ಪಾಂಡವಪುರ:

ಶ್ರೀಕ್ಷೇತ್ರ ಆದಿಚುಂಚನಗಿರಿ ಸಂಸ್ಥಾನ ಮಠದಲ್ಲಿ ಏ.15ರಂದು ಭೈರವೈಕ್ಯ ಜಗದ್ಗುರು ಶ್ರೀಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ದೇವಸ್ಥಾನ ಲೋಕಾರ್ಪಣೆಗೊಳ್ಳಲಿದೆ. ತಾಲೂಕಿನಿಂದ ಶ್ರೀಮಠದ ಭಕ್ತರು ಹಾಗೂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ನ ರಾಜ್ಯಾಧ್ಯಕ್ಷ ಡಿ.ರವಿಕುಮಾರ್ ಮನವಿ ಮಾಡಿದರು.

ಪಟ್ಟಣದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭೈರವೈಕ್ಯ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರು ಆದಿಚುಂಚನಗಿರಿ ಕ್ಷೇತ್ರವನ್ನು ಜಿಲ್ಲೆಯಿಂದ ವಿಶ್ವದ ಹಲವೆಡೆ ಬೆಳೆಸಿದ್ದಾರೆ ಎಂದರು.

ಶೈಕ್ಷಣಿಕ, ಧಾರ್ಮಿಕಸ ಸಾಮಾಜಿಕ ಹಾಗೂ ಪರಿಸರದ ಬಗ್ಗೆ ಕಾಳಜಿ ವಹಿಸಿ ಹಲವು ಸಮಾಜಸೇವೆ ಮಾಡಿಕೊಂಡು ಅಭಿವೃದ್ಧಿಗೆ ಶ್ರಮಿಸಿ ವಿಶ್ವದಲ್ಲಿ ಶ್ರೀಮಠ ಗುರುತಿಸಿಕೊಂಡಿದೆ. ಶ್ರೀಗಳ ಆದರ್ಶವನ್ನು ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದರು.

ಏ.15ರಂದು ಭೈರವೈಕ್ಯ ಜಗದ್ಗುರು ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ದೇವಸ್ಥಾನ ಲೋಕಾರ್ಪಣೆಯಾಗುತ್ತಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಹಾಗಾಗಿ ತಾಲೂಕು ಸೇರಿದಂತೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು, ಭಕ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.


ಸಭೆಯಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ಗೌ.ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಕಾರ್ಯದರ್ಶಿ ಕೆ.ಕುಬೇರ, ಸದಸ್ಯರಾದ ಚಂದ್ರಶೇಖರಯ್ಯ, ಲಯನ್ ನಾಗರಾಜು, ಸ್ವಾಮೀಗೌಡ, ಸಿ.ಎಸ್.ಸುಬ್ಬೇಗೌಡ, ಎಚ್.ಕೆ.ಜನಾರ್ಧನ್, ರಾಜೀವ್, ಬಿ.ಎಸ್.ಜಯರಾಮು, ಕುಮಾರ್, ಅನಿತಾಲೋಕೇಶ್, ಮಂಜುಳಾಶಂಕರ್‌ನಾಗ್, ಸುಪ್ರೀಯ, ವಿಜಿಕುಮಾರ್, ಚಂದ್ರಶೇಖರ್, ರಾಮಲಿಂಗೇಗೌಡ, ಶ್ರೀನಿವಾಸ್, ಶಂಕರ್, ಜವರೇಗೌಡ, ಪಾರ್ಥೇಗೌಡ, ವಕೀಲ ಸತೀಶ್,ಚಿತ್ರ ಸೇರಿದಂತೆ ಹಲವರು ಇದ್ದರು.ನಾಳೆಯಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ: ನಿಷೇಧಾಜ್ಞೆ ಜಾರಿ

ಮಂಡ್ಯ:೨೦೨೬ ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ಕಾರ್ಯವು ಏ.೮ರಿಂದ ಒಟ್ಟು ೬ ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿದೆ. ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳುವವರೆಗೂ ಮೌಲ್ಯಮಾಪನ ಕೇಂದ್ರಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಆದೇಶಿಸಿದ್ದಾರೆ.

ಮೌಲ್ಯಮಾಪನ ಕೇಂದ್ರಗಳಾದ ಕಾರ್ಮೆಲ್ ಕಾನ್ವೆಂಟ್, ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲ್ಲುಕಟ್ಟಡ), ಸೆಂಟ್ ಜಾನ್ ಪ್ರೌಢಶಾಲೆ, ಸೆಂಟ್ ಜೋಸೆಫ್ ಪ್ರೌಢಶಾಲೆ, ರೋಟರಿ ಪ್ರೌಢಶಾಲೆ ಹಾಗೂ ಲಕ್ಷ್ಮೀ ಜನಾರ್ದನ ಬಾಲಿಕಾ ಪ್ರೌಢಶಾಲೆಯ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿದೆ. ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿ/ಸಿಬ್ಬಂದಿಯನ್ನು ಹೊರತುಪಡಿಸಿ ಇತರರು ಯಾರೂ ನಿಷೇಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲವೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.