦ರಷ್ಟು ಕಡಿಮೆಯಾಗಿದೆ. ಹಲವು ರೈತರ ಮನೆಗಳಲ್ಲಿ ಜಾನುವಾರುಗಳೇ ಇಲ್ಲ.ರೈತರು ಈಗ ತಿಪ್ಪೆಗೊಬ್ಬರ ಕೊರತೆ ಎದುರಿಸುತ್ತಿದ್ದಾರೆ. ತಿಪ್ಪೆ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಕೆಲವರು ಜಾನುವಾರು ಸಾಕಿ ತಮ್ಮ ಕೃಷಿಗೆ ಅಗತ್ಯವಿರುವಷ್ಟು ತಿಪ್ಪೆಗೊಬ್ಬರ ತಯಾರಿಸಿಕೊಳ್ಳುತ್ತಿದ್ದಾರೆ. ಖರೀದಿಗೆ ಹೋದರೆ ಒಂದು ಟ್ರ್ಯಾಕ್ಟರ್ ಗೊಬ್ಬರಕ್ಕೆ ₹ ೬ರಿಂದ ₹ ೮ ಸಾವಿರ ಕೊಡಬೇಕು. ಸಾಗಾಣಿಕೆ ವೆಚ್ಚ ಸೇರಿದರೆ ₹10 ಸಾವಿರವಾಗುತ್ತದೆ.
ಹೊಲದಲ್ಲಿ ರಾತ್ರಿಹೊತ್ತು ತಂಗುತ್ತಿದ್ದ ಮಹಾರಾಷ್ಟ್ರದ ಕುರಿ ಹಿಂಡುಗಳೂ ಈಗ ಅಪರೂಪ ಆಗಿವೆ.