ಗಳಿಸಿದ ಹಣದಲ್ಲಿ ಸ್ವಲ್ಪ ಸಮಾಜಕ್ಕೆ ಮೀಸಲಿಡಿ

| Published : Nov 18 2024, 12:01 AM IST

ಸಾರಾಂಶ

ಮನುಷ್ಯ ತಾನು ಗಳಿಸಿದ್ದರಲ್ಲಿ ಅಲ್ಪವನ್ನಾದರೂ ಇತರರಿಗೆ ಮೀಸಲಿಟ್ಟಾಗ ಸಮಾಜ ಗುರುತಿಸಿ ಪುರಸ್ಕರಿಸುತ್ತದೆ. ಇದರಿಂದ ಸಾರ್ಥಕ ಬದುಕು ಪ್ರಾಪ್ತಿಯಾಗುತ್ತದೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ಅಭಿಯಂತರ ಶಿವಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಮನುಷ್ಯ ತಾನು ಗಳಿಸಿದ್ದರಲ್ಲಿ ಅಲ್ಪವನ್ನಾದರೂ ಇತರರಿಗೆ ಮೀಸಲಿಟ್ಟಾಗ ಸಮಾಜ ಗುರುತಿಸಿ ಪುರಸ್ಕರಿಸುತ್ತದೆ. ಇದರಿಂದ ಸಾರ್ಥಕ ಬದುಕು ಪ್ರಾಪ್ತಿಯಾಗುತ್ತದೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ಅಭಿಯಂತರ ಶಿವಕುಮಾರಸ್ವಾಮಿ ಹೇಳಿದರು.ತಾಲೂಕಿನ ಉಳವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನನ್ನ ಶಾಲೆ, ನನ್ನ ಕೊಡುಗೆ ಯೋಜನೆಯಡಿ ಅಕ್ಷರ ದಾಸೋಹ ಯೋಜನೆಗೆ ಅಗತ್ಯ ಪರಿಕರಗಳನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.ಇಂದು ನೀ ದಾನಕ್ಕೆ ಮೊದಲಾದರೆ ಮುಂದೆ ನೀ ಧಣಿಗಿಂತ ಮಿಗಿಲಾಗುವೆ ಎನ್ನುವ ನಮ್ಮ ಹಿರಿಯರ ಮಾತು ಸಾಕಾರಗೊಳ್ಳಬೇಕಾದರೆ ಪ್ರತಿಯೊಬ್ಬರೂ ತಾನು ಓದಿಗೆ ಶಾಲೆಗೆ ಪಲಾಪೇಕ್ಷೆ ಬಯಸದೇ ಅಗತ್ಯತೆ ಇರುವವರಿಗೆ ದಾನವಾಗಿ ನೀಡಿದಾಗಿ ತಾನು ಶ್ರೇಷ್ಠರಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಮನುಷ್ಯ ತನ್ನನ್ನು ತಾನು ಗುರುತಿಸಿಕೊಳ್ಳವ ಬದಲು ಸಮಾಜವೇ ಗುರುತಿಸುವ ಕಾರ್ಯ ಚಟುವಟಿಕೆಗಳಲ್ಲಿ ತೊಡಗಬೇಕು ಎಂದರು.ಎಸ್‌ಡಿಎಂಸಿ ಅಧ್ಯಕ್ಷ ನೂರ್ ಅಹ್ಮದ್ ಮಾತನಾಡಿ, ಸಾವಿರಾರು ಮಕ್ಕಳಿಗೆ ವಿದ್ಯಾದಾನವನ್ನು ನೀಡಿರುವ ಉಳವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 95 ವರ್ಷಗಳ ಇತಿಹಾಸವನ್ನು ಹೊಂದಿದೆ. ಹಿಂದಿನಿಂದಲೂ ಈ ಶಾಲೆಗೆ ಕೊಡುಗೆ ನೀಡಿದ ದಾನಿಗಳ ಸಂಖ್ಯೆಯೇನು ಕಡಿಮೆಯಿಲ್ಲ. ಪಡೆದುಕೊಂಡ ದಾನ ಶಾಲೆಯ ಅಭಿವೃದ್ಧಿಗೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಯಂತೆ ಶಾಲೆಗೆ ಕೊಡುಗೆಯನ್ನು ನೀಡಿದ ಹಳೆಯ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದರು.ನಂತರ ಅಕ್ಷರ ದಾಸೋಹದ ಪಾತ್ರೆ, ವಾಟರ್ ಫ್ಯೂರಿಫೈಯರ್‌ಗಳನ್ನು ದಾನವಾಗಿ ನೀಡಿದ ಅಭಿಯಂತರರಾದ ಶಿವಕುಮಾರಸ್ವಾಮಿ ಮತ್ತು ರಾಜು ಟಿ. ದುಬೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಸದಸ್ಯರಾದ ಅಣ್ಣಪ್ಪ, ಲೋಕೇಶ್, ದುರ್ಗಪ್ಪ, ಸಿಆರ್‌ಪಿ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕಿ ಗುಳ್ಳಮ್ಮ ಮತ್ತು ಶಿಕ್ಷಕ ವೃಂದದವರು ಹಾಜರಿದ್ದರು. ಶಿಕ್ಷಕಿ ಎನ್. ಲಲಿತಾ ಸ್ವಾಗತಿಸಿ, ಸುಕನ್ಯಾ ನಾಯ್ಕ ವಂದಿಸಿ, ಶಿಕ್ಷಕ ರಾಯಪ್ಪ ನಿರೂಪಿಸಿದರು.