ಸಾರಾಂಶ
ಹಾರನಹಳ್ಳಿ ಕೋಡಿಮಠದ ಪುರಾತನ ಕೆರೆ ನಿರಂತರ ಮಳೆಯಿಂದ ಕೋಡಿಬಿದ್ದಿದ್ದು, ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ, ಕೋಡಮ್ಮ ದೇವಿಯವರ ಸನ್ನಿಧಿಯಲ್ಲಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಕೆರೆಗೆ ಬಾಗಿನ ಸಮರ್ಪಿಸಿದರು. ಈ ಕೆರೆ ಪ್ರಾಚೀನ ಇತಿಹಾಸ ಹೊಂದಿದ್ದು, ಬಾಗಿನ ಬಿಡುವ ಸಂಪ್ರದಾಯವು ಶತಮಾನಗಳಿಂದಲೂ ಮುಂದುವರಿದಿದೆ. ಕೆರೆಯು ಸುತ್ತಮುತ್ತಲಿನ ಸುಮಾರು 40 ಹಳ್ಳಿಗಳ ರೈತರ ಜೀವನಾಡಿ ಎಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಚೇತನ್ ಮರಿದೇವರು ಈ ಕೆರೆಯು ಮಂಗಳವಾರ ಹಾಗೂ ಶುಕ್ರವಾರಗಳಲ್ಲಿ ತುಂಬಿ ಹರಿಯುವ ಸಂಪ್ರದಾಯವಿದೆ. ಈ ಬಾರಿ ಶಿವವಾರವಾದ ಸೋಮವಾರ ಗಂಗೆ ತುಂಬಿ ಹರಿದಿದ್ದು, ಇದು ಶುಭ ಲಕ್ಷಣವೆಂದು ನಾವು ನಂಬುತ್ತೇವೆ ಎಂದು ಹೇಳಿದರು.
ಅರಸೀಕೆರೆ: ತಾಲೂಕಿನ ಹಾರನಹಳ್ಳಿ ಕೋಡಿಮಠದ ಪುರಾತನ ಕೆರೆ ನಿರಂತರ ಮಳೆಯಿಂದ ಕೋಡಿಬಿದ್ದಿದ್ದು, ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ, ಕೋಡಮ್ಮ ದೇವಿಯವರ ಸನ್ನಿಧಿಯಲ್ಲಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಕೆರೆಗೆ ಬಾಗಿನ ಸಮರ್ಪಿಸಿದರು.ಈ ಕೆರೆ ಪ್ರಾಚೀನ ಇತಿಹಾಸ ಹೊಂದಿದ್ದು, ಬಾಗಿನ ಬಿಡುವ ಸಂಪ್ರದಾಯವು ಶತಮಾನಗಳಿಂದಲೂ ಮುಂದುವರಿದಿದೆ. ಕೆರೆಯು ಸುತ್ತಮುತ್ತಲಿನ ಸುಮಾರು 40 ಹಳ್ಳಿಗಳ ರೈತರ ಜೀವನಾಡಿ ಎಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಚೇತನ್ ಮರಿದೇವರು ಈ ಕೆರೆಯು ಮಂಗಳವಾರ ಹಾಗೂ ಶುಕ್ರವಾರಗಳಲ್ಲಿ ತುಂಬಿ ಹರಿಯುವ ಸಂಪ್ರದಾಯವಿದೆ. ಈ ಬಾರಿ ಶಿವವಾರವಾದ ಸೋಮವಾರ ಗಂಗೆ ತುಂಬಿ ಹರಿದಿದ್ದು, ಇದು ಶುಭ ಲಕ್ಷಣವೆಂದು ನಾವು ನಂಬುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು, ಗ್ರಾಮಸ್ಥರು ಹಾಗೂ ಮಠದ ಶಿಷ್ಯರು ಭಾಗವಹಿಸಿದರು.
;Resize=(128,128))
;Resize=(128,128))