ಬೀರೂರುಕ್ಷೇತ್ರದಲ್ಲಿ ಬರಗಾಲ ತಾಂಡವವಾಡುತ್ತಿದ್ದರು ಸಹ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ಭದ್ರಾ ಉಪಕಣಿವೆ ಯೋಜನೆಯಡಿ 2ನೇ ಹಂತದ ಸದ್ಯ ಕೆಲವು ಕೆರೆಗಳು ತುಂಬಿ ಕೋಡಿ ಹರಿಯುತ್ತಿರುವುದು ರೈತರ ಮೊಗದಲ್ಲಿ ಸಂತಸ ತಂದಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಗ್ರಾಮಸ್ಥರಿಂದ ಕೋಡಿ ಬಿದ್ದ ಕೆರೆಯಲ್ಲಿ ಬಸವಣ್ಣ, ಆಂಜನೇಯಸ್ವಾಮಿ ತೆಪ್ಪೋತ್ಸವ

ಕನ್ನಡಪ್ರಭ ವಾರ್ತೆ ಬೀರೂರು

ಕ್ಷೇತ್ರದಲ್ಲಿ ಬರಗಾಲ ತಾಂಡವವಾಡುತ್ತಿದ್ದರು ಸಹ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ಭದ್ರಾ ಉಪಕಣಿವೆ ಯೋಜನೆಯಡಿ 2ನೇ ಹಂತದ ಸದ್ಯ ಕೆಲವು ಕೆರೆಗಳು ತುಂಬಿ ಕೋಡಿ ಹರಿಯುತ್ತಿರುವುದು ರೈತರ ಮೊಗದಲ್ಲಿ ಸಂತಸ ತಂದಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಬೀರೂರು ಹೋಬಳಿ ಜೋಡಿತಿಮ್ಮಾಪುರ ಗ್ರಾಮದ ಸಮೀಪದ ಕೀರನಕಟ್ಟೆಗೆ ಶನಿವಾರ ಭಾಗಿನ ಸಮರ್ಪಿಸಿ ನಂತರ ನಡೆದ ಬಸವಣ್ಣ ಮತ್ತು ಆಂಜನೇಯ ಸ್ವಾಮಿ ತೆಪ್ಪೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ ಆವರಿಸಿ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇಂತಹ ಪರಿಸ್ಥಿಯಲ್ಲೂ ಕೂಡ ಭದ್ರಾಉಪಕಣಿವೆ ಕೆರೆಗಳಿಗೆ ನೀರು ಹರಿಸುವ ಕಾರ್ಯ ಕಡೂರು ಕ್ಷೇತ್ರದಲ್ಲಿ ಬರದಿಂದ ಸಾಗಿದ್ದರ ಪರಿಣಾಮ ಇಂದು ಜೋಡಿತಿಮ್ಮಾಪುರ ಕೀರನಕಟ್ಟೆ ತುಂಬಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಖುಷಿಯಿಂದ ತಮ್ಮ ಗ್ರಾಮದ ಆದಿದೈವ ಬಸವಣ್ಣ ಮತ್ತು ಆಂಜನೇಯ ಸ್ವಾಮಿಯನ್ನು ತೆಪ್ಪೋತ್ಸವದ ಮೂಲಕ ಪ್ರತಿ ವರ್ಷ ಇದೇ ರೀತಿ ಕೆರೆ ತುಂಬಿ ಕೋಡಿ ಹರಿಯಲಿ ಎನ್ನುವ ಪ್ರತೀತಿಯಂತೆ ಆ ಭದ್ರಾ ತಾಯಿ ಇಂತಹ ಬರಗಾಲದಲ್ಲೂ ಕೂಡ ಕೆರೆಗಳ ಒಡಲನ್ನು ಭರ್ತಿ ಮಾಡಿದರ ಪರಿಣಾಮ ಕೆರೆಯ ಸುತ್ತಮುತ್ತಲಿನ ರೈತರ ಜಮೀನುಗಳು ಮತ್ತು ಅಂತರ್ಜಲ ಮಟ್ಟ ಹೆಚ್ಚಾಗುತ್ತಿರುವುದಕ್ಕೆ ಹರ್ಷ ಮತ್ತು ನೆಮ್ಮದಿ ಎಂದರು.

ಜೋಡಿತಿಮ್ಮಾಪುರ ಗ್ರಾಮದ ತಾಪಂ ಮಾಜಿ ಸದಸ್ಯ ಗೋವಿಂದಸ್ವಾಮಿ ಮಾತನಾಡಿ ಶಾಸಕರು ಚುನಾವಣೆಯಲ್ಲಿ ನೀಡಿದ ಬರವಸೆ ಜೊತೆ ನಮ್ಮ ರೈತರ ಸಮಸ್ಯೆ ಬಗೆಹರಿಸುವಲ್ಲಿ ನುಡಿದಂತೆ ನಡೆಯುತ್ತಿರುವುದು ಗ್ರಾಮೀಣ ಜನರ ಬದುಕಿಗೆ ಹೊಸ ಹುರುಪು ನೀಡಿದೆ. ಕಡೂರು ಕ್ಷೇತ್ರದಲ್ಲಿ ಬರ ಆವರಿಸಿದ ಪರಿಣಾಮ ನಮ್ಮ ಭಾಗದ ಅಂತರ್ಜಲ ಬತ್ತಿದ ಹಿನ್ನಲೆಯಲ್ಲಿ ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಸಂಧರ್ಭದಲ್ಲಿ ಭದ್ರಾಉಪಕಣಿವೆ ಯೋಜನೆಯಡಿ ಬರಗಾಲದಲ್ಲಿ ಕೆರಗಳಿಗೆ ನೀರು ಹರಸಿದ ಹಿನ್ನೆಲೆಯಲ್ಲಿ ಕುಡಿವ ನೀರು ಮತ್ತು ಅಂತರ್ಜಲ ಹೆಚ್ಚಳಕ್ಕೆ ಸಹಕಾರಿ. ಒಬ್ಬ ಶಾಸಕನಿಗೆ ಇರಬೇಕಾದ ಜವಾಬ್ದಾರಿ ಶಾಸಕ ಆನಂದ್ ಮಾಡಿ ತೋರಿಸಿರುವುದು ತಾಲೂಕಿನ ರೈತರ ಕಾಳಜಿಗೆ ಸಾಕ್ಷಿ ಎಂದರು.

ಅಲ್ಪಸಂಖ್ಯಾತರ ಯುವ ಮುಖಂಡ ಆರೀಫ್ ಮಾತನಾಡಿ ಕ್ಷೇತ್ರಕ್ಕೆ ಬರ ಎದುರಾದ ಸಂದರ್ಭದಲ್ಲಿ ರೈತರ ಸಂಕಷ್ಟ ಗಮನ ಹರಿಸಿದ ಶಾಸಕರು ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳೊಂದಿಗೆ ಸತತ ಸಂಪರ್ಕ ಮಾಡಿದರ ಪರಿಣಾಮ ಭದ್ರಾ ಉಪಕಣಿವೆ ಯೋಜನೆಯಡಿ ಕೆರೆಗಳನ್ನು ತುಂಬಿಸಲು ಕಾರಣವಾಯಿತು. ಅವರೇ ಹೇಳಿದ ಹಾಗೇ ಮುಂಬರುವ 2027ರ ಜೂನ್ ನಲ್ಲಿ ತಾಲೂಕಿನ ಎಲ್ಲಾ ಕೆರೆಗಳು ತುಂಬಿ ಕಡೂರು ಬರ ಎನ್ನುವ ಹಣೆ ಪಟ್ಟಿಯಿಂದ ಹೊರ ತಂದು ರೈತರ ಸುಭೀಕ್ಷತೆ ಕಾಪಾಡುವಲ್ಲಿ ಸನ್ನದರಾಗುತ್ತಾರೆನ್ನುವ ನಂಬಿಕೆ ಈಗಾಗಲೇ ಕ್ಷೇತ್ರದ ಜನರಲ್ಲಿ ಮೂಡಿದೆ ಎಂದರು.

ಜೋಡಿತಿಮ್ಮಾಪುರ ಗ್ರಾಮದ ಮುಖಂಡರಾದ ಎಲ್.ಟಿ.ಹನುಮಂತಪ್ಪ, ಬಿ.ಜಿ.ಬಸಪ್ಪ, ಲೋಕೇಶ್, ಹೊಗರೇಹಳ್ಳಿ ಶಶಿ, ಬೀರೂರು ಪುರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಶಶಿಧರ್, ಗೌಡರಾದ ಓಂಕಾರಪ್ಪ, ಉಮೇಶ್, ಆರ್.ಹನುಮಂತಪ್ಪ, ಚಂದ್ರಪ್ಪ ಸೇರಿದಂತೆ ನೂರಾರು ಮಹಿಳೆಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.

7 ಬೀರೂರು 2

ಬೀರೂರು ಹೋಬಳಿಯ ಜೋಡಿತಿಮ್ಮಾಪುರ ಗ್ರಾಮದ ಸಮೀಪದ ಕೀರನಕಟ್ಟೆಗೆ ಶನಿವಾರ ಶಾಸಕ ಕೆ.ಎಸ್.ಆನಂದ್ ಭಾಗಿನ ಸಮರ್ಪಿಸಿ, ನಂತರ ನಡೆದ ಬಸವಣ್ಣ ಮತ್ತು ಆಂಜನೇಯ ಸ್ವಾಮಿಯ ತೆಪ್ಪೋತ್ಸವದಲ್ಲಿ ಪಾಲ್ಗೊಂಡರು.