ಸಾರಾಂಶ
ಕೊಡಮಡಗು ಗ್ರಾಪಂನಲ್ಲಿ ಮಧುಗಿರಿ ಉಪವಿಭಾಗಾಧಿಕಾರಿಗಳಾದ ಗೂಟೂರು ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ಅವಿಶ್ವಾಸ ಸೂಚನೆ ಕುರಿತು ಸದಸ್ಯರ ಸಭೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ಕೊಡಮೊಡಗು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಗ್ರಾಪಂ ಅಧ್ಯಕ್ಷರ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸೋಲು ಉಂಟಾಗಿದೆ.ತಾಲೂಕಿನ ಕೊಡಮಡಗು ಗ್ರಾಪಂನಲ್ಲಿ ಹತ್ತು ಮಂದಿ ಗ್ರಾಮ ಪಂಚಾಯಿತಿಯ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೋರಿ ಮಧುಗಿರಿ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಸಭೆ ನಡೆಸಲು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ತಾಲೂಕಿನ ಕೊಡಮಡಗು ಗ್ರಾಪಂನಲ್ಲಿ ಮಧುಗಿರಿ ಉಪವಿಭಾಗಾಧಿಕಾರಿಗಳಾದ ಗೂಟೂರು ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ಅವಿಶ್ವಾಸ ಸೂಚನೆ ಕುರಿತು ಸದಸ್ಯರ ಸಭೆ ನಡೆಸಲಾಯಿತು.ಜಿಲ್ಲಾಧಿಕಾರಿಗಳ ಅದೇಶನ್ವಯ ನಿಯಮನುಸಾರ ನಿಗದಿತ ಅವಧಿಗೆ ಸರಿಯಾಗಿ ಸಭೆ ಪ್ರಾರಂಭಿಸಿದ್ದು, ಈ ವೇಳೆ ಸಭೆಯ ಉದ್ದೇಶವನ್ನು ಓದಿ ವಿವರಿಸಲಾಯಿತು.
ಇಲ್ಲಿನ ಗ್ರಾಪಂನ ಒಟ್ಟು 15 ಸದಸ್ಯರ ಪೈಕಿ ಹಾಲಿ ಗ್ರಾಪಂ ಅಧ್ಯಕ್ಷರಾದ ಅಡಿವಕ್ಕ ಹಾಗೂ ಸದಸ್ಯರಾದ ಮೀನಾಕುಮಾರಿ, ಅನಿತಾ, ಸುಜಾತಬಾಯಿ ಹನುಮಂತರಾಯ, ಮೋಹನ್ ಕುಮಾರ್, ನವೀನ್ ಕುಮಾರ್ ನಾಯ್ಕ್, ಸುಬ್ಬರಾಯಪ್ಪ ಸೇರಿ 7 ಮಂದಿ ಸದಸ್ಯರು ಗೈರು ಹಾಜರಾಗಿದ್ದರು. ಉಪಾಧ್ಯಕ್ಷರಾದ ಉಮಾಶಂಕರ್ ನಾಯ್ಕ್, ಸದಸ್ಯರಾದ ಬೈಲು ತಿಮ್ಮಪ್ಪ, ರಾಮಾಂಜಿನಪ್ಪ ಗಂಗಮ್ಮ, ನರಸಮ್ಮ, ವಿನುತಾ, ಸುನಂದಮ್ಮ ಸಭೆಯಲ್ಲಿ ಹಾಜರಿದ್ದರು. ಈ ಹಿನ್ನೆಲೆಯಲ್ಲಿ ಸಭೆ ನಡೆಸಲು ಸದಸ್ಯರ ಅಗತ್ಯ ಕೋರಂ ಇಲ್ಲದ ಪರಿಣಾಮ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಡಿವಕ್ಕ ಅವರ ವಿರುದ್ಧ ಹತ್ತು ಜನ ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ವಿಫಲವಾಗಿದ್ದು ಸಭೆ ವಿಸರ್ಜಿಸಿ ಮುಕ್ತಾಯಗೊಳಿಸಿರುವುದಾಗಿ ಉಪವಿಭಾಗಧಿಕಾರಿ ಗೂಟೂರು ಶಿವಪ್ಪ ತಿಳಿಸಿದ್ದಾರೆ.ಫೋಟೋ 15ಪಿವಿಡಿ3
ಮಧುಗಿರಿ ಉಪವಿಭಾಗಧಿಕಾರಿ ಗೂಟೂರು ಶಿವಪ್ಪ ಅಧ್ಯಕ್ಷತೆಯಲ್ಲಿ ತಾಲೂಕಿನ ಕೊಡಮಡಗು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸಭೆ ನಡೆಯಿತು.