ಸಾರಾಂಶ
ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದರಿಂದ ಕೃಷ್ಣಾ ನದಿಗೆ 1 ಅಡಿಯಷ್ಟು ನೀರು ಇಳಿಕೆ ಆಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದರಿಂದ ಕೃಷ್ಣಾ ನದಿಗೆ 1 ಅಡಿಯಷ್ಟು ನೀರು ಇಳಿಕೆ ಆಗಿದೆ. ಗುರುವಾರ ನದಿ ಒಳಹರಿವಿನ ಪ್ರಮಾಣದಲ್ಲಿ 6 ಸಾವಿರ ಕ್ಯುಸೆಕ್ ನಷ್ಟು ನೀರು ಇಳಿಕೆ ಕಂಡಿದೆ. ಬುಧವಾರ 2 ಲಕ್ಷ 94 ಸಾವಿರ ಕ್ಯುಸೆಕ್ ಗಳಿಷ್ಟಿದ್ದ ಒಳ ಹರಿವು ಗುರುವಾರ 2 ಲಕ್ಷ 88 ಸಾವಿರ ಕ್ಯುಸೆಕ್‌ಗೆ ಇಳಿಕೆಯಾಗಿದೆ.ನೀರು ಕಡಿಮೆಯಾದರೂ ಕೃಷ್ಣಾ ತೀರದಲ್ಲಿ ಪ್ರವಾಹ ಸ್ಥಿತಿ ಮುಂದುವರಿದೆ. ಮಹಾರಾಷ್ಟ್ರದ ಕೊಯ್ನಾ ಸೇರಿ ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಿಂದ ಅಪಾರ ನೀರು ಹರಿದತ್ಬರುತ್ತಿದೆ.
ಜಲಾಶಯಗಳಿಂದ ನೀರು ಬಿಡುಗಡೆ ಹಿನ್ನೆಲೆ ನದಿ ತೀರದ ಗ್ರಾಮಗಳಲ್ಲಿ ಬರುವ ದಿನಗಳಲ್ಲಿ ಮತ್ತಷ್ಟು ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಚಿಕ್ಕೋಡಿ ಉಪವಿಭಾಗಾಧಿಕಾರಿಗಳಾದ ಸುಭಾಷ ಸಂಪಗಾಂವಿ ಮನವಿ ಮಾಡಿದ್ದಾರೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 2 ಲಕ್ಷ 88 ಸಾವಿರ ಕ್ಯುಸೆಕ್ ನೀರು ಬರುತ್ತಿದೆ. ಆದರೆ, ಆಲಮಟ್ಟಿಯಿಂದ 3 ಲಕ್ಷ 52 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ಶುಕ್ರವಾರದ ವೇಳೆಗೆ ಮತ್ತಷ್ಟು ನದಿ ನೀರಿನ ಮಟ್ಟ ಕಡಿಮೆಯಾಗುವ ಲಕ್ಷಣಗಳಿವೆ.ಮಹಾದಲ್ಲಿನ ಮಳೆಯ ಪ್ರಮಾಣ: ಕೊಯ್ನಾ-74, ವಾರಣಾ-85, ಕಾಳಮ್ಮಾವಾಡಿ-71, ಮಹಾಬಳೇಶ್ವರ-62, ನವಜಾ-104, ರಾಧಾನಗರಿ-120, ಕೊಲ್ಲಾಪುರ-17ಮಿಮೀ ಮಳೆಯಾಗಿರುವ ಕುರಿತು ವರದಿಯಾಗಿದೆ.