ಜಿಂಕೆ ಬೇಟೆಯಾಡಿದ ಆರೋಪಿ ಬಂಧನ

| Published : Apr 21 2025, 12:52 AM IST

ಸಾರಾಂಶ

ತಾಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ರಾಮಾಪುರ ದಿನ್ನಳ್ಳಿ ಮಾರ್ಗ ಮಧ್ಯೆ ಜಿಂಕೆ ಬೇಟೆಯಾಡಿದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ

ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ರಾಮಾಪುರ ದಿನ್ನಳ್ಳಿ ಮಾರ್ಗ ಮಧ್ಯೆ ಜಿಂಕೆ ಬೇಟೆಯಾಡಿದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮಲೆ ಮಹದೇಶ್ವರ ವನ್ಯಧಾಮದ ಪಚ್ಚೆದೊಡ್ಡಿ ಗಸ್ತಿನ‌ ದಿನ್ನಳ್ಳಿ‌- ರಾಮಾಪುರ ಮಾರ್ಗ ಜಿಂಕೆಯೊಂದನ್ನು ಬೇಟೆಯಾಡಿ ಸಾಗಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಆರ್‌ಎಫ್ಒ ಗಳಾದ ಪ್ರವೀಣ್ ಹಾಗೂ ಉಮಾಪತಿ ಮಾರ್ಗದರ್ಶನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ‌ ನಡೆಸಿ ಅಜ್ಜಿಪುರದ ಸುರೇಶ್ (35) ಎಂಬಾತನನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಗೋವಿಂದ, ಮೂರ್ತಿ ಎಂಬಾತರು ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾರೆ. ಈ ವೇಳೆ ಬಂಧಿತ ಆರೋಪಿಯಿಂದ ಆಟೋ ಸೇರಿದಂತೆ ಜಿಂಕೆಯ ಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಡಿ ಆರ್ ಎಫ್ ಒ ನಂದೀಶ್ ಅರಣ್ಯ ಅಧಿಕಾರಿಗಳಾದ ಸುರೇಶ್ ಅಶೋಕ್ ಭೀಮ್ಸ್ ಇದ್ದರು.