ಮೈಸೂರು ಮಹಾ ಸಂಸ್ಥಾನದಿಂದ ದೇವಿರಮ್ಮ ದೇವಿಗೆ ಮಡಿಲಕ್ಕಿ ಸಮರ್ಪಣೆ

| Published : Nov 14 2023, 01:18 AM IST

ಮೈಸೂರು ಮಹಾ ಸಂಸ್ಥಾನದಿಂದ ದೇವಿರಮ್ಮ ದೇವಿಗೆ ಮಡಿಲಕ್ಕಿ ಸಮರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಮಹಾ ಸಂಸ್ಥಾನದಿಂದ ದೇವಿರಮ್ಮ ದೇವಿಗೆ ಮಡಿಲಕ್ಕಿ ಸಮರ್ಪಣೆ

ಮಹಾರಾಜರ ಪ್ರತಿನಿಧಿಯಾಗಿ ರಾಜ್‌ ಅರಸು ಚೆಟ್ಟಿಯಾರ್ ಸಂಘದ ಅಧ್ಯಕ್ಷ ದಿನೇಶ್‌ ಅರಸ್

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಲ್ಲೇನಹಳ್ಳಿಯ ಬಿಂಡಿಗ ದೇವಿರಮ್ಮ ದೇವಿ ಬ್ರಹ್ಮ ಕಳಶೋತ್ಸವ ಸ್ಥಾಪನೆ ಕಾರ್ಯ 2024ರ ಫೆಬ್ರವರಿ ಮಾಹೆಯಲ್ಲಿ ನಡೆಯಲಿದ್ದು, ಈ ಕಾರ್ಯದಲ್ಲಿ ಮೈಸೂರು ಮಹಾ ಸಂಸ್ಥಾನದ ಯದುವೀರ್‌ ಒಡೆಯರ್‌ ಆಗಮಿಸಲಿದ್ದಾರೆ ಎಂದು ರಾಜ್‌ ಅರಸು ಚೆಟ್ಟಿಯಾರ್ ಸಂಘದ ಅಧ್ಯಕ್ಷ ದಿನೇಶ್‌ ಅರಸ್ ಹೇಳಿದರು. ಸೋಮವಾರ ದೇವಿರಮ್ಮ ದೇಗುಲದಲ್ಲಿ ಮೈಸೂರು ಮಹಾ ಸಂಸ್ಥಾನದಿಂದ ಸಂಪ್ರದಾಯದಂತೆ ಬಿಂಡಿಗ ದೇವಿರಮ್ಮ ದೇವಿಗೆ ಮಡಿಲಕ್ಕಿ ಕೊಡಲು ಮಹಾರಾಜರ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದೇನೆ ಎಂದರು. ಸಂಪ್ರದಾಯದಂತೆ ಮಡಿಲಕ್ಕಿ ಕೊಡಬೇಕೆಂಬ ಬಗ್ಗೆ ಸಮಿತಿ ಸದಸ್ಯರು ಹಾಗೂ ಅರಸು ಸಂಘದ ಪದಾಧಿಕಾರಿಗಳು ಮನವಿ ಮಾಡಿದ ಮೇರೆಗೆ ಮಡಿಲಕ್ಕಿ ಕೊಡಲು ಕಳುಹಿಸಿದ್ದಾರೆ. 50 ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ವಿದೇಶಕ್ಕೆ ಮಹಾರಾಜರು ತೆರಳಿರುವುದರಿಂದ ಇಲ್ಲಿಗೆ ಆಗಮಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಅರಸು ಸಂಘದ ಅಧ್ಯಕ್ಷ ಮಧುಕುಮಾರ್‌ ರಾಜ್‌ ಅರಸ್ ಮಾತನಾಡಿ, ಸಂಪ್ರದಾಯದಂತೆ ದೇವಿರಮ್ಮ ದೇವಿಗೆ ಮೈಸೂರು ಮಹಾಸಂಸ್ಥಾನದಿಂದ ಮಡಿಲಕ್ಕಿ ಕೊಡುವ ಕಾರ್ಯ ಕಾರಣಾಂತರದಿಂದ ನಿಂತು ಹೋಗಿತ್ತು ಎಂದು ಹೇಳಿದರು.

ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಈ ಸಂಪ್ರದಾಯದ ಬಗ್ಗೆ ಅರಸು ಸಮುದಾಯ ಭವನ ಉದ್ಘಾಟನೆಗೆ ಮಹಾರಾಜರನ್ನು ಆಹ್ವಾನಿಸಲು ಹೋಗಿದ್ದಾಗ ಚರ್ಚಿಸಿದ್ದು ಉದ್ಘಾಟನೆಗೆ ಬಂದಾಗ ಸಂಪ್ರದಾಯಗಳು ಮುಂದುವರಿಸುವುದಾಗಿ ಭರವಸೆ ನೀಡಿದ್ದರು ಎಂದರು.

ಅದರಂತೆ ಸಂಸ್ಥಾನ ಮತ್ತು ನಾಗರಿಕರ ಪರವಾಗಿ ಭಕ್ತಿ ಪೂರ್ವಕವಾಗಿ ಮಡಿಲಕ್ಕಿ ಸಮರ್ಪಿಸಿ ಪೂಜೆ ಸಲ್ಲಿಸಿದ್ದು, ಎಲ್ಲಾ ಭಕ್ತರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.

ಬಿಂಡಿಗ ದೇವಿರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಕುಲಶೇಖರ್ ಮಾತನಾಡಿ. ಸಂಪ್ರದಾಯದಂತೆ ಮಡಿಲಕ್ಕಿ ಕೊಡುವಂತೆ ಮನವಿ ಮಾಡಿದ್ದರಿಂದ ಕಳೆದ ವರ್ಷದಿಂದ ಸೀರೆ ಮಡಿಲಕ್ಕಿ ಕಳುಹಿಸಿಕೊಟ್ಟಿದ್ದರು ಇದನ್ನು ನಿರಂತರವಾಗಿ ಮುಂದುವರಿಸುವುದಾಗಿ ಮಹಾರಾಜರು ವಿಶ್ವಾಸ ವ್ಯಕ್ತಪಡಿಸಿದ್ದು ನಮಗೆಲ್ಲ ಸಂತೋಷವಾಗಿದೆ ಎಂದರು.

ನರಕ ಚತುರ್ದಶಿ ಅಂಗವಾಗಿ ಸುಮಾರು 70 ಸಾವಿರ ಭಕ್ತರು ಬೆಟ್ಟ ಹತ್ತಿ ದೇವಿರಮ್ಮ ದೇವಿ ದರ್ಶನ ಪಡೆದಿದ್ದಾರೆ. ಮಂಗಳವಾರ ಜಾತ್ರಾ ಮಹೋತ್ಸವ ಮತ್ತು ಬುಧವಾರ ಮುಂಜಾನೆ ಕೆಂಡ ಹಾಯುವ ಕಾರ್ಯ ಮುಗಿದ ಬಳಿಕ ದೇವಿರಮ್ಮ ದೀಪೋತ್ಸವ ಅಂತ್ಯಗೊಳ್ಳಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅರಸು ಸಂಘದ ಉಪಾಧ್ಯಕ್ಷ ಸತ್ಯನಾರಾಯಣ್‌ ರಾಜ್‌ ಅರಸ್, ಪ್ರಧಾನ ಕಾರ್ಯದರ್ಶಿ ದಶರಥ ರಾಜ್‌ ಅರಸ್, ನಿರ್ದೇಶಕರಾದ ಗಜೇಂದ್ರ ರಾಜ್‌ ಅರಸ್, ಸಹ ಕಾರ್ಯದರ್ಶಿ ನಾಗೇಶ್‌ ರಾಜ್‌ ಅರಸ್, ಪ್ರಜ್ವಲ್‌ ರಾಜ್‌ ಅರಸ್ ಉಪಸ್ಥಿತರಿದ್ದರು. 13 ಕೆಸಿಕೆಎಂ 4ಮೈಸೂರು ಮಹಾ ಸಂಸ್ಥಾನದಿಂದ ಸಂಪ್ರದಾಯದಂತೆ ಬಿಂಡಿಗ ದೇವಿರಮ್ಮ ದೇವಿಗೆ ಮಡಿಲಕ್ಕಿ ನೀಡಲು ಸೋಮವಾರ ಆಗಮಿಸಿದ್ದ ರಾಜ್‌ ಅರಸು ಚೆಟ್ಟಿಯಾರ್ ಸಂಘದ ಅಧ್ಯಕ್ಷ ದಿನೇಶ್‌ ಅರಸ್ ಅವರನ್ನು ಸನ್ಮಾನಿಸಲಾಯಿತು.