ಬೇಲೂರಲ್ಲಿ ಬಸವಣ್ಣನವರ ಕಂಚಿನ ಪ್ರತಿಮೆಯ ಲೋಕಾರ್ಪಣೆ

| Published : Mar 09 2024, 01:31 AM IST

ಬೇಲೂರಲ್ಲಿ ಬಸವಣ್ಣನವರ ಕಂಚಿನ ಪ್ರತಿಮೆಯ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ನಗರದ ಬಸ್ ನಿಲ್ದಾಣದ ಬಳಿ ಶ್ರೀ ಬಸವೇಶ್ವರ ವೃತ್ತದಲ್ಲಿ ವಿಶ್ವ ಗುರು ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಮಹಾ ಶಿವರಾತ್ರಿ ದಿನ ಪುಷ್ಪಗಿರಿ ಮಹಾಸಂಸ್ಥಾನದ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ ಲೋಕಾರ್ಪಣೆ ಮಾಡಿದರು.

ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಉದ್ಘಾಟನೆ । ಶಿವರಾತ್ರಿ ಪ್ರಯುಕ್ತ ಆಯೋಜನೆಕನ್ನಡಪ್ರಭ ವಾರ್ತೆ ಬೇಲೂರು

ನಗರದ ಬಸ್ ನಿಲ್ದಾಣದ ಬಳಿ ಶ್ರೀ ಬಸವೇಶ್ವರ ವೃತ್ತದಲ್ಲಿ ವಿಶ್ವ ಗುರು ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಮಹಾ ಶಿವರಾತ್ರಿ ದಿನ ಪುಷ್ಪಗಿರಿ ಮಹಾಸಂಸ್ಥಾನದ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ ಲೋಕಾರ್ಪಣೆ ಮಾಡಿದರು.

ಈ‌ ಸಂದರ್ಭದಲ್ಲಿ ಪುಷ್ಪಗಿರಿ ಜಗದ್ಗುರು ಮಾತನಾಡಿ, ಸಮಾಜದಲ್ಲಿನ ಅಸಮಾನತೆ, ಮೌಡ್ಯ ಮತ್ತು ಜಾತಿ ಪದ್ದತಿಯನ್ನು ಖಂಡಿಸಿ ಜಗತ್ತಿಗೆ ಸಂದೇಶ ನೀಡಿದ ೧೨ ನೇ ಶತಮಾನದ ಬಸವಣ್ಣನವರು ಇಡೀ ಪ್ರಪಂಚಕ್ಕೆ ಅನುಭವ ಮಂಟಪದ ಸಂಸತ್ತಿಗೆ ಮುನ್ನುಡಿ ಬರೆದ ಕೀರ್ತಿ ಸಲ್ಲುತ್ತದೆ. ಅನುಭವ ಮಂಟಪದಲ್ಲಿ ಸ್ತ್ರೀ ಸಮಾಜನತೆ ನೀಡಿದ ಹೆಗ್ಗಳಿಕೆಗೆ ಬಸವಾದಿ ಶರಣರು ಪಾತ್ರರಾಗಿದ್ದಾರೆ. ವಚನ ಸಾಹಿತ್ಯದ ಮೂಲಕ ‌ನಾಡಿನ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿ ದಾರ್ಶನಿಕರ ಪಟ್ಟಿಯಲ್ಲಿ ಸೇರಿದ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಇಂತಹ ಪ್ರತಿಮೆ ಅನಾವರಣಕ್ಕೆ ಅರ್ಥಪೂರ್ಣ ಬರುತ್ತದೆ ಎಂದರು.

ಕರ್ನಾಟಕ ಸರ್ಕಾರ ಇತ್ತೀಚಿನ ದಿನ ವಿಶ್ವಗುರು ಬಸವಣ್ಣನವರನ್ನು ಅಖಂಡ ಕರ್ನಾಟಕದ ಸಾಂಸ್ಕೃತಿಕ ‌ನಾಯಕ ಎಂದು ಘೋಷಣೆ ಮಾಡಿ ‌ ಸರ್ಕಾರಿ ಕಚೇರಿಯಲ್ಲಿ ‌ಕಡ್ಡಾಯವಾಗಿ ಬಸವಣ್ಣನವರ ‌ಭಾವಚಿತ್ರವನ್ನು ಹಾಕಲು ಆದೇಶ ನೀಡಿದ್ದಾರೆ. ಬಳಿಕ ಮೂರು‌ ದಶಕದಿಂದ ನಡೆದ ಹೋರಾಟದ ಫಲ ಹಾಗೂ ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಶಾಸಕ ಎಚ್.ಕೆ.ಸುರೇಶ್ ‌ಸಹಕಾರದಿಂದ ಇಂದು ಪ್ರವಾಸಿ ತಾಣ ಬೇಲೂರಿನಲ್ಲಿ ‌ಕಂಚಿನ ಪ್ರತಿಮೆ ಅನಾವರಣಗೊಂಡಿದ್ದು ನಿಜಕ್ಕೂ ಸಂತಸ ತಂದಿದೆ ಎಂದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಪ್ರವಾಸಿ ತಾಣ ಬೇಲೂರಿನ ಹೃದಯ ಭಾಗದಲ್ಲಿ ಬಸವೇಶ್ವರರ ಕಂಚಿನ ಪ್ರತಿಮೆಯ ಲೋಕಾರ್ಪಣೆ ಸಂತೋಷ ತಂದಿದೆ. ಪುಷ್ಪಗಿರಿ ಜಗದ್ಗುರು ಲೋಕಾರ್ಪಣೆ ನಡೆಸಿದ್ದು ಭಕ್ತರಿಗೆ ಇನ್ನೂ ಹೆಚ್ಚಿನ ಸಂತಸ ಮೂಡಿದೆ. ೧೨ನೇ ಶತಮಾನದಲ್ಲಿ ಜನ್ಮ ತಾಳಿದ ಬಸವಾದಿ ಶರಣರು ಸಮಾಜಕ್ಕೆ‌ ನೀಡಿದ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ಸಂಸದ ಪ್ರಜ್ವಲ್ ರೇವಣ್ಣ, ಪುರಸಭಾ ‌ಅಧ್ಯಕ್ಷ ಮೀನಾಕ್ಷಿ ವೆಂಕಟೇಶ್, ರಾಜ್ಯ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ವೆಂಕಟೇಶ್, ವೀರಶೈವ ಸಂಘದ ಅಧ್ಯಕ್ಷ ರವಿಕುಮಾರ್, ಪುರಸಭಾ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ, ಸಿ.ಎಂ.ನಿಂಗರಾಜು, ಕೊರಟಿಕೆರೆ ಪ್ರಕಾಶ್, ಗೆಂಡೇಹಳ್ಳಿ ಚೇತನ್, ಬಳ್ಳೂರು ಉಮೇಶ್, ಅದ್ಧೂರಿ ಚೇತನ್ ಕುಮಾರ್, ಬೆಣ್ಣೂರು ರೇಣುಕುಮಾರ್, ಎಚ್.ಎಂ. ದಯಾನಂದ, ಸಿ.ಎನ್.ದಾನಿ, ಬಿ.ಎಂ. ದೊಡ್ಡವೀರೇಗೌಡ, ಹೆಬ್ಬಾಳು ಹಾಲಪ್ಪ, ಕನಾಯನಾಯ್ಕನಹಳ್ಳಿ ಮಹಾದೇವ್, ಹೇಮಾ ವಿರೂಪಾಕ್ಷ, ಗೀತಾ ಶಿವರಾಜ್, ಉಮಾಶಂಕರ್, ಅಡಗೂರು ಬಸವರಾಜು, ಅನಂದ್, ಮೊಹಮ್ಮದ್ ದಾವೂದ್ ಹಾಜರಿದ್ದರು.

ಅನುಭವ ಮಂಟಪ ಪ್ರಜಾಪ್ರಭುತ್ವಕ್ಕೆ ಬುನಾದಿ

ಬಸವಣ್ಣನವರು ೧೨ ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿಯಾಗಿದೆ. ಇಂತಹ ಸಂಸತ್ತು ನೂರಾರು ವಿಚಾರಕ್ಕೆ ಮತ್ತು ಯುವಜನತೆ ಸಂಸತ್ತಿನಲ್ಲಿ ಮಾತನಾಡಲು ಬಸವಣ್ಣ ಮತ್ತು ಅಂಬೇಡ್ಕರ್ ಸ್ಫೂರ್ತಿಯಾಗಿದ್ದಾರೆ ಎಂದು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಹೇಳಿದರು.ಬೇಲೂರಿನ ಬಸ್ ನಿಲ್ದಾಣದ ಬಳಿ ಶ್ರೀ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಪುಷ್ಪಗಿರಿ ಜಗದ್ಗುರು ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು.